ದೇಶವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸೋಣ: ದಢೇಸ್ಗೂರು

| Published : Sep 17 2024, 12:47 AM IST

ಸಾರಾಂಶ

ಇಸ್ಲಾಂ ಧರ್ಮಗುರು ಪ್ರವಾದಿ ಮಹ್ಮದ್ ಪೈಗಂಬರ್ ಜನ್ಮದಿನ ಈದ್ ಮಿಲಾದ್ಅನ್ನು ಪಟ್ಟಣದಲ್ಲಿ ಸೋಮವಾರ ಸಮುದಾಯದವರು ಸಡಗರ ಸಂಭ್ರಮದಿಂದ ಆಚರಿಸಿದರು.

ಕನ್ನಡಪ್ರಭ ವಾರ್ತೆ ಕಾರಟಗಿ

ಇಸ್ಲಾಂ ಧರ್ಮಗುರು ಪ್ರವಾದಿ ಮಹ್ಮದ್ ಪೈಗಂಬರ್ ಜನ್ಮದಿನ ಈದ್ ಮಿಲಾದ್ಅನ್ನು ಪಟ್ಟಣದಲ್ಲಿ ಸೋಮವಾರ ಸಮುದಾಯದವರು ಸಡಗರ ಸಂಭ್ರಮದಿಂದ ಆಚರಿಸಿದರು.

ಬೆಳಗ್ಗೆ ಇಲ್ಲಿನ ಮದೀನಾ ಮಸೀದಿಯಿಂದ ಜಾಮೀಯಾ ಮಸೀದಿಯವರೆಗೂ ಮೆಕ್ಕಾ, ಮದೀನಾ ಮಸೀದಿಗಳ ಪ್ರತಿಕೃತಿಗಳನ್ನು ಟ್ರ್ಯಾಕ್ಟರ್‌ನಲ್ಲಿ ಪ್ರತಿಷ್ಠಾಪಿಸಿ, ಮೆರವಣಿಗೆ ನಡೆಸಲಾಯಿತು. ನವಲಿ ವೃತ್ತ, ಆರ್.ಜಿ ರಸ್ತೆ ಮೂಲಕ ಹಳೇ ಬಸ್ ನಿಲ್ದಾಣದ ಶ್ರೀ ಶರಣಬಸವೇಶ್ವರರ ಮಹಾದ್ವಾರದ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ, ಕೊನೆ ಹಳೇ ನಾಡಕಚೇರಿ ಬಳಿಯ ಜಾಮೀಯಾ ಮಸೀದಿಗೆ ತಲುಪಿತು. ಅಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಮಾಡಿದರು. ಮೆರವಣಿಗೆಯಲ್ಲಿ ಪಾಲ್ಗೊಂಡ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಹೊಸ ಬಟ್ಟೆ ಧರಿಸಿದ ಮಕ್ಕಳು ಮೆರವಣಿಗೆಗೆ ರಂಗು ತಂದರು.

ಪ್ರಾರಂಭದಲ್ಲಿ ಪುರಸಭೆ ಅಧ್ಯಕ್ಷೆ ರೇಖಾ ಆನೆ ಹೊಸೂರು ಮತ್ತು ಸದಸ್ಯರು, ಶಶಾಂಕ ತಂಗಡಗಿ, ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಶಿವರೆಡ್ಡಿ ನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್, ಅಯ್ಯಪ್ಪ ಉಪ್ಪಾರ, ನಾಗರಾಜ್ ಅರಳಿ ಇತರರು ಕನಕದಾಸ ವೃತ್ತದ ಬಳಿ ಪಾಲ್ಗೊಂಡು ಶುಭಾಶಯ ಕೋರಿದರು.

ಮಾಜಿ ಶಾಸಕ ಬಸವರಾಜ್ ದಢೇಸ್ಗೂರು ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿ, ಈ ವರ್ಷ ಸಮೃದ್ಧ ಮಳೆಯಾಗಿದೆ. ಜಲಾಶಯವು ತುಂಬಿದ್ದು, ನಾಡಿನ ಎಲ್ಲ ಜನರಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಗೊಳ್ಳಲಿ. ಇನ್ನು ಜಗತ್ತಿಗೆ ಸಾರ್ವಕಾಲಿಕ ಮೌಲ್ಯಗಳನ್ನು ಬಿತ್ತಿದ ಮಹಾನ್ ಸಂತ ಮಹಮ್ಮದ್ ಪೈಗಂಬರ್ ಅವರ ವಿಚಾರಧಾರೆಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಭಾರತವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸೋಣ ಎಂದರು.ನಾಗರಾಜ್ ಬಿಲ್ಗಾರ್, ಮಂಜುನಾಥ ಮಸ್ಕಿ ಸೇರಿ ಇತರರು ಇದ್ದರು. ಈ ವೇಳೆ ಜಾಮೀಯಾ ಮಸೀದಿ ಅಧ್ಯಕ್ಷ ಗನ್ನಿಸಾಬ್, ರಾಮನಗರ ಮಸೀದಿ ಅಧ್ಯಕ್ಷ ಜಿಲಾನಿಸಾಬ ಗುಜರಿ, ಡಾ. ಎಂ.ಐ. ಮುದುಗಲ್, ಬಾಬುಸಾಬ ಬಳಿಗಾರ್, ಗೌಸಸಾಬ್, ಪುರಸಭೆ ಮಾಜಿ ಸದಸ್ಯ ಯೂಸೂಫ್, ಪ್ರಮುಖರಾದ ಖಾಜಾ ಹುಸೇನ್ ಮುಲ್ಲಾ, ಅಮ್ರುಲ್ ಹುಸೇನ್, ಅಮ್ಜದ್ ಕಪಾಲಿ, ಶುಕ್ರ ಯರಡೋಣಾ, ಮುಜಾಹೀದ್ ಕಪಾಲಿ, ಗೌಸ್ ಪಾಶಾ,ಅಮನ್ ಮುಲ್ಲಾ, ರಜಬ್ ಅಲಿ, ತಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ರಫಿ, ಜಾಕೀರ್ ಹುಸೇನ್, ಮುಸ್ತಾಪಾ ಬೇವಿನಗಿಡಿ, ಇಬ್ರಾಹಿಂ ಆಮದಿಹಾಳ, ಜಹಾಂಗೀರಸಾಬ, ರಾಜಾಸಾಬ, ಖಬರಸ್ತಾನ ಮಸೀದಿ ಅಧ್ಯಕ್ಷ ಗೌಸಸಾಬ್, ಅಲಿ ಹುಸೇನ್, ತಾಹೀರ್ ಸೇರಿದಂತೆ ಇತರರಿದ್ದರು.