ಸಾರಾಂಶ
ಹಾನಗಲ್ಲ: ಕೃಷಿಗೆ ರೈತನೇ ನಿಜವಾದ ವಿಜ್ಞಾನಿ, ಕೃಷಿ ಜಮೀನಿಗೆ ದಾರಿ, ನೀರಾವರಿ ಕಾಲುವೆ ತೆರವು ಸೇರಿದಂತೆ ರೈತನಿಗೆ ರೈತ ಸಹಕಾರಿಯಾಗಿ ನಿಲ್ಲುವ ಸಮಯ ಇದಾಗಿದ್ದು ಹೊಂದಾಣಿಕೆ ಮೂಲಕ ರೈತೋದ್ಧಾರಕ್ಕೆ ಕಂಕಣಬದ್ಧರಾಗಿರೋಣ ಎಂದು ಶಾಸಕ ಶ್ರೀನಿವಾಸ ಮಾನೆ ಕರೆ ನೀಡಿದರು.ಹಾನಗಲ್ಲಿನ ಹೂಮ್ಯಾನಿಟಿ ಫೌಂಡೇಶನ್ ಪರಿವರ್ತನ ಕಲಿಕಾ ಕೇಂದ್ರದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ) ಹಾನಗಲ್ಲ ತಾಲೂಕು ಘಟಕ ಆಯೋಜಿಸಿದ ಕೃಷಿ ಚಿಂತನ ಮಂಥನ, ರೈತ ಜಾಗೃತಿ, ಪ್ರಗತಿಪರ ರೈತರು, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ಕೃಷಿ ಸಾಮಾನ್ಯ ಜ್ಞಾನ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಪ್ರಾಮಾಣಿಕತೆ, ತ್ಯಾಗದ ಫಲವಾಗಿಯೇ ಎಲ್ಲರೂ ಅನ್ನ ಉಣ್ಣುವವರಾಗಿದ್ದಾರೆ. ರೈತರ ದೊಡ್ಡ ದಾನದ ಫಲವಾಗಿಯೇ ಎಲ್ಲಡೆ ಶಾಲೆ, ಆಸ್ಪತ್ರೆ ನಿರ್ಮಾಣವಾಗಿವೆ. ರೈತನೆ ನಮ್ಮ ನಾಯಕ. ಈಗ ರೈತ ಹಾಗೂ ರೈತನ ಭೂಮಿಯ ಆರೋಗ್ಯ, ನೀರಾವರಿ, ಶಿಕ್ಷಣದ ಅರಿವು ಬಹು ಮುಖ್ಯವಾಗಿ ಬೇಕಾಗಿದೆ. ಅತ್ಯಂತ ಕಷ್ಟದಲ್ಲಿ ಎಲ್ಲರಿಗೂ ಅನ್ನ ನೀಡುವ ರೈತನಿಗೆ ನಮಿಸೋಣ. ರೈತನ ಸಾರ್ಥಕ ಸೇವೆಗೆ ಧನ್ಯತೆ ಸಲ್ಲಿಸೋಣ. ಆದರೆ ರೈತನ ಹೊಲಕ್ಕೆ ರೈತನೇ ದಾರಿ ನೀಡುವ ತ್ಯಾಗಕ್ಕೆ ಮುಂದಾಗಲಿ. ಕೆರೆ ಕಟ್ಟೆಗಳನ್ನು, ಅವುಗಳ ನೀರಾವರಿ ಕಾಲುವೆಗಳನ್ನು ಉಳಿಸಿಕೊಳ್ಳೋಣ. ಈ ಮೂಲಕ ರೈತ ರೈತನಿಗಾಗಿ ಪರೋಪಕಾರ ಮಾಡುವ ಸಂಕಲ್ಪ ನಮ್ಮದಾಗಲಿ ಎಂದರು.ಮಾರುತಿ ಜಾಡರ ಪ್ರಾಸ್ತಾವಿಕ ಮಾತನಾಡಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಚನ್ನಬಸಪ್ಪ ಹಾವಣಗಿ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ರೈತ ದೀಪ ಬೆಳಗಿಸಿದರು. ಜಿಲ್ಲಾ ಕಾರ್ಯಾಧ್ಯಕ್ಷ ರುದ್ರಪ್ಪ ಬಳಿಗಾರ, ಯುವ ಮುಖಂಡ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಕಟ್ಟೇಗೌಡರ, ರೋಶನಿ ಸಮಾಜ ಸೇವಾ ಸಂಸ್ಥೆ ನಿರ್ದೇಶಕಿ ಅನಿತಾ ಡಿಸೋಜಾ, ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಜಿಲ್ಲೆಯ ರೈತ ಸಂಘದ ವಿವಿಧ ಘಟಕಗಳ ಅಧ್ಯಕ್ಷರಾದ ಆನಂದ ಕೆಳಗಿನಮನಿ, ಶ್ರೀನಿವಾಸ ಚಿಕ್ಕನಗೌಡ್ರ, ದಿಳ್ಳೆಪ್ಪ ಸತ್ಯಪ್ಪನವರ, ಶಿವನಗೌಡ ಗಾಜಿಗೌಡ್ರ, ಹಾನಗಲ್ಲ ತಾಲೂಕು ಘಟಕದ ವೀರನಗೌಡ ಮಾಳಗಿ, ಜಿಲಾನಿಸಾಬ ನೆಗಳೂರ, ಮಲ್ಲೇಶ ರಿತ್ತಿ, ಗುರುಶಾಂತಪ್ಪ ಗುರುಸಿದ್ದಪ್ಪನವರ, ಚಂದ್ರಶೇಖರ ಹಿರೇಮಠ, ಶಿವನಗೌಡ ಕಬ್ಬಕ್ಕಿ, ಶಿವಕುಮಾರ ಅಂಗಡಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಾಹಿತಿ ಶಿವಾನಂದ ಕ್ಯಾಲಕೊಂಡ ಕಾರ್ಯಕ್ರಮ ನಿರೂಪಿಸಿದರು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಭು ಗುರಪ್ಪನವರ (ರಂಗಭೂಮಿ), ಎಸ್.ಎಫ್. ಕಠಾರಿ (ಶಿಕ್ಷಣ), ಬಡವಪ್ಪ ಆನವಟ್ಟಿ (ಜಾನಪದ), ನಾಗವೇಣಿ ಗೊಲ್ಲರ (ಎರೆಹುಳು ಗೊಬ್ಬರ), ಸಂಗಮೇಶ ಶಿಗ್ಗಾಂವ (ಯೋಗ), ಪ್ರಗತಿಪರ ರೈತರಾದ ರಾಜೇಶ ನಾಡಿಗೇರ, ಸಂತೋಷ ಆರೇರ, ಮಹದೇವಪ್ಪ ಸಂಕಣ್ಣನವರ, ದೊಡ್ಡನಿಂಗಪ್ಪ ಹಾವಣಗಿ, ಚಂದ್ರಪ್ಪ ವಾಸನದ ಹಾಗೂ ಕೃಷಿ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮಮತಾ ಕ್ಷೌರದ, ಗುಣವತಿ ಹುರಳಿ (ದ್ವಿತೀಯ), ಚಂದನಾ ದಾಸಪ್ಪನವರ, ಪುಷ್ಪಾ ಪಾಟೀಲ (ತೃತೀಯ), ಐಶ್ವರ್ಯ ಆಲೂರ, ಭೂಮಿಕಾ ಮಡಿವಾಳರ, ಸುಮತಿ ಲಂಕೇರ, ಶ್ವೇತಾ ಗಡಿಯಣ್ಣನವರ ಸಮಾಧಾನಕರ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
;Resize=(128,128))
;Resize=(128,128))