ಕಳೆದ ಎರಡೂವರೆ ವರ್ಷಗಳಿಂದ ಬೀದರ್ ಜಿಲ್ಲೆಯ ಸಹಕಾರ ಇಲಾಖೆಗೆ, ರೈತರಿಗೆ, ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ, ಸ್ವ-ಸಹಾಯ ಸಂಘಗಳಿಗೆ, ಕಾರ್ಮಿಕರಿಗೆ ಕಂಟಕವಾಗಿ ಪರಿಣಮಿಸಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಆರ್.ಬಿ.ಐ ಗೆ ಪತ್ರ ಬರೆದಿದ್ದಾರೆ

ಕನ್ನಡಪ್ರಭ ವಾರ್ತೆ ಬೀದರ್

ಕಳೆದ ಎರಡೂವರೆ ವರ್ಷಗಳಿಂದ ಬೀದರ್ ಜಿಲ್ಲೆಯ ಸಹಕಾರ ಇಲಾಖೆಗೆ, ರೈತರಿಗೆ, ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ, ಸ್ವ-ಸಹಾಯ ಸಂಘಗಳಿಗೆ, ಕಾರ್ಮಿಕರಿಗೆ ಕಂಟಕವಾಗಿ ಪರಿಣಮಿಸಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಆರ್.ಬಿ.ಐ ಗೆ ಪತ್ರ ಬರೆದಿದ್ದಾರೆ

3 ವರ್ಷಗಳ ಹಿಂದೆ ಡಿ.ಸಿ.ಸಿ. ಬ್ಯಾಂಕ್ ಚುನಾವಣೆಗೂ ಮುನ್ನ ನಾನು ಸುದ್ದಿಗೋಷ್ಠಿ ನಡೆಸಿ, ಈ ಚುನಾವಣೆ, ಸಹಕಾರ ಮತ್ತು ಸಾಹುಕಾರ ಮಧ್ಯೆ ನಡೆಯುತ್ತಿದೆ, ಅಮರ ಖಂಡ್ರೆ ಸಾಹುಕಾರ್ ಇದ್ದಾರೆ, ಇವರು ಬಡ್ಡಿ ವ್ಯವಹಾರದವರಂತೆ ವರ್ತಿಸುತ್ತಾರೆ, ಯಾವೂದೇ ಕಾರಣಕ್ಕೂ ಅಮರ ಖಂಡ್ರೆ ಪೆನಾಲ್‌ಗೆ ಮತ ನೀಡಬೇಡಿ, ಇವರ ಕೈಗೆ ಅಧಿಕಾರ ಹೋದರೆ ಡಿಸಿಸಿ ಬ್ಯಾಂಕ್ ಉಳಿಯೋದಿಲ್ಲ, ಬಿ.ಎಸ್.ಎಸ್.ಕೆ ಉಳಿಯೊದಿಲ್ಲ ಎಂದು ಹೇಳಿದ್ದೆ, ಅದರಂತೆ ನನ್ನ 3 ವರ್ಷದ ಹಿಂದಿನ ಭವಿಷ್ಯ ಈಗ ನಿಜವಾಗಿದೆ ಎಂದಿದ್ದಾರೆ.

ಅಮರ ಖಂಡ್ರೆ ಅಧ್ಯಕ್ಷರಾದ ಮೇಲೆ ಬ್ಯಾಂಕಿನಿಂದ ರೈತರಿಗೆ, ಸ್ವ-ಸಹಾಯ ಸಂಘದವರಿಗೆ ಹೊಸ ಸಾಲ ಕೊಟ್ಟಿಲ್ಲ, ಈ ಅಧ್ಯಕ್ಷರು ಬಡ್ಡಿ ವ್ಯವಹಾರ ಮಾಡು ವವರಂತೆ ಕೇವಲ ಸಾಲ ವಸೂಲಿ ಕೆಲಸಕ್ಕೆ ಮುಂದಾಗಿದ್ದಾರೆ, ಆದ್ದರಿಂದ ಜಿಲ್ಲೆಯ ಸಹಕಾರ ರಂಗಕ್ಕೆ, ರೈತರಿಗೆ, ಕೂಲಿ ಕಾರ್ಮಿಕರಿಗೆ, ಸ್ವಸಹಾಯ ಸಂಘದ ವರಿಗೆ ಅಮರ ಖಂಡ್ರೆಯವರ ಈ ದುರಾಡಳಿತದಿಂದ ಮುಕ್ತಿ ಸಿಗಬೇಕಾದರೆ ಇವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸುವುದು ಅವಶ್ಯಕವಾಗಿದೆ ಎಂದು ಭಗವಂತ ಖೂಬಾ ಅಭಿಪ್ರಾಯಪಟ್ಟಿದ್ದಾರೆ.

ರೈತರ ಜೀವನಾಡಿಯಾಗಿರುವ ಬಿ.ಎಸ್.ಎಸ್.ಕೆ ಮೂಲಕ ರಾಜಕೀಯವಾಗಿ ಬೆಳೆದ ಖಂಡ್ರೆ ಪರಿವಾರ ಇಂದು ಸಾಲದ ನೆಪವೊಡ್ಡಿ ಬಿ.ಎಸ್.ಎಸ್.ಕೆ ಕಾರ್ಖಾನೆಯನ್ನು ನುಂಗಲು ಹೊಂಚು ಹಾಕುತ್ತಿದೆ, ಅವರ ಕುಟುಂಬದ ಮಹಾತ್ಮ ಗಾಂಧಿ ಸಕ್ಕರೆ ಕಾರ್ಖಾನೆ ಮೇಲೂ ಸಾಲದ ಅಸಲು, ಬಡ್ಡಿ ಸೇರಿ ಒಟ್ಟು 398 ಕೋಟಿ ರು. ಸಾಲವಿದೆ, ಇದರ ವಿರುದ್ಧ ಯಾವುದೇ ಕ್ರಮವಿಲ್ಲ ಕೇವಲ ರೈತರ ಕಾರ್ಖಾನೆಯಾಗಿರುವ ಬಿ.ಎಸ್.ಎಸ್.ಕೆ ಮೇಲೆ ಇವರು ಕ್ರಮಕ್ಕೆ ಮುಂದಾಗುತ್ತಿರುವುದು ಇವರ ಸ್ವಾರ್ಥ ಮತ್ತು ಅಹಂಕಾರದ ಪ್ರತಿಫಲವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ರೈತರಿಂದ ಬೆಳೆದು, ರೈತರ ಹಿತವನ್ನು ನಿರ್ಲಕ್ಷಿಸಿರುವ ಈ ಖಂಡ್ರೆ ಪರಿವಾರವನ್ನು ಧಿಕ್ಕರಿಸಿ, ರೈತರ , ಸಹಕಾರಿ ಇಲಾಖೆಯ ಮತ್ತು ಸಕ್ಕರೆ ಕಾರ್ಖಾನೆಗಳ ಉಳಿವಿಗಾಗಿ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಅಮರಕುಮಾರ ಖಂಡ್ರೆ ಅವರನ್ನು “ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಗ್ರಾಮೀಣ ಸಹಕಾರಿ ಬ್ಯಾಂಕುಗಳು - ಆಡಳಿತ) ತಿದ್ದುಪಡಿ ನಿರ್ದೇಶನಗಳು, 2026” ಅನ್ವಯ ತಕ್ಷಣ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಲ್ಲಿ ಕ್ರಮ ಕೈಗೊಳ್ಳಬೇಕೆಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಆರ್.ಬಿ.ಐಗೆ ಪತ್ರ ಬರೆದು ಒತ್ತಾಯಿಸಿರುವುದಾಗಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

--

--- ಬಾಕ್ಸ್ ----ಬಿಎಸ್‌ಎಸ್‌ಕೆ ಲೀಸ್ ನೀಡಿದ್ರೆ ನಾನು

ಎನ್‌ಸಿಡಿಸಿಯಿಂದ ಸಾಲ ಕೊಡಿಸುವೆಬಿ.ಎಸ್.ಎಸ್.ಕೆ ಉಳಿಸಿ ಎಂದು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನಾನೂ ಪಾಲ್ಗೊಂಡು, ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ರಾಜ್ಯ ಸರ್ಕಾರದ ಮೂಲಕ ಬಿ.ಎಸ್.ಎಸ್.ಕೆ ಕಾರ್ಖಾನೆಯನ್ನು ಲೀಸ್ ಕೊಡಿಸಿದಲ್ಲಿ ನಾನು ಕೇಂದ್ರ ಸರ್ಕಾರದ ಎನ್.ಸಿ.ಡಿ.ಸಿ ಇಂದ ಸಾಲ ಕೊಡಿಸುತ್ತೇನೆ ಮತ್ತು ಇಥೇನಾಲ್ ಯೂನಿಟ್ ಪ್ರಾರಂಭಿಸಲು ಕೇಂದ್ರದಿಂದ ಸಹಾಯ ಮಾಡಿಸುವುದಾಗಿ ರೈತರಿಗೆ ಅಭಯ ನೀಡಿದ್ದೇನೆ, ಬಿ.ಎಸ್.ಎಸ್.ಕೆ ಉಳಿಸಲು ನಾವೆಲ್ಲ ಪಕ್ಷಭೇಧ ಮರೆತು ಸಹಕಾರ ನೀಡೊಣ ಎಂದಿದ್ದೆ, ಆದರೂ ಇಲ್ಲಿಯವರೆಗೆ ಈಶ್ವರ ಖಂಡ್ರೆ ಅವರಿಂದ ಯಾವುದೇ ಕ್ರಮವಾಗಿಲ್ಲ ಎಂದು ಭಗವಂತ ಖೂಬಾ ಬೇಸರ ಹೊರಹಾಕಿದ್ದಾರೆ.-------

ಚಿತ್ರ 30ಬಿಡಿಆರ್51:

ಭಗವಂತ ಖೂಬಾ