ಸಾರಾಂಶ
೫ ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆಯನ್ನು ತಪ್ಪದೇ ಹಾಕಿಸಿ. ಈ ಮೂಲಕ ಅಂಗವಿಕಲತೆ ತಡೆಗಟ್ಟೋಣ ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ದಪ್ಪ ಎನ್. ಲಿಂಗದಾಳ ಹೇಳಿದರು.
ಗದಗ: ೫ ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆಯನ್ನು ತಪ್ಪದೇ ಹಾಕಿಸಿ. ಈ ಮೂಲಕ ಅಂಗವಿಕಲತೆ ತಡೆಗಟ್ಟೋಣ ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ದಪ್ಪ ಎನ್. ಲಿಂಗದಾಳ ಹೇಳಿದರು.
ತಾಲೂಕಿನ ಅಡವಿಸೋಮಾಪುರ ಗ್ರಾಮದ ಸಮುದಾಯ ಭವನದಲ್ಲಿ ಬೂತ್ ನಂ. ೯ರಲ್ಲಿ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾ. ೩ರಿಂದ ೬ರ ವರೆಗೆ ನಡೆಯುವ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತ ಆಗದಂತೆ ಮಕ್ಕಳಿಗೆ ಲಸಿಕೆ ಕೊಡಿಸಿ, ಪೋಲಿಯೋ ಮುಕ್ತ ಭಾರತ ಮಾಡೋಣ ಎಂದು ಹೇಳಿದರು.ಯಾವುದೇ ಕಾರ್ಯಕ್ರಮ ಯಶಸ್ವಿ ಆಗಬೇಕಾದರೆ ಸಾರ್ವಜನಿಕರ ಸಹಕಾರ ಬಹುಮುಖ್ಯ. ಸರ್ಕಾರಗಳು ಜನರ ಆರೋಗ್ಯಕ್ಕೆ ಹೆಚ್ಚು ವೈದ್ಯಕಿಯ ಸೌಕರ್ಯಗಳನ್ನು ನೀಡುತ್ತಿದೆ. ಅದರ ಸೌಲಭ್ಯಗಳನ್ನು ಪಡೆದು ಆರೋಗ್ಯ ಸಂಪತ್ತನ್ನು ಪಡೆದುಕೊಳ್ಳಬೇಕು ಎಂದರು.ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶೀಲಾ ಮಳೇಕರ, ಮುತ್ತಣ್ಣ ಹುಲಗಣ್ಣವರ, ರಫೀಕ ಮುಲ್ಲಾ, ಸವಿತಾ ಪವಾರ, ಎಸ್.ಬಿ. ಗಡದ, ಮೀನಾಕ್ಷಿ ವಡ್ಡರ, ಮಾಲಾ ಮೇವುಂಡಿ, ರೇಣುಕಾ ಪುರದ, ಉಮಾದೇವಿ ಖಾನಾಪುರ, ಲಲಿತಾ ನಾಯಕ, ಎಫ್.ಎನ್. ಅತ್ತಿಕಟ್ಟಿ, ಮಂಜುಳಾ ಆರಿ, ಲಲಿತಾ ಅಂಗಡಿ, ಲಕ್ಷ್ಮಿ ಪೂಜಾರ, ರೇಖಾ ಲಮಾಣಿ, ಲಲಿತಾ ಸುರೇಶ ನಾಯಕ, ಪಾರ್ವತಿ ಉಮ್ಮಣ್ಣವರ, ದೀಪಾ ಮೇವುಂಡಿ, ಕಾಶವ್ವ ಮಠಪತಿ, ಗಂಗಾ ಪುರದ, ರಮೀಜಾ ಬದಾಮಿ ಹಾಗೂ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.