ಮಹಿಳೆಯರು ಸವಾಲು ಎದುರಿಸಿ ಸಾಧನೆ ಮಾಡಲಿ: ಡಾ. ಬಸವ್ವ

| Published : Mar 10 2025, 12:18 AM IST

ಸಾರಾಂಶ

ಹಳ್ಳಿಯ ಪರಿಸದಲ್ಲಿರುವ ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ ಸಾಕಷ್ಟು ಸಮಸ್ಯೆಗಳು ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಛಲದಿಂದ ಎದುರಿಸಿ ಸಾಧಕರಾಗಬೇಕು.

ಹಿರೇಕೆರೂರು: ಮಹಿಳೆಯರು ಎಲ್ಲ ಭೇದಗಳನ್ನು ಭೇದಿಸಿ ಸಾಧಿಸುವ ಛಲ ಹೊಂದಬೇಕು ಎಂದು ಕನ್ನಡ ಉಪನ್ಯಾಸಕಿ ಡಾ. ಬಸವ್ವ ಹಮ್ಮಿಣಿಯವರ ತಿಳಿಸಿದರು.

ತಾಲೂಕಿನ ಹಂಸಭಾವಿ ಗ್ರಾಮದ ಮೃತ್ಯುಂಜಯ ವಿದ್ಯಾಪೀಠದ ಎಂಎಎಸ್‌ಸಿ ಪದವಿ ಮಹಾವಿದ್ಯಾಲಯದಲ್ಲಿ ಮಹಿಳಾ ಸಂಘ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಹಳ್ಳಿಯ ಪರಿಸದಲ್ಲಿರುವ ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ ಸಾಕಷ್ಟು ಸಮಸ್ಯೆಗಳು ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಛಲದಿಂದ ಎದುರಿಸಿ ಸಾಧಕರಾಗಬೇಕೆಂದರು. ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಎಸ್.ಎ. ತಿಪ್ಪೇಶ ಮಾತನಾಡಿ, ಹೆಣ್ಣುಮಕ್ಕಳಿಗೆ ಸಾಕಷ್ಟು ಅವಕಾಶಗಳು ಇವೆ. ಅವಕಾಶಗಳ ಸದ್ಬಳಕೆ ಮಾಡಿಕೊಂಡು ಮೌಲ್ಯಯುತ ಜೀವನವನ್ನು ಕಟ್ಟಿಕೊಳ್ಳಬೇಕೆಂದರು.ಉಪಪ್ರಾಚಾರ್ಯ ಎಂ.ಜಿ. ಬಂಡಿವಡ್ಡರ ಮಾತನಾಡಿ, ಹೆಣ್ಣುಮಕ್ಕಳು ಯಾವುದಕ್ಕೂ ಕಡಿಮೆಯಿಲ್ಲ. ಎಲ್ಲ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿದ್ದಾರೆ ಎಂದರು. ಉಪನ್ಯಾಸಕಿಯರಾದ ಡಾ. ಶೋಭಾ ಸಿ.ಕೆ., ಭಾಗ್ಯ ಕೆರೂಡಿ ಮತ್ತು ವಿದ್ಯಾರ್ಥಿನಿಯರು ಸಾಧಕ ಮಹಿಳೆಯರ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಹುಸೇನ್ ಸಾಬ್ ಕಳಗೊಂಡ, ಎಸ್.ಎಸ್. ಮಠಪತಿ, ವಾಯ್ ಕೆ ವಿರೂಪಾಕ್ಷಪ್ಪ, ರಾಜಕುಮಾರ ಸಾವಳಗಿ, ಸಂದೀಪ ಕುಲಕರ್ಣಿ, ಮಲ್ಲಿಕಾರ್ಜುನ ಕುಂಬಾರ, ಕೋಟೇಶ ಬಿ., ಸುನಿತಾ ವಾಲಿ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಇದ್ದರು.ಮಹಿಳಾ ಸಂಘದ ಸಂಚಾಲಕಿ ಪಲ್ಲವಿ ಬೋಳಕಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಶ್ವಿನಿ ಟಿ. ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಾ. ಶೋಭಾ ಸಿ.ಕೆ. ವಂದಿಸಿದರು. ಲಕ್ಷ್ಮೀ ಕೆ. ಅಂಗಡಿ ನಿರೂಪಿಸಿದರು.

ಸೌಹಾರ್ದತೆಯಿಂದ ಹೋಳಿ ಆಚರಿಸಿ

ಸವಣೂರು: ಒಬ್ಬರಿಗೊಬ್ಬರು ಬಣ್ಣ ಎರಚಿಕೊಂಡು ನಮ್ಮಲ್ಲಿರುವ ಅಹಂಕಾರವನ್ನು ಕಡಿಮೆ ಮಾಡಿ, ಸಂತೋಷದಿಂದ ಮುಂದೆ ಸಾಗುವ ದೃಷ್ಟಿ ಇಟ್ಟುಕೊಂಡು ಹೋಳಿ ಹಬ್ಬ ಆಚರಿಸಲಾಗುತ್ತದೆ ಎಂದು ಶಿಗ್ಗಾಂವ ಡಿವೈಎಸ್ಪಿ ಕೆ.ವಿ. ಗುರುಶಾಂತಪ್ಪ ಹೇಳಿದರು.ಹೋಳಿ ಹಾಗೂ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ವಿಠ್ಠಲ ಕಲ್ಯಾಣ ಮಂಟಪದಲ್ಲಿ ಪೊಲೀಸ್‌ ಇಲಾಖೆ ವತಿಯಿಂದ ನಡೆದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು. ಸೌಹಾರ್ದಯುತವಾಗಿ ಹೋಳಿ ಹಬ್ಬ ಆಚರಿಸೋಣ. ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡಬೇಡಿ. ಬಣ್ಣವನ್ನು ಒತ್ತಾಯಪೂರ್ವಕವಾಗಿ ಯಾರಿಗೂ ಎರಚುವುದು ಹಾಗೂ ಬೈಕ್ ಸವಾರರಿಗೆ ಬಣ್ಣ ಎರಚುವುದು ತಪ್ಪು. ಯಾರಾದರೂ ತಪ್ಪು ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.ಸವಣೂರು ಠಾಣೆ ಆರಕ್ಷಕ ನಿರೀಕ್ಷಕ ಆನಂದ ಒನಕುದ್ರೆ ಮಾತನಾಡಿ, ಪರಿಶುದ್ಧ ಬಣ್ಣ ಬಳಸಿ, ಬೈಕ್‌ಗಳಲ್ಲಿ ಕರ್ಕಶ ಶಬ್ದ ಅಳವಡಿಸಬೇಡಿ ಎಂದರು.

ಗಣ್ಯರಾದ ಅಬ್ದುಲ್‌ಗನಿ ಫರಾಶ ಮಾತನಾಡಿ, ಪಟ್ಟಣದಲ್ಲಿ ಹಿಂದೂ-ಮುಸ್ಲಿಮರು ಅನ್ಯೋನ್ಯತೆಯಿಂದ ಇದ್ದಾರೆ. ರಂಜಾನ್ ಇರುವುದರಿಂದ ಸಂಜೆ ನಮಾಜ್ ಮಾಡಲು ಮಸೀದಿಗೆ ತೆರಳಲು ಹಿಂದೂಗಳು ಸಹಕರಿಸಬೇಕು ಎಂದು ಕೋರಿದರು.ಪಟ್ಟಣದಲ್ಲಿ ಮಾ. 19ರಂದು ಕಾಮದಹನ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಗ್ರೇಡ್‌-2 ತಹಸೀಲ್ದಾರ್‌ ಗಣೇಶ ಸವಣೂರ, ಪುರಸಭೆ ಮುಖ್ಯಾಧಿಕಾರಿ ಎನ್.ಎಂ. ಹಾದಿಮನಿ, ಪ್ರಮುಖರಾದ ಪಾಂಡುರಂಗ ಮಹೇಂದ್ರಕರ, ಉಮೇಶ್ ಕಲ್ಮಠ ಇದ್ದರು.