ಸಾರಾಂಶ
ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ನಗರದ ಬಿಡ್ಕಿಬೈಲಿನಲ್ಲಿರುವ ಗಾಂಧೀಜಿ ಪುತ್ಥಳಿಗೆ ಮತ್ತು ಲಾಲ್ ಬಹದ್ದೂರ ಶಾಸ್ತ್ರಿ ಭಾವಚಿತ್ರಕ್ಕೆ ಬಿಜೆಪಿ ನಗರ ಮಂಡದ ವತಿಯಿಂದ ಪೂಜೆ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಶಿರಸಿ
ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ನಗರದ ಬಿಡ್ಕಿಬೈಲಿನಲ್ಲಿರುವ ಗಾಂಧೀಜಿ ಪುತ್ಥಳಿಗೆ ಮತ್ತು ಲಾಲ್ ಬಹದ್ದೂರ ಶಾಸ್ತ್ರಿ ಭಾವಚಿತ್ರಕ್ಕೆ ಬಿಜೆಪಿ ನಗರ ಮಂಡದ ವತಿಯಿಂದ ಪೂಜೆ ಸಲ್ಲಿಸಲಾಯಿತು.ನಂತರ ಸ್ವದೇಶಿ ಉತ್ಪನ್ನಗಳನ್ನು ಹೆಚ್ಚು ಮಾರಾಟ ಮಾಡುವಂತೆ ಮಾರಾಟಗಾರರಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರಲ್ಲದೇ, ಸ್ವದೇಶಿ ಉತ್ಪನ್ನ ಖರೀದಿಸಿದರು. ಛತ್ರಪತಿ ಶಿವಾಜಿ ಮಹಾರಾಜಾ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ನಂತರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘವು ವಿಜಯದಶಮಿ ದಿನದಂದು ಶತಾಬ್ಧಿ ವರ್ಷ ಆಚರಿಸುತ್ತಿದೆ. ದೇಶದ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸಿ, ನಮ್ಮ ಸುಸಂಸ್ಕೃತ ಜ್ಞಾನದ ಪರಂಪರೆಯನ್ನು ಜಗತ್ತಿಗೆ ಸಾರುವ ಮೂಲಕ ಭಾರತ ಮತ್ತೊಮ್ಮೆ ವಸುಧೈವ ಕುಟುಂಬಕಂ, ಭಾರತ ವಿಶ್ವಗುರುವನ್ನಾಗಿ ಮಾಡುವ ಕೆಲಸವನ್ನು ಆರ್‌ಎಸ್‌ಎಸ್ ಮಾಡುತ್ತಿದೆ. ಬೇಧ-ಭಾವವಿಲ್ಲದೇ ನಾವೆಲ್ಲರೂ ಸಮಾನರು ಎಂಬ ದೃಷ್ಟಿಕೋನದಿಂದ ಸಂಘ ಕೆಲಸ ಮಾಡುತ್ತಿದೆ. 100 ವರ್ಷದ ವೈಭವದ ಇತಿಹಾಸವನ್ನು ನೋಡಿದರೆ ಬಹಳ ಹೆಮ್ಮೆ ಎನಿಸುತ್ತದೆ. ನಾವೆಲ್ಲ ಸ್ವಯಂ ಸೇವಕರು ಮುಂದಿನ ದಿನಗಳಲ್ಲಿ ದೇಶ ಕಟ್ಟುವ ಕಾಯಕದಲ್ಲಿ ನಮ್ಮನ್ನು ನಾವು ತೋಡಗಿಸಿಕೊಳ್ಳೋಣ ಎಂದ ಅವರು, ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀ ಸೇರಿದಂತೆ ಇತರ ಗಣ್ಯರ ಸ್ವದೇಶಿ ಚಿಂತನೆಯ ಸಂದೇಶ ಎಲ್ಲರಲ್ಲಿಯೂ ಮೂಡಿಸಬೇಕು ಎಂದರು.ಶಿರಸಿ ನಗರ ಮಂಡಲಾಧ್ಯಕ್ಷ ಆನಂದ ಸಾಲೇರ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಂತ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಾಗರಾಜ್ ನಾಯ್ಕ, ಪ್ರಮುಖರಾದ ನಂದನ್ ಸಾಗರ್, ನಾಗೇಶ್ ನಾಯ್ಕ, ಶ್ರೀಕಾಂತ್ ಬಳ್ಳಾರಿ, ಶ್ರೀಕಾಂತ್ ನಾಯ್ಕ, ನಾಗರತ್ನ ಜೋಗಳೇಕರ್, ನಿತಿನ್ ರಾಯ್ಕರ್, ಕಾರ್ಯಕರ್ತರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))