ಸಾರಾಂಶ
ಡಾ. ಅಂಬೇಡ್ಕರ್ ಆಶಯದಂತೆ ಲಿಂಗತಾರತಮ್ಯ ತೋರದು ಅನೇಕ ಮಹಿಳೆಯರ ಪರ ಕಾನೂನುಗಳಿದ್ದರೂ ಕೂಡಾ ಸಂಪೂರ್ಣ ಅನುಷ್ಠಾನಗೊಳ್ಳಲು ಮೀನಮೇಷ ಎಣಿಸುವಂತಾಗಿದೆ
ಗದಗ: 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಬಸವಣ್ಣನವರು ಸೇರಿದಂತೆ ಅನೇಕ ಶರಣರು, ಮಹಿಳೆಯರಿಗೂ ಸಮಾನತೆ ಬಗ್ಗೆ ಪ್ರತಿಪಾದಿಸಿದರು, ಈಗಲೂ ಡಾ. ಅಂಬೇಡ್ಕರ್ ಆಶಯದಂತೆ ಲಿಂಗತಾರತಮ್ಯ ತೋರದು ಅನೇಕ ಮಹಿಳೆಯರ ಪರ ಕಾನೂನುಗಳಿದ್ದರೂ ಕೂಡಾ ಸಂಪೂರ್ಣ ಅನುಷ್ಠಾನಗೊಳ್ಳಲು ಮೀನಮೇಷ ಎಣಿಸುವಂತಾಗಿದೆ ಎಂದು ಮುಂಡರಗಿ ತಾಲೂಕಿನ ಮೇವುಂಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಜ್ಯೋತಿ ಗಣಪ್ಪನವರ ಹೇಳಿದರು.
ಅವರು ಗದಗ ತಾಲೂಕು ಕಸಾಪ ಆಶ್ರಯದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಸ್ತ್ರೀ ಸಾಧನೆಯ ಸಿರಿ ಕಾರ್ಯಕ್ರಮದಲ್ಲಿ ಮಹಿಳೆ ಮತ್ತು ಶಿಕ್ಷಣ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಶೋಭಾ ಆಡಿನ ಮುಂತಾದವರು ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಪಡೆದ ಸವಿತಾ ಅಂಗಡಿ, ಶೋಭಾ ಯಕ್ಕೇಲಿ ತಮ್ಮ ಅನುಭವ ಹಂಚಿಕೊಂಡರು.ಅಧ್ಯಕ್ಷತೆ ವಹಿಸಿದ್ದ ಗದಗ ತಾಲೂಕು ಕಸಾಪ ಅಧ್ಯಕ್ಷೆ ಡಾ. ರಶ್ಮಿ ಅಂಗಡಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಮಂಜುಳಾ ವೆಂಕಟೇಶಯ್ಯ ಮತ್ತು ನೀಲಮ್ಮ ಅಂಗಡಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿದವು.
ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಕತೆಗಾರ ಬಸವರಾಜ ಗಣಪ್ಪನವರ, ಕೆ.ಎಚ್. ಬೇಲೂರ, ಶಾಂತಾ ಗಣಪ್ಪನವರ, ಭಾರತಿ ಕೋಟಿ, ಪುಷ್ಪಾ ಭಂಡಾರಿ, ಕಿಶೋರಬಾಬು ನಾಗರಕಟ್ಟಿ, ಸಿ.ಕೆ. ಗಣಪ್ಪನವರ, ಚನ್ನಪ್ಪಗೌಡರ ಇತರರು ಪಾಲ್ಗೊಂಡಿದ್ದರು.ನಂತರ ಗದಗ ಕಸಾಪ ಪದಾಧಿಕಾರಿಗಳಿಂದ ವಿಶ್ವನಾಥ ಬೇಂದ್ರೆ ಅವರ ನಿರ್ದೇಶನದ ಕನ್ಯಾ ಬೇಕು ಕನ್ಯಾ ನಾಟಕ ಪ್ರದರ್ಶನಗೊಂಡಿತು. ಜ್ಯೋತಿ ಹೇರಲಗಿ ಸ್ವಾಗತಿಸಿದರು, ಡಿ.ಎಸ್. ನಾಯಕ ನಿರೂಪಿಸಿದರು. ಪಾರ್ವತಿ ಬೇವಿನಮರದ ವಂದಿಸಿದರು.