ಮದಕರಿ ನಾಯಕರ ತತ್ವ ಸಿದ್ಧಾಂತಗಳನ್ನು ಪಾಲಿಸೋಣ

| Published : Oct 19 2025, 01:00 AM IST

ಸಾರಾಂಶ

ದೇವನಹಳ್ಳಿ: ವೀರ ಮದಕರಿ ನಾಯಕನ ಸ್ವಾಭಿಮಾನದ ಆದರ್ಶ ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಪಾಲಿಸಬೇಕು ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹಯ್ಯ ಹೇಳಿದರು.

ದೇವನಹಳ್ಳಿ: ವೀರ ಮದಕರಿ ನಾಯಕನ ಸ್ವಾಭಿಮಾನದ ಆದರ್ಶ ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಪಾಲಿಸಬೇಕು ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹಯ್ಯ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ವೀರ ಮದಕರಿ ನಾಯಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ೨೮೩ನೇ ಜಯಂತಿ ಕಾಯ್ರಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನೆಮನಗಳಲ್ಲಿ ಮದಕರಿ ನಾಯಕರ ಚರಿತ್ರೆಯನ್ನು ಸ್ಮರಿಸಬೇಕು. ಅವರ ಬದುಕಿನ ಸಾರಂಶ ಅರಿತು ನಾವೆಲ್ಲಾ ಬದುಕಬೇಕು ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಬಿ.ಮಂಜುನಾಥ್ ಮಾತನಾಡಿ, ಕರ್ನಾಟಕದಲ್ಲಿ ಎಲ್ಲಾ ಜಯಂತಿಗಳನ್ನು ಸರ್ಕಾರ ನಡೆಸುತ್ತದೆ. ಆದರೆ ನಮ್ಮ ತಳ ಸಮುದಾಯದ ವೀರಮದಕರಿ ನಾಯಕರ ಜಯಂತಿ ಆಚರಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಆ ಧೀಮಂತ ನಾಯಕರ ಜಯಂತಿ ಸರ್ಕಾರವೇ ಆಚರಿಸುವಂತಾಗಬೇಕು. ಮಹಾರಾಜರ ಆಸ್ತಿಗಳನ್ನು ಪ್ರಜೆಗಳಿಗೆ ಹಂಚಬೇಕು ಹಾಗೂ ಅರಮನೆ ಮ್ಯೂಸಿಯಂಗಳನ್ನು ಖಾಸಗಿ ವ್ಯಕ್ತಿಗಳ ಪಾಲಾಗದಂತೆ ತಡೆಯಬೇಕು. ಇನ್ನೂ ಕೆಲವು ಸಂಪತ್ತನ್ನು ಸರ್ಕಾರ ವಶಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹಯ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ದೊಡ್ಡಬಳ್ಳಾಪುರ ಸೋಮಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಬಿ.ಮಂಜುನಾಥ್ , ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ, ಕಾರಹಳ್ಳಿ ಮುನಿರಾಜು, ಮಂಜುನಾಥ್, ಮೂರ್ತಿ, ಮಹಿಳಾ ಘಟಕದ ಜಯಲಕ್ಷ್ಮೀ, ಮಂಜುನಾಥ್, ಮಲ್ಲೇಪುರ ನರಸಿಂಹಮೂರ್ತಿ, ಕೋರಮಮಗಲ ನರಸಿಂಹಮೂರ್ತಿ, ಅಮಾನಿಕೆರೆ ರವಿ, ಬೆಟ್ಟೇನಹಳ್ಳಿ ರವಿ, ಸಯದ್ ಸಾಬ್, ಎಲ್. ವೆಂಕಟೇಶ್ ಇತರರಿದ್ದರು.

೧೮ ದೇವನಹಳ್ಳಿ ಚಿತ್ರಸುದ್ದಿ: ೦೨

ದೇವನಹಳ್ಳಿಯಲ್ಲಿ ವೀರ ಮದಕರಿ ನಾಯಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ೨೮೩ನೇ ಜಯಂತಿ ಆಚರಿಸಿದ ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಇತರರಿದ್ದರು.