ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್ಬಿಜಿಎಂಎಲ್ ಕಾರ್ಮಿಕ ವಿರೋಧಿ ನಿಲುವುಗಳನ್ನು ಬಿಜಿಎಂಎಲ್ ಆಡಳಿತ ಮಂಡಳಿ ಕೈಗೊಳ್ಳುತ್ತಿದ್ದು ಬಿಜಿಎಂಎಲ್ ಕಂಪನಿ ಆಡಳಿತ ಮಂಡಳಿ ವಿರುದ್ಧ ಹೋರಾಟ ಮಾಡಲಾಗುವುದು. ಈ ಹೋರಾಡದಲ್ಲಿ ಕಾರ್ಮಿಕರು ಮತ್ತು ಕಾರ್ಮಿಕರ ಕುಟುಂಬಗಳು ಪಾಲ್ಗೊಳ್ಳುವಂತೆ ಸಿಪಿಐ ಮುಖಂಡ ವಕೀಲ ಜ್ಯೋತಿಬಸು ಮನವಿ ಮಾಡಿದರು.ಮೇ ದಿನಾಚರಣೆ ಹಿನ್ನೆಲೆಯಲ್ಲಿ ಸಿಪಿಐ ಗಿರ್ಲ್ಬಟ್ಸ್ ವಾಸನ್ ವೃತ್ತ ಹಾಗೂ ಮಾರಿಕುಪ್ಪಂ ರಾಮಸ್ವಾಮಿ ವೃತ್ತ ಪೈಲೈಟ್ಸ್ ನಲ್ಲಿರುವ ಕಾರ್ಮಿಕ ಪ್ರತಿಮೆಗೆ ಮಾಲಾರ್ಪಣೆ ಸೌತ್ ಟ್ಯಾಂಕ್ ಬಡವಾಣೆಯಲ್ಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮನೆಗೊಬ್ಬ ಕಾರ್ಮಿಕರು ಹೋರಾಟದಲ್ಲಿ ಭಾಗಿಯಾಗುವಂತೆ ಕೋರಿದರು.ಕಾರ್ಮಿಕರ ಬಾಕಿ ಹಣ ನೀಡಿಲ್ಲ
ಕೆಜಿಎಫ್ ನಗರದ ಬಿಜಿಎಂಎಲ್ ಕಾರ್ಮಿಕರು ಕಾರ್ಮಿಕ ಕುಟುಂಬಗಳು ಆತಂಕದಲ್ಲೇ ಜೀವನವನ್ನು ಸಾಗಿಸುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಕಾರ್ಮಿಕ ವಿರೋದಿ ನೀತಿಗಳನ್ನು ಜಾರಿಗೊಳಿಸಿ ಕಾರ್ಮಿಕರ ಮೇಲೆ ಹೇರಲು ಯತ್ನಿಸುತ್ತಿದೆ. ಬಿಜಿಎಂಎಲ್ ಕಂಪನಿ ಮುಚ್ಚಿ ೨೩ ವರ್ಷ ಕಳೆದಿದೆ, ಆದರೆ ಕಾರ್ಮಿಕರಿಗೆ ನೀಡಬೇಕಾದ ೫೨ ಕೋಟಿ ಬಾಕಿ ಹಣ ಕೇಂದ್ರ ಗಣಿ ಇಲಾಖೆ ನೀಡಿಲ್ಲ ಎಂದರು.ಕಾರ್ಮಿಕರು ವಾಸಿಸುತ್ತಿರುವ ಮನೆಗಳನ್ನು ಸ್ವಂತ ಮಾಡಿಕೊಡುವುದಾಗಿ ವಾಸದ ದೃಢೀಕರಣ ಪ್ರಮಾಣ ಪತ್ರ ನೀಡಲಾಗಿದೆ. ಆದರೆ ಮನೆಗಳನ್ನು ನೋಂದಣಿ ಮಾಡಿಕೊಡುವ ಬದಲು ಕಾರ್ಮಿಕರನ್ನೇ ಒಕ್ಕಲೆಬ್ಬಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.ಕಾಂಗ್ರೆಸ್‌ಗೆ ತಾತ್ಕಾಲಿಕ ಬೆಂಬಲಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದು ತಾತ್ಕಾಲಿಕವಾದುದ್ದು ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡಲಾಗುವುದು ಎಂಬ ಹೇಳಿಕೆಯಿಂದಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದೇವೆ ಎಂದರು.ಈ ಸಂದರ್ಭದಲ್ಲಿ ವಿಕ್ರಮ್, ಶ್ರೀಕುಮಾರ, ಕವಿರಾಜ್, ಪುಷ್ಪರಾಜ್, ರಂಜೀತ್, ಮುರಳಿ ಅಂಬರೀಶ್ ರಾಜಪ್ಪ ಇದ್ದರು.