ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮೂರು ದಶಕಗಳ ನಂತರ ದಾವಣಗೆರೆಯಲ್ಲಿ ಫೆ.3 ಮತ್ತು 4ರಂದು ನಡೆಯುವ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮಟ್ಟದ 38ನೇ ಸಮ್ಮೇಳನಕ್ಕೆ ರಾಜ್ಯದ ವಿವಿಧೆಡೆಯಿಂದ ಬರುವ ಪತ್ರಕರ್ತರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುವ ರೀತಿ ಸಮ್ಮೇಳನವನ್ನು ಎಲ್ಲರೂ ಒಗ್ಗಟ್ಟಿನಿಂದ ಸೇರಿ ಮಾಡೋಣ ಎಂದು ಸಮ್ಮೇಳನದ ಗೌರವಾಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕರೆ ನೀಡಿದರು.ನಗರದ ಜೆಜೆಎಂ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,
ಪರ ಜಿಲ್ಲೆಯಿಂದ ಬರುವ ಪತ್ರಕರ್ತರಿಗೆ ಊಟ, ವಸತಿ, ಸಾರಿಗೆ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದಾರೆ. ಒಳ್ಳೆಯ ಸಮ್ಮೇಳನಕ್ಕೆ ಇಲ್ಲಿನ ಪತ್ರಕರ್ತರ ಸಹಭಾಗಿತ್ವ ಪ್ರಮುಖ ಪಾತ್ರ ವಹಿಸುತ್ತಿದ್ದು, ಎಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಿ ಸಮ್ಮೇಳನದ ಯಶಸ್ಸಿಗೆ ಶ್ರಮಿಸೋಣ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಮಾತನಾಡಿ, ಸಮ್ಮೇಳನ ಪೂರ್ವಭಾವಿಯಾಗಿ 2 ಸಭೆ ಮಾಡಿದ್ದು, 3 ತಂಡ ರಚಿಸಿದೆ. ಒಂದು ತಂಡ ಸರ್ಕಾರಿ ವ್ಯಾಪ್ತಿಯ ಗೆಸ್ಟ್ ಹೌಸ್ ನಲ್ಲಿ 45ರಿಂದ 50 ಕೊಠಡಿಗಳು ವಿಐಪಿಗಳಿಗೆ ವಸತಿಗೆ ಪಟ್ಟಿ ಮಾಡಲಾಗಿದೆ. ಕ್ರೀಡಾ ವಸತಿ, ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ಗಳಲ್ಲಿ 200 ಕೊಠಡಿಗಳು, ಕೊಂಡಜ್ಜಿಯಲ್ಲಿ 70ರಿಂದ 75 ಕೊಠಡಿಗಳು, ದಾವಿವಿಯಲ್ಲಿ 30 ಕೊಠಡಿಗಳು ಸೇರಿ 600 ಕೊಠಡಿಗಳ ಕಲ್ಪಿಸಲು ವ್ಯವಸ್ಥೆ ಮಾಡಲಿದೆ ಎಂದು ಹೇಳಿದರು.
ಜಿಪಂ ಸಿಇಒ ಸುರೇಶ್ ಇಟ್ನಾಳ್ ಮಾತನಾಡಿ, ಸಮ್ಮೇಳನ ಸ್ಥಳದಲ್ಲಿ ಸ್ಟಾಲ್ ಹಾಕಿ, ಸ್ವಸಹಾಯ ಸಂಘಗಳಿಂದ ಸಂತೆ, ನರೇಗಾ, ಸ್ವಚ್ಛತಾ ಅಭಿಯಾನ ಸೇರಿ ವಿವಿಧ ಇಲಾಖೆಗಳಿಂದ ಜಾಗೃತಿ ಮೂಡಿಸುವ ಜೊತೆಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗುವುದು. ಸಮ್ಮೇಳನಕ್ಕೆ ಜಿಪಂ, ತಾಪಂಗಳಿಂದ ಎಲ್ಲಾ ಸಹಕಾರ ನೀಡಲಾಗುವುದು. ಸ್ಮರಣ ಸಂಚಿಕೆ ವಿಚಾರವಾಗಿ ಸಂಘದವರು ಮಾಡಿದ ಮನವಿಗೆ ಪೂರಕವಾಗಿ ಸ್ಪಂದಿಸುತ್ತೇವೆ. ಸಚಿವರ ಮಾರ್ಗದರ್ಶನದಲ್ಲಿ ಎಲ್ಲರೂ ಸೇರಿ, ಸಮ್ಮೇಳನದ ಯಶಸ್ಸಿಗೆ ಶ್ರಮಿಸಿ ಮಾದರಿ ಸಮ್ಮೇಳನ ದಾವಣಗೆರೆಯಲ್ಲಿ ಆಗುವಂತೆ ಮಾಡೋಣ ಎಂದರು.ಎಸ್ಪಿ ಉಮಾ ಪ್ರಶಾಂತ, ಎಡಿಸಿ ಪಿ.ಎನ್.ಲೋಕೇಶ, ಪಾಲಿಕೆ ಆಯುಕ್ತೆ ರೇಣುಕಾ, ದೂಡಾ ಆಯುಕ್ತ ಬಸವನಗೌಡ ಕೋಟೂರು, ಎಸಿ ದುರ್ಗಾಶ್ರೀ, ತಹಸೀಲ್ದಾರ್ ಡಾ.ಅಶ್ವತ್, ಪಶು ಸಂಗೋಪನೆ ಡಿಡಿ ಡಾ.ಚಂದ್ರಶೇಖ ರ ಸುಂಕದ್, ಸ್ಮಾಟ್೯ ಸಿಟಿ ಎಂಡಿ ವೀರೇಶ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಉಪ ನಿರ್ದೇಶಕ ರವಿಚಂದ್ರ, ವಾರ್ತಾ ಅಧಿಕಾರಿ ಧನಂಜಯ, ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಬಿ.ಲೋಕೇಶ, ಜಿಲ್ಲಾಧ್ಯಕ್ಷ ಮಂಜುನಾಥ ಏಕಬೋಟೆ, ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್, ಎನ್.ವಿ.ಬದರೀನಾಥ, ಜೆ.ಎಸ್.ವೀರೇಶ, ಎಚ್.ಎನ್.ಪ್ರಕಾಶ, ರಾಜ್ಯ ಸಮಿತಿ ಸದಸ್ಯ ಕೆ.ಚಂದ್ರಪ್ಪ, ರಾಷ್ಟ್ರೀಯ ಸಮಿತಿ ಸದಸ್ಯ ಎಸ್.ಕೆ.ಒಡೆಯರ್, ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ, ನಿಕಟ ಪೂರ್ವ ಅಧ್ಯಕ್ಷ ಬಿ.ಎನ್.ಮಲ್ಲೇಶ, ಎಚ್.ಬಿ.ಮಂಜುನಾಥ, ಬಾ.ಮ.ಬಸವರಾಜಯ್ಯ, ತಾರನಾಥ, ಸಿ.ವರದರಾಜ, ಎ.ಎನ್.ನಿಂಗಪ್ಪ, ಡಿ.ರಂಗನಾಥ್ ರಾವ್, ಮಂಜುನಾಥ ಗೌರಕ್ಕಳವರ, ಸದಾನಂದ ಹೆಗಡೆ, ಎಂ.ಬಿ.ನವೀನ್, ಮಂಜು ಯಳನಾಡು, ಬಸವರಾಜ ದೊಡ್ಡಮನಿ, ನಾಗರಾಜ ಬಡದಾಳ, ರಮೇಶ ಜಹಗೀರದಾರ್, ಎಂ.ಶಶಿಕುಮಾರ, ಎಂ.ವೈ.ಸತೀಶ, ತೇಜಸ್ವಿನಿ ಪ್ರಕಾಶ, ಮಧು ನಾಗರಾಜ, ದೇವಿಕಾ ಸುನಿಲ್, ಭಾರತಿ, ರುದ್ರಮ್ಮ ಸೇರಿ ಪತ್ರಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಮೈಸೂರು, ಮಂಗಳೂರು, ಕಲಬುರಗಿ , ವಿಜಯಪುರ ಸೇರಿ ವಿವಿಧ ಜಿಲ್ಲೆ ಸಮ್ಮೇಳನಗಳು ಒಂದಕ್ಕಿಂತ ಒಂದು ಭಿನ್ನವಾಗಿ ನೆನಪಿನಲ್ಲಿ ಉಳಿಯುವಂತಾಗಿವೆ. ಅದೇ ರೀತಿ ನಾಡಿನ ಕೇಂದ್ರ ಬಿಂದು ದಾವಣಗೆರೆಯಲ್ಲಿ ಮೂರು ದಶಕದ ನಂತರದ ಸಮ್ಮೇಳನ ಸದಾ ಹಸಿರಾಗಿ ಮನದಲ್ಲಿ ಉಳಿಯುವಂತೆ ಎಲ್ಲರೂ ಸಹಕರಿಸಬೇಕು. ರಾಜ್ಯದಿಂದಷ್ಟೇ ಅಲ್ಲ, ಬಾಂಗ್ಲಾ, ಬರ್ಮಾ, ಶ್ರೀಲಂಕಾ ಅತಿಥಿಗಳು ಸಮ್ಮೇಳನಕ್ಕೆ ಬರಲಿದ್ದಾರೆ.ಶಿವಾನಂದ ತಗಡೂರು, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ