ಸ್ವಯಂ ಪ್ರೇರಿತ ರಕ್ತದಾನ ಹೆಚ್ಚಾಗಲಿ: ಸತ್ಯಣ್ಣ

| Published : Apr 02 2024, 01:05 AM IST

ಸ್ವಯಂ ಪ್ರೇರಿತ ರಕ್ತದಾನ ಹೆಚ್ಚಾಗಲಿ: ಸತ್ಯಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದು ದೇಶ ಸೇವೆಗೆ ಸಮಾನ ಎಂದು ಜಿಲ್ಲಾ ರಕ್ತನಿಧಿ ಘಟಕದ ಹಿರಿಯ ಅಧಿಕಾರಿ ಸತ್ಯಣ್ಣ ತಿಳಿಸಿದರು. ಪತಂಜಲಿ ಯೋಗ ಕೇಂದ್ರದಲ್ಲಿ ಜೆಎಸ್‌ಬಿ ಪ್ರತಿಷ್ಠಾನದ ವತಿಯಿಂದ, ಶ್ರೀ ಶಿವಕುಮಾರ ಸ್ವಾಮಿಗಳು 117ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ''ರಕ್ತದಾನ ಶಿಬಿರ'' ಉದ್ಘಾಟಿಸಿ ಮಾತನಾಡಿ, ಯುವ ಜನಾಂಗ ವರ್ಷಕ್ಕೆ 3-4 ಬಾರಿ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಬಹುದು. ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳು ಹೆಚ್ಚಾಗಿ ನಡೆಯಬೇಕು ಎಂದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದು ದೇಶ ಸೇವೆಗೆ ಸಮಾನ ಎಂದು ಜಿಲ್ಲಾ ರಕ್ತನಿಧಿ ಘಟಕದ ಹಿರಿಯ ಅಧಿಕಾರಿ ಸತ್ಯಣ್ಣ ತಿಳಿಸಿದರು. ಪತಂಜಲಿ ಯೋಗ ಕೇಂದ್ರದಲ್ಲಿ ಜೆಎಸ್‌ಬಿ ಪ್ರತಿಷ್ಠಾನದ ವತಿಯಿಂದ, ಶ್ರೀ ಶಿವಕುಮಾರ ಸ್ವಾಮಿಗಳು 117ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ''''''''''''''''ರಕ್ತದಾನ ಶಿಬಿರ'''''''''''''''' ಉದ್ಘಾಟಿಸಿ ಮಾತನಾಡಿ, ಯುವ ಜನಾಂಗ ವರ್ಷಕ್ಕೆ 3-4 ಬಾರಿ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಬಹುದು. ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳು ಹೆಚ್ಚಾಗಿ ನಡೆಯಬೇಕು ಎಂದರು.

ಶುಶ್ರೂಷಕಿ ಸರಸ್ವತಿ ಮಾತನಾಡಿ, ಬಹುತೇಕ ಜನರಲ್ಲಿ ರಕ್ತ ಕುರಿತಾಗಿ ವಿವರವಾದ ಮಾಹಿತಿ ಇಲ್ಲ, ಹೀಗಾಗಿ ಹಣ ಕೊಟ್ಟರೆ ಸಿಗುವಂತಹ ವಸ್ತು ಎಂಬ ಭಾವನೆ ಬಹುತೇಕ ಜನರ ಮನಸ್ಸಿನಲ್ಲಿದೆ. ಹಣ ಕೊಟ್ಟು ಪಡೆದ ರಕ್ತವು ಸಹ ಇನ್ನೊಬ್ಬರ ದೇಹದಿಂದ ಬಂದ ದೇಣಿಗೆ ಎಂಬ ಬಗ್ಗೆ ವಿವರವಾದ ಮಾಹಿತಿಗಳು ಸಾರ್ವಜನಿಕರಲ್ಲಿ ರವಾನೆಯಾಗಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸಿದ್ದಗಂಗಾ ಮಠದ ಲಿಂ ಡಾ. ಶ್ರೀ ಶಿವಕುಮಾರ ಸ್ವಾಮಿಗಳ 117 ನೇ ಜನ್ಮದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಲಾಯಿತು.

ಜೆಎಸ್‌ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್. ಶ್ರೀ ಶಿವಕುಮಾರ ಸ್ವಾಮೀಜಿ ಸಂಘದ ಅಧ್ಯಕ್ಷ ಬಸವರಾಜಪ್ಪ, ಮಹೇಶ, ಮಹದೇವಸ್ವಾಮಿ, ಸೋಮಣ್ಣ, ಸತೀಶ, ನಿರಂಜನ, ಪರಶಿವಮೂರ್ತಿ, ಕುಮಾರಣ್ಣ, ಬಸವಣ್ಣ, ಗಿರಿ, ರಾಚಪ್ಪ ಹಾಗೂ ಇನ್ನಿತರರು, ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಪಿ ಮಂಜುನಾಥ, ಮಾಜಿ ಸೈನಿಕ ಮಧು, ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ಸಚ್ಚಿನ್, ಡಯಾನ, ತೇಜು, ರಾಜೇಶ, ಮಹೇಶ ಮತ್ತು ಸಿಬ್ಬಂದಿ, ಜೆಎಸ್ಎಸ್ ಕಾಲೇಜು ಪ್ರಾಂಶುಪಾಲ ಹೇಮೇಶಮೂರ್ತಿ, ಪ್ರಸನ್ನ, ಮಹದೇವಸ್ವಾಮಿ ಇದ್ದರು.