ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವಂತೆ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಕ್ಲಿನ್ ಹುಬ್ಬಳ್ಳಿ- ಗ್ರೀನ್ ಹುಬ್ಬಳ್ಳಿಗಾಗಿ ನಾವೆಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ನಮ್ಮ ನಡಿಗೆ ಸ್ವಚ್ಛತೆಯೆಡೆಗೆ ಕೀಪ್ ಸಿಟಿ ಕ್ಲೀನ್ ಆ್ಯಂಡ್ ಗ್ರೀನ್ ಎಂಬ ಧ್ಯೇಯದೊಂದಿಗೆ ನಾವೆಲ್ಲರೂ ಮುನ್ನಡೆಯೋಣ. ಹುಬ್ಬಳ್ಳಿಯ ಸ್ವಚ್ಛತೆಗೆ ಆದ್ಯತೆ ನೀಡೋಣ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಇಲ್ಲಿನ ಪಾಟೀಲ ಲೇಔಟ್ ಉದ್ಯಾನದಲ್ಲಿ ಭಾನುವಾರ ಸ್ವಚ್ಛತಾ ಆಂದೋಲನ ಪರಿವಾರ ತಂಡದಿಂದ ನಡೆದ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಸ್ವಚ್ಛತೆ ನಡೆಸಿ, ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವಂತೆ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಕ್ಲಿನ್ ಹುಬ್ಬಳ್ಳಿ- ಗ್ರೀನ್ ಹುಬ್ಬಳ್ಳಿಗಾಗಿ ನಾವೆಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.
ಪಾಲಿಕೆ ಸದಸ್ಯೆ ಉಮಾ ಮುಕುಂದ, ಪ್ರಮುಖರಾದ ಚಂದ್ರಶೇಖರ ಬೆಳವಡಿ, ಸಿ.ಕೆ. ಕೆರೂರ, ಪರಮಾನಂದ ಮಹಾಜನ, ರಮೇಶ ಜೊತವಾನಿ, ಪ್ರವೀಣ್ ಬೂರಟ್, ಈಶ್ವರಗೌಡ ಪಾಟೀಲ, ಗೋಪಾಲ ಕಾಟವೆ, ವಿನೋದ ರೇವಣಕರ, ವಿನೋದ ಪಾಟವಾ, ವೈ.ಬಿ. ಪಾಟೀಲ, ವಿಜಯ ಪೂಜಾರ, ಈರಣ್ಣ ಕೂರಡಗಿ, ನಿಖಿಲ್ ವಾಂಘಿ, ಮನೋಜ ಹಬ್ಬು, ಸೋಮನಾಥ ಮೆಹರವಾಡೆ, ಅಖಿಲ್ ರೇವಣಕರ, ರಘುರಾಜ್ ಇಬ್ರಾಹಿಂಪುರ, ಪ್ರೀತಂ ಇರಕಲ್, ಮೇಘಾ ಚಾಗಮಪುರ, ತಾನವಿ ಮೆಹರವಾಡೆ, ಗೀತಾ ಕುಬಸದ ಸೇರಿದಂತೆ ಹಲವರಿದ್ದರು.