ಭಗೀರಥ ಹಾಕಿಕೊಟ್ಟ ಸಾಧನೆಯ ದಾರಿಯಲ್ಲಿ ಸಾಗೋಣ

| Published : May 05 2025, 12:50 AM IST

ಭಗೀರಥ ಹಾಕಿಕೊಟ್ಟ ಸಾಧನೆಯ ದಾರಿಯಲ್ಲಿ ಸಾಗೋಣ
Share this Article
  • FB
  • TW
  • Linkdin
  • Email

ಸಾರಾಂಶ

ಭಗೀರಥ ಅವರ ಜಯಂತಿ ಆಚರಣೆಯನ್ನು ಉಪ್ಪಾರ ಸಮಾಜ ಹಾಗೂ ಎಲ್ಲರೂ ಸೇರಿ ಆಚರಿಸುತ್ತಾರೆ. ಈ ಜಯಂತಿ ಮೂಲಕ ಎಲ್ಲರಲ್ಲೂ ಆದರ್ಶ ಮೂಡಲಿ. ಯಾವುದೇ ಕೆಲಸ ಮಾಡಬೇಕಾದರೂ ಸತತವಾಗಿ ಪ್ರಯತ್ನ ಮಾಡಿದರೆ ಯಶಸ್ಸು ಸಾಧ್ಯ ಎನ್ನುವುದನ್ನು ಭಗೀರಥ ತೋರಿಸಿಕೊಟ್ಟಿದ್ದಾರೆ. ಅವರ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಎಲ್ಲಾರು ಪ್ರಯತ್ನ ಮೈಗೂಡಿಸಿಕೊಂಡು ಯಶಸ್ವಿ ಆಗಲಿ ಎಂದು ಹಾರೈಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಭಾನುವಾರ ಶ್ರೀ ಭಗೀರಥ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಆಕರ್ಷಕ ಮೆರವಣಿಗೆಗೆ ಸಂಸದ ಶ್ರೇಯೆಸ್ ಎಂ. ಪಟೇಲ್, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಎಡಿಸಿ ಕೆ.ಟಿ. ಶಾಂತಲಾ ಹಾಗೂ ಉಪ್ಪಾರ ಜನಾಂಗದ ನೀಲಪ್ಪ ಇತರರು ಉಪಸ್ಥಿತರಿದ್ದರು.

ನಂತರ ಸಂಸದರು ಮಾಧ್ಯಮದೊಂದಿಗೆ ಮಾತನಾಡಿ, ಸಮಾಜದ ಏಳಿಗೆಗಾಗಿ ನಾವುಗಳೆಲ್ಲಾ ಜಿಲ್ಲಾಡಳಿತ, ರಾಜ್ಯ ಸರಕಾರ, ಮಹಾನಗರ ಪಾಲಿಕೆ ಆಗಿರಬಹುದು ಎಲ್ಲರೂ ಸರ್ವೋತ್ತಮ ಅಬಿವೃದ್ಧಿಗೆ, ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಕೆಲಸ ಮಾಡುತ್ತೇವೆ. ಭಗೀರಥ ಅವರು ಹಾಕಿಕೊಟ್ಟ ಸಾಧನೆಯ ದಾರಿಯಲ್ಲಿ ನಾವುಗಳೆಲ್ಲಾ ಸಾಗೋಣ. ಇದನ್ನ ಮುಂದಿನ ಪೀಳಿಗೆಗೂ ತಿಳಿಸುವ ಕೆಲಸ ಮಾಡಬೇಕು ಎಂದರು. ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಜನಗಣತಿ ಕುರಿತು ಕಳೆದ ಒಂದು ದಿನಗಳ ಹಿಂದೆ ಹಾಸನ ಜಿಲ್ಲೆಯಲ್ಲಿ ಅಧಿಕಾರಿಗಳ ಸಭೆ ನಡೆದಿದ್ದು, ಜನಗಣತಿ ವೇಳೆ ಎಲ್ಲರಿಗೂ ನ್ಯಾಯ ಸಿಗುವ ರೀತಿಯಲ್ಲಿ ಗಣತಿ ನಡೆಯುತ್ತದೆ. ಇದಕ್ಕೆ ನಾವುಗಳೆಲ್ಲಾ ಬೆಂಬಲ ಕೊಡಬೇಕು ಎಂದು ಹೇಳಿದರು. ಇದೇ ವೇಳೆ ಭಗೀರಥ ಜಯಂತಿಯ ಶುಭಾಶಯಗಳನ್ನು ಎಲ್ಲರಿಗೂ ಕೋರಿದರು.

ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಮಾತನಾಡಿ, ಭಗೀರಥ ಅವರ ಜಯಂತಿ ಆಚರಣೆಯನ್ನು ಉಪ್ಪಾರ ಸಮಾಜ ಹಾಗೂ ಎಲ್ಲರೂ ಸೇರಿ ಆಚರಿಸುತ್ತಾರೆ. ಈ ಜಯಂತಿ ಮೂಲಕ ಎಲ್ಲರಲ್ಲೂ ಆದರ್ಶ ಮೂಡಲಿ. ಯಾವುದೇ ಕೆಲಸ ಮಾಡಬೇಕಾದರೂ ಸತತವಾಗಿ ಪ್ರಯತ್ನ ಮಾಡಿದರೆ ಯಶಸ್ಸು ಸಾಧ್ಯ ಎನ್ನುವುದನ್ನು ಭಗೀರಥ ತೋರಿಸಿಕೊಟ್ಟಿದ್ದಾರೆ. ಅವರ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಎಲ್ಲಾರು ಪ್ರಯತ್ನ ಮೈಗೂಡಿಸಿಕೊಂಡು ಯಶಸ್ವಿ ಆಗಲಿ ಎಂದು ಹಾರೈಸಿದರು.

ಇದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಚ್.ಪಿ. ತಾರಾನಾಥ್, ಸಮುದಾಯದ ಮುಖಂಡರು, ಇತರರು ಉಪಸ್ಥಿತರಿದ್ದರು.