ಮಾಲೂರಿನಲ್ಲಿ ಲೀಥಿಯಂ ಸೆಲ್‌ ಘಟಕ

| Published : Oct 18 2023, 01:00 AM IST

ಸಾರಾಂಶ

ಎನ್‌ಶ್ಯೂರ್‌ ರಿಲಯೇಬಲ್ ಪವರ್ ಸೊಲ್ಯೂಶನ್‌ ಸಂಸ್ಥೆಯು ಬೆಂಗಳೂರು ಸಮೀಪದ ಮಾಲೂರಿನ ಘಟಕದಲ್ಲಿ ಶೀಘ್ರದಲ್ಲೇ ಲೀಥಿಯಂ -ಅಯಾನ್‌ ಸೆಲ್‌ ಪ್ರಾಯೋಗಿಕ ಉತ್ಪಾದನೆ ಆರಂಭಿಸಲಿದೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು ಎನ್‌ಶ್ಯೂರ್‌ ರಿಲಯೇಬಲ್ ಪವರ್ ಸೊಲ್ಯೂಶನ್‌ ಸಂಸ್ಥೆಯು ಬೆಂಗಳೂರು ಸಮೀಪದ ಮಾಲೂರಿನ ಘಟಕದಲ್ಲಿ ಶೀಘ್ರದಲ್ಲೇ ಲೀಥಿಯಂ -ಅಯಾನ್‌ ಸೆಲ್‌ ಪ್ರಾಯೋಗಿಕ ಉತ್ಪಾದನೆ ಆರಂಭಿಸಲಿದೆ. ಎನ್‌ಶ್ಯೂರ್‌ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ (ಸಿಇಒ) ಚಂದ್ರಕಾಂತ್ ರಾಮಲಿಂಗಂ ಅವರು ಈ ಘಟಕಕ್ಕಾಗಿ 1,050 ಕೋಟಿ ರು. ಹೂಡಿಕೆ ಮಾಡುತ್ತಿದ್ದು, 80 ಎಕರೆ ಜಾಗದಲ್ಲಿ ಘಟಕ ಸ್ಥಾಪಿಸುತ್ತಿದ್ದಾರೆ. ಬೆಂಗಳೂರು ಹೊರವಲಯದಲ್ಲಿರುವ, ವಿದ್ಯುತ್‌ ವಾಹನಗಳ (ಇವಿ ಹಬ್‌) ಆಗಲಿರುವ ಮಾಲೂರಿನಲ್ಲಿ ಶೀಘ್ರವೇ ಪೂರ್ಣ ಪ್ರಮಾಣದ ಉತ್ಪಾದನಾ ಘಟಕ ಆರಂಭವಾಗಲಿದೆ. ಈ ಘಟಕವು ಎಲ್‌ಇಪಿ ಸೆಲ್‌ಗಳ 1.0 ಗಿಗಾ ವ್ಯಾಟ್‌ ಅವರ್ಸ್ (ಜಿಡಬ್ಲ್ಯೂಎಚ್‌) ಸಾಮರ್ಥ್ಯ ಹೊಂದಿದೆ. ಮುಂದಿನ ಹಂತದಲ್ಲಿ ಈ ಗಿಗಾಫ್ಯಾಕ್ಟರಿಯನ್ನು 5 ಜಿಡಬ್ಲ್ಯೂಎಚ್‌ ಅಥವಾ ಇದಕ್ಕೂ ಹೆಚ್ಚು ಸಾಮರ್ಥ್ಯಕ್ಕೆ ವಿಸ್ತರಿಸುವ ಸಾಧ್ಯತೆ ಇದೆ ಎಂದು ಸಂಸ್ಥೆ ಮೂಲಗಳು ತಿಳಿಸಿವೆ. ರಾಜ್ಯ ಉನ್ನತ ಮಟ್ಟದ ಕ್ಲಿಯರೆನ್ಸ್ ಸಮಿತಿಯ ಅನುಮೋದನೆ ಪಡೆದಿರುವ ಕಂಪನಿಗಳಲ್ಲಿ ಎನ್‌ಶ್ಯೂರ್‌ ಮುಂಚೂಣಿ ಸ್ಥಾನ ಪಡೆದಿದೆ. ಎನ್‌ಶ್ಯೂರ್‌ನ ಪೂರ್ಣ ಪ್ರಮಾಣದ ಲಿ-ಅಯಾನ್‌ ಸೆಲ್ ಉತ್ಪಾದನಾ ಪ್ರಾಯೋಗಿಕ ಘಟಕವು ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ಕಾರ್ಯಾರಂಭಿಸಲು ಯೋಜಿಸಲಾಗಿದೆ ಎಂದು ಚಂದ್ರಕಾಂತ್‌ ರಾಮಲಿಂಗಂ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌: www.nsure.co.in ಗೆ ಭೇಟಿ ನೀಡಬಹುದು. ಅಥವಾ ವೀರ ರಾಘವನ್ 91-7899345336, ಅಕ್ಷಯ್ 91-8951194525 ಸಂಪರ್ಕಿಸುವಂತೆ ಕೋರಲಾಗಿದೆ.