ಸಾರಾಂಶ
- ಸಿಎಂ ಬೆನ್ನಿಗೆ ನಿಂತವರು ಶಿವಶಂಕರಪ್ಪ: ಶಿವರತನ್ ಹೇಳಿಕೆ
- - - ಕನ್ನಡಪ್ರಭ ವಾರ್ತೆ, ದಾವಣಗೆರೆಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕುಟುಂಬದ ಮಧ್ಯೆ ಅವಿನಾಭಾವ ಸಂಬಂಧವಿದೆ. ದಾವಣಗೆರೆಗೆ ಅತಿಥಿ ಆಗಿರುವ ಜಿ.ಬಿ.ವಿನಯಕುಮಾರ ಈ ದೊಡ್ಡವರ ಬಗ್ಗೆ ಮಾತನಾಡಿದರೆ ತಾನೂ ದೊಡ್ಡವನಾಗುತ್ತೇನೆಂಬ ಭ್ರಮೆಯಿಂದ ಹೊರಬರಲಿ ಎಂದು ಕಾಂಗ್ರೆಸ್ ಯುವ ಘಟಕ ಮುಖಂಡ ಶಿವರತನ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ನಂತರ ದಾವಣಗೆರೆಯಲ್ಲಿ ಎಲ್ಲಿಯೂ ಕಾಣದ ಜಿ.ಬಿ.ವಿನಯಕುಮಾರ ಇದೀಗ ದಿಢೀರನೇ ಪ್ರತ್ಯಕ್ಷರಾಗಿ, ಸಿದ್ದರಾಮಯ್ಯ-ಶಾಮನೂರು ಕುಟುಂಬದ ವಿಚಾರವಾಗಿ ಟೀಕಿಸುತ್ತಿರುವುದು ಸರಿಯಲ್ಲ ಎಂದರು.ಮುಖ್ಯಮಂತ್ರಿ ಬದಲಾವಣೆ ಮಾತುಗಳು ಬಂದಾಗಲೆಲ್ಲಾ ಸಿಎಂ ಸಿದ್ದರಾಮಯ್ಯ ಪರ ಬಹಿರಂಗವಾಗಿ ಬೆಂಬಲ ಘೋಷಿಸಿ, ಸಿದ್ದರಾಮಯ್ಯ ಬೆನ್ನಿಗೆ ನಿಂತವರು ಶಾಮನೂರು ಶಿವಶಂಕರಪ್ಪ. ಮೈಸೂರಿನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಭಾಗವಹಿಸಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಅಧಿಕ ಮುಖಂಡರು, ಕಾರ್ಯಕರ್ತರಿಗೆ ಮೈಸೂರಿಗೆ ಹೋಗಿ ಬರಲು ವ್ಯವಸ್ಥೆ ಮಾಡಿದ್ದಾರೆ. ದಾವಣಗೆರೆ ಮನೆ ಮಗ ಅಂತಾ ಹೇಳಿಕೊಳ್ಳುವ ವಿನಯಕುಮಾರ ದಾವಣಗೆರೆಗಾಗಲೀ, ಇಲ್ಲಿನ ರಾಜಕಾರಣಕ್ಕಾಗಲೀ ಅತಿಥಿಯಷ್ಟೇ. ಇಂತಹ ವ್ಯಕ್ತಿ ಯಾವುದೇ ಪೂರ್ವಾಪರ ಮಾಹಿತಿ ಇಲ್ಲದೇ, ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.
ಸಂಸತ್ತಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆ, ರೈಲ್ವೆ ಯೋಜನೆ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ, ಐಟಿ ಬಿಟಿ, ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಅನೇಕ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಧ್ವನಿ ಎತ್ತುತ್ತಿದ್ದಾರೆ. ದಾವಣಗೆರೆ ಕ್ಷೇತ್ರದ ಬಗ್ಗೆ ಮೊದಲ ಬಾರಿಗೆ ಸಂಸದರೊಬ್ಬರು ಕೇಂದ್ರದ ಗಮನ ಸೆಳೆದು, ಕೇಂದ್ರ ಸ್ಪಂದಿಸುವಂತೆ ಜನಪರ ಕೆಲಸ ಮಾಡುತ್ತಿರುವ ಡಾ.ಪ್ರಭಾ ಮಲ್ಲಿಕಾರ್ಜುನರ ಬಗ್ಗೆ ಇಲ್ಲಸಲ್ಲದ ಟೀಕೆ, ಆರೋಪ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.ಕಾಂಗ್ರೆಸ್ ಯುವ ಮುಖಂಡರಾಜ ಅಜಿತ್ ಆಲೂರು, ಅಂಕಿತ್ ಮೊಯ್ಲಿ ಇದ್ದರು.
- - - -11ಕೆಡಿವಿಜಿ2:ದಾವಣಗೆರೆಯಲ್ಲಿ ಭಾನುವಾರ ಯುವ ಕಾಂಗ್ರೆಸ್ ಮುಖಂಡ ಶಿವರತನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.