ಸಾರಾಂಶ
- ಜಿಲ್ಲಾಡಳಿತ ನೇತೃತ್ವದ ವಿಶ್ವಕರ್ಮ ಮಹೋತ್ಸವದಲ್ಲಿ ಸಿ.ಪಿ.ಮಾಯಾಚಾರಿ ಸಲಹೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆದೇಶದ ಕಲೆ, ಸಂಸ್ಕೃತಿ, ಜನರ ಬದುಕಿಗೆ ತಮ್ಮದೇ ಕೊಡುಗೆ ನೀಡುತ್ತಾ ಬಂದ ವಿಶ್ವಕರ್ಮ ಸಮಾಜವು ಸಂಘಟಿತವಾಗಿ ತನ್ನ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು ಎಂದು ಧಾರವಾಡದ ನಿವೃತ್ತ ವಾರ್ತಾ ಅಧಿಕಾರಿ ಸಿ.ಪಿ. ಮಾಯಾಚಾರಿ ಹೇಳಿದರು.
ನಗರದ ಶ್ರೀ ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನದಲ್ಲಿ ಮಂಗಳವಾರ ಜಿಲ್ಲಾ ವಿಶ್ವಕರ್ಮ ಸಮಾಜ ಹಾಗೂ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ವಿಶ್ವಕರ್ಮ ಮಹೋತ್ಸವದಲ್ಲಿ ಮಾತನಾಡಿದ ಅವರು, ಇತಿಹಾಸದ ಉದ್ದಕ್ಕೂ ವಿಶ್ವಕರ್ಮ ಪರಂಪರೆಯು ಅತಿ ದೊಡ್ಡ ಪರಂಪರೆಯಾಗಿದೆ. ಅಂತಹ ಐತಿಹಾಸಿಕ ಪರಂಪರೆಯ ವಾರಸುದಾರರು ನಾವು ಎಂಬುದನ್ನು ಮರೆಯಬೇಡಿ ಎಂದರು.ಜಗತ್ತಿನ ಸೃಷ್ಟಿಕರ್ತ ಪ್ರಭು ವಿಶ್ವಕರ್ಮರು. ವೇದಗಳಲ್ಲಿ ವಿಶ್ವಕರ್ಮರ ವರ್ಣನೆ ಬಹಳ ವಿಶೇಷ ಆಗಿರುವುದನ್ನು ಗಮನಿಸಬಹುದು. ಜಗತ್ತಿಗೆ ವಿಶ್ವಕರ್ಮರ ಮೂಲಸ್ವರೂಪವನ್ನು ಪರಿಚಯಿಸಿದವರು ಋಷಿಗಳು. ವಿಶ್ವಕರ್ಮ ಸಮಾಜದ ಮುಂದಿನ ಪೀಳಿಗೆಗೆ ನಮ್ಮ ಸಮುದಾಯದ ಸಾಧನೆ, ಕೊಡುಗೆ, ಮಹತ್ವ ತಿಳಿಸಿ ಹೇಳುವ ಕೆಲಸವಾಗಬೇಕು. ವಿಶ್ವಕರ್ಮ ಕೌಶಲ್ಯಗಳನ್ನು ಉಳಿಸುವ ಕೆಲಸ ಆಗಬೇಕು. ಜೊತೆಗೆ ಸಮಾಜವು ಜಾಗೃತವಾಗಿ, ಸಂಘಟಿತವಾಗಬೇಕು. ಸಂಘಟಿತರಾಗಿ ಹೋರಾಟ ನಡೆಸಿದಾಗ ಮಾತ್ರ ಸಮುದಾಯಕ್ಕೆ ಸಿಗಬೇಕಾದ ಹಕ್ಕು, ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದು ಹೇಳಿದರು.
ಆನಗೋಡಿನ ಭಾಸ್ಕರಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಮಾಜದ ಅಧ್ಯಕ್ಷ ಬಸಾಪುರದ ನಾಗೇಂದ್ರಾಚಾರ್, ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾನಂದ, ಗೌರವಾಧ್ಯಕ್ಷ ಪೂರ್ವಾಚಾರ್, ಉಪಾಧ್ಯಕ್ಷ ಸಿದ್ದಾ ಚಾರ್, ವಿಶ್ವಕರ್ಮ ಸಮಾಜದ ವಸತಿ ನಿಲಯದ ಉಪಾಧ್ಯಕ್ಷ ಪರಮೇಶಾಚಾರ್, ಆನಂದಗೌಡ ಪಾಟೀಲ್, ಜಗನ್ನಾಥ ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾಡಿದರು. ಅನಂತರ ನಗರದ ಪ್ರಮುಖ ಬೀದಿಗಳಲ್ಲಿ ವಿಶ್ವಕರ್ಮರ ಮೂರ್ತಿಯನ್ನು ರಥದಲ್ಲಿಟ್ಟು ಪೂರ್ಣಕುಂಭ, ಮಂಗಳವಾದ್ಯ, ವಿವಿಧ ಕಲಾತಂಡಗಳು ಮೆರವಣಿಗೆ ಮಾಡಲಾಯಿತು.- - -
ಬಾಕ್ಸ್ * ಗೈರು ವರ್ತನೆಯಿಂದ ಸಮಾಜಕ್ಕೆ ಬೇಸರರಾಜ್ಯ ಸರ್ಕಾರವು ನೆಪ ಮಾತ್ರಕ್ಕೆಂಬತೆ ವಿಶ್ವಕರ್ಮ ಜಯಂತಿ ಘೋಷಣೆ ಮಾಡುವುದು, ಆಚರಿಸುವುದೇನೂ ಬೇಡ. ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಗೈರಾಗಿರುವುದರಿಂದ ಕಾರ್ಯಕ್ರಮ ನಡೆಸಿರುವುದು ನಡೆಸಿರುವುದು ನಮಗೂ ಬೇಸರ ತಂದಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಲಿ. ಇಲ್ಲದಿದ್ದರೆ ಮುಂದಿನ ವರ್ಷದಿಂದ ನಮ್ಮ ಸಮಾಜದ ಆರಾಧ್ಯ ದೈವ ವಿಶ್ವಕರ್ಮರ ಜಯಂತಿ ನಾವೇ ಸಮಾಜದಿಂದ ನಡೆಸುತ್ತೇವೆ ಎಂದು ಸಮಾಜದ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾನಂದ ಬೇಸರ ವ್ಯಕ್ತಪಡಿಸಿದರು.- - -
-17ಕೆಡಿವಿಜಿ10:ದಾವಣಗೆರೆಯಲ್ಲಿ ಮಂಗಳವಾರ ವಿಶ್ವಕರ್ಮ ಜಯಂತಿ ಸಮಾರಂಭವನ್ನು ಆನಗೋಡಿನ ಭಾಸ್ಕರಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಉದ್ಘಾಟಿಸಲಾಯಿತು.
- - - -17ಕೆಡಿವಿಜಿ11: ದಾವಣಗೆರೆಯಲ್ಲಿ ಮಂಗಳವಾರ ವಿಶ್ವಕರ್ಮ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ರಥೋತ್ಸವದಲ್ಲಿ ಸಮಾಜದ ಮುಖಂಡರು, ಅಧಿಕಾರಿಗಳು, ಸಮಾಜ ಬಾಂಧವರು ಭಾಗವಹಿಸಿದ್ದರು.