ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗೈದ ಎಲ್ಲ ಮಹನೀಯರನ್ನು ಸ್ಮರಿಸೋಣ

| Published : Aug 17 2025, 01:42 AM IST / Updated: Aug 17 2025, 01:43 AM IST

ಸಾರಾಂಶ

ನಮ್ಮ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯದ ಸಂಭ್ರಮಾಚರಣೆಯ ಜೊತೆಗೆ ಸಂರಕ್ಷಣೆಯ ಕರ್ತವ್ಯವನ್ನು ನಾವು ನಿರ್ವಹಿಸೋಣ

ಕನ್ನಡಪ್ರಭ ವಾರ್ತೆ ಮಲ್ಕುಂಡಿ

ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗಳ ಮೂಲಕ ನಮ್ಮ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯ ದಿನವಾದ ಇಂದು ನಾವು ಅಂತಹ ಮಹನೀಯರನ್ನು ಸ್ಮರಿಸೋಣ ಎಂದು ದುಗ್ಗಹಳ್ಳಿ ಗ್ರಾಪಂ ಅಧ್ಯಕ್ಷ ಕೊಂಗಳ್ಳಿ ಬಿ. ಶಂಕರ್ ಹೇಳಿದರು.

ಗ್ರಾಪಂ ಆವರಣದಲ್ಲಿ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಈ ಪವಿತ್ರ ದಿನ ನಮ್ಮ ದೇಶದ ಶೌರ್ಯ ತ್ಯಾಗ ಮತ್ತು ಏಕತೆಗೆ ನಮನ ಸಲ್ಲಿಸುವ ಕ್ಷಣವಾಗಿದೆ, ನಿರಂತರ ಹೋರಾಟ ತ್ಯಾಗ ಬಲಿದಾನಗಳ ಮೂಲಕ ನಮ್ಮ ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯದ ಸಂಭ್ರಮಾಚರಣೆಯ ಜೊತೆಗೆ ಸಂರಕ್ಷಣೆಯ ಕರ್ತವ್ಯವನ್ನು ನಾವು ನಿರ್ವಹಿಸೋಣ ಎಂದರು.

ಸದಸ್ಯರಾದ ಗುರುಪ್ರಸಾದ್, ಚಿನ್ನಸ್ವಾಮಿ ನಾಯಕ, ಅಭಿವೃದ್ಧಿ ಅಧಿಕಾರಿ ಹೇಮ, ಜ್ಯೋತಿ, ಪಂಚಾಯಿತಿ ನೌಕರರು, ಆಶಾ ಕಾರ್ಯಕರ್ತರು ಇದ್ದರು. ಎಂ ಕೊಂಗಳ್ಳಿ ಸರ್ಕಾರಿ ಕಿರಿಯ ಶಾಲೆ - ಸಮೀಪದ ಎಂ. ಕೊಂಗಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದುಗ್ಗಹಳ್ಳಿ ಗ್ರಾಪಂ ಅಧ್ಯಕ್ಷ ಬಿ. ಶಂಕರ್ ಧ್ವಜಾರೋಹಣ ನೆರವೇರಿಸಿದರು.

ಗ್ರಾಪಂ ಸದಸ್ಯರಾದ ಗುರುಪ್ರಸಾದ್, ವೃಷಭೇಂದ್ರ, ಕೂಸಮ್ಮ, ಚಿನ್ನಸ್ವಾಮಿನಾಯಕ, ಶಿವಣ್ಣ, ಬಸವರಾಜ್, ಮಂಜುನಾಥ್, ಸುಧಾಮಣಿ, ಪಿಡಿಓ ಹೇಮಾವತಿ, ಕಾರ್ಯದರ್ಶಿ ಬಸವಣ್ಣ, ಎಸ್.ಡಿಎಂಸಿ ಅಧ್ಯಕ್ಷ ನಾಗೇಶ್, ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಇದ್ದರು.