ಸಾರಾಂಶ
ಶಾಲಾ ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವ ಮೂಡಬೇಕು. ಅಂದಾಗ ಮಾತ್ರ ಸಮೃದ್ಧ ನಾಡು ಕಟ್ಟಲು ಸಾಧ್ಯ ಎಂದು ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ ಅಧ್ಯಕ್ಷ ಡಾ.ವಿಲಾಸ ಕನಸೆ ಅಭಿಪ್ರಾಯಪಟ್ಟರು.
ಭಾಲ್ಕಿ: ಶಾಲಾ ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವ ಮೂಡಬೇಕು. ಅಂದಾಗ ಮಾತ್ರ ಸಮೃದ್ಧ ನಾಡು ಕಟ್ಟಲು ಸಾಧ್ಯ ಎಂದು ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ ಅಧ್ಯಕ್ಷ ಡಾ.ವಿಲಾಸ ಕನಸೆ ಅಭಿಪ್ರಾಯಪಟ್ಟರು.
ಪಟ್ಟಣದ ಗುರಕೃಪಾ ಕಲ್ಯಾಣಮಂಟಪದಲ್ಲಿ ಭಾನುವಾರ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ತಾಲೂಕಿನ ಹಲವಾರು ಶಾಲೆಯ ಸಾವಿರಾರು ವಿದ್ಯಾರ್ಥಿಗಳು ರೋಟರಿ ಕ್ಲಬ್ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಹೆಮ್ಮೆಯ ವಿಷಯವಾಗಿದೆ. ಎಲ್ಲಾ ವಿದ್ಯಾರ್ಥಿಗಳಲ್ಲಿ ವೈಚಾರಿಕತೆ, ಮತ್ತು ದೇಶಾಭಿಮಾನ ಮೂಡಿಸುವ ನಿಟ್ಟಿನಲ್ಲಿ ಈ ಸ್ಪರ್ಧೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ 1 ರಿಂದ 4ನೇ ತರಗತಿ, 5ರಿಂದ 7ನೇ ತರಗತಿ ಹಾಗೂ 8ರಿಂದ 10ನೇ ತರಗತಿಯ 3 ಗುಂಪುಗಳನ್ನು ರಚಿಸಿ, ಆಯಾ ಗುಂಪುಗಳಿಗೆ ಬೇರೆ, ಬೇರೆ ವಿಷಯ ನೀಡಿ, ಚಿತ್ರಕಲೆ ಸ್ಪರ್ಧೆ ನಡೆಸಲಾಯಿತು.ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು. ನಿರ್ಣಾಯಕರಾಗಿ ಆಗಮಿಸಿದ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ್ಯಾಯವಾದಿ ಉಮಾಕಾಂತ ವಾರದ ಪ್ರಾಸ್ತಾವಿಕ ಮಾತನಾಡಿದರು.
ರೋಟರಿ ಕಲ್ಯಾಣ ಝೋನ್ ಅಧ್ಯಕ್ಷ ಡಾ.ವಸಂತ ಪವಾರ, ಡಾ.ಅಮಿತ ಅಷ್ಟೂರೆ, ಡಾ.ಯುವರಾಜ ಜಾಧವ, ಡಾ.ನಿತಿನ ಪಾಟೀಲ, ಡಾ.ಸಂತೋಷ ಕಾಳೆ, ರೋಟರಿ ಕಾರ್ಯದರ್ಶಿ ಸಾಗಾರ ನಾಯಿಕ, ಡಾ.ಗೋವಿಂದರಾವ ಶೇಡೋಳೆ, ಡಾ.ಅನೀಲ ಸುಕಾಳೆ ಉಪಸ್ಥಿತರಿದ್ದರು.