ದೇವರು ನಮಗೆ ಮಾಡಿದ ಅನುಗೃಹ ಸ್ಮರಿಸಬೇಕು. ಯಾವುದೇ ಸತ್ಕಾರ್ಯ ಮಾಡಬೇಕು ಅಂದರೆ ನೆಲೆ ಬೇಕು, ಅದು ಭೂಮಿ. ಭಗವಂತ ನಮಗೆ ಭೂಮಿ ಯನ್ನೇ ವೇದಿಕೆಯಾಗಿ ಕೊಟ್ಟು, ಉಪಕಾರ ಮಾಡಿದ್ದಾನೆ. ಸಾಧನೆಗೆ ಸಲಕರಣೆ ಒದಗಿಸಿದ್ದಾನೆ.
ಧಾರವಾಡ:
ಹಿಂದಿ ಪ್ರಚಾರ ಸಭೆ ಭಾರತೀಯ ಸಂಸ್ಕೃತಿಯಡಿ ಸಾಗಲಿ ಎಂದು ಉತ್ತರಾದಿ ಮಠದ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹೇಳಿದರು.ನಗರದ ದಕ್ಷಿಣ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ `ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಪ್ರಾಂಗಣ'''''''' ಉದ್ಘಾಟಿಸಿ ಮಾತನಾಡಿದ ಅವರು, ವಾಜಪೇಯಿ ಅವರು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ದೇಶದಲ್ಲಿ ಉತ್ತಮ ರಾಷ್ಟ್ರೀಯ ಹೆದ್ದಾರಿಗಳಾಗಿದ್ದರೆ, ಅವು ವಾಜಪೇಯಿ ಅವರ ದೂರದೃಷ್ಟಿ ಫಲವಾಗಿದೆ. ಅವರ ಹೆಸರಿನಲ್ಲಿ ಪ್ರಾಂಗಣ ಮಾಡಿದ್ದು ಸ್ತುತ್ಯಾರ್ಹ ಎಂದರು.
ದೇವರು ನಮಗೆ ಮಾಡಿದ ಅನುಗೃಹ ಸ್ಮರಿಸಬೇಕು. ಯಾವುದೇ ಸತ್ಕಾರ್ಯ ಮಾಡಬೇಕು ಅಂದರೆ ನೆಲೆ ಬೇಕು, ಅದು ಭೂಮಿ. ಭಗವಂತ ನಮಗೆ ಭೂಮಿ ಯನ್ನೇ ವೇದಿಕೆಯಾಗಿ ಕೊಟ್ಟು, ಉಪಕಾರ ಮಾಡಿದ್ದಾನೆ. ಸಾಧನೆಗೆ ಸಲಕರಣೆ ಒದಗಿಸಿದ್ದಾನೆ. ದುಷ್ಕೃತ್ಯ ಮಾಡಿದವರೆ ಫಲವಿಲ್ಲ. ಒಳ್ಳೆಯ ಕೆಲಸ ಮಾಡಿದವರಿಗೆ ಕೆಟ್ಟದಾಗುತ್ತದೆ ಎನ್ನುವ ಮಾತಿದೆ. ಆದರೆ, ಮನುಷ್ಯ ಒಳ್ಳೆಯ ಮತ್ತು ಕೆಟ್ಟ ಕೆಲಸ ಮಾಡುತ್ತಾನೆ. ಒಳ್ಳೆ ಕೆಲಸ ಮಾಡುವವರಿಗೆ ಭಗವಂತ ಒಳ್ಳೆಯದನ್ನೇ ಮಾಡುತ್ತಾನೆ ಎಂದರು.ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾರ್ಯಾಧ್ಯಕ್ಷ ಈರೇಶ ಅಂಚಟಗೇರಿ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮಾರ್ಗದರ್ಶನದಲ್ಲಿ 5 ವರ್ಷದಲ್ಲಿ ಸಭಾ ಯಶಸ್ವಿಯಾಗಿ ಉತ್ತಮ ಕಾರ್ಯ ಮಾಡಿದೆ. ಮೊದಲಿನ ಆಡಳಿತ ಮಂಡಳಿಗೂ ಹೊಸ ಆಡಳಿತ ಮಂಡಳಿಗೂ ಅಭಿವೃದ್ಧಿ ಕಾರ್ಯದಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಈ ಸಂಸ್ಥೆ ಇನ್ನು ಉತ್ತಮ ಕಾರ್ಯ ಮಾಡಲಿದೆ ಎಂದು ಭರವಸೆ ನೀಡಿದರು.
ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾಧ್ಯಕ್ಷ ರಾಘವೇಂದ್ರ ತವನಪ್ಪನವರ ಮಾತನಾಡಿ, ಸತ್ಯಾತ್ಮತೀರ್ಥ ಶ್ರೀಪಾದಂಗಳವರ ತಪ್ಪಸ್ಸು ದೊಡ್ಡದು. ಅವರ ಆಹಾರ ಪದ್ಧತಿ, ಅವರ ದಿನಚರಿಯಿಂದ ಎಲ್ಲರ ಗಮನ ಸೆಳೆದಿದ್ದಾರೆ ಎಂದರು.ಉದ್ಯಮಿ ಗೋವಿಂದ ಜೋಶಿ ಮಾತನಾಡಿ, ವಾಜಪೇಯಿ ಅವರು ಅನೇಕ ಸವಾಲು ಎದುರಿಸಿ ದೇಶದ ಆರ್ಥಿಕತೆಗೆ ಹೊಸ ಅರ್ಥ ಕೊಟ್ಟರು. ರಾಜಸ್ಥಾನದ ಪೋಖರಣ್ ಮರಭೂಮಿಯಲ್ಲಿ ಅಣುಶಕ್ತಿ ಪರೀಕ್ಷೆ ಕೈಗೊಂಡು, ವಿಶ್ವಕ್ಕೆ ಭಾರತ ಶಕ್ತಿಯುತರಾಷ್ಟ ಎಂದು ತೋರಿಸಿದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸೇರಿ ದೇಶದ ಅಭಿವೃದ್ಧಿಯಲ್ಲಿ ಅವರು ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ ಎಂದು ಹೇಳಿದರು.
ಕಾರ್ಯದರ್ಶಿ ಎಸ್.ರಾಧಾಕೃಷ್ಣ, ಹನುಮಂತ ಕೊಟಬಾಗಿ, ನಾರಾಯಣ ಮೋರೆ, ಅಶೋಕ ಶೆಟ್ಟರ್, ಶ್ರೀಧರ ನಾಡಗೇರ, ಬಸವರಾಜ ತಾಳಿಕೋಟಿ, ವಿಜಯಾನಂದ ಶೆಟ್ಟಿ, ವಿಷ್ಣುತೀರ್ಥ ಕೊರ್ಲಹಳ್ಳಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.