ಒತ್ತಡದ ಜೀವನದಿಂದ ಮುಕ್ತಿ ಪಡೆದು ನೆಮ್ಮದಿಯಿಂದ ಬದುಕುವುದೇ ನಿಜವಾದ ಸ್ವರ್ಗ ತೃಪ್ತಿ ಎಂದು ನಿವೃತ್ತ ಅಧ್ಯಾಪಕ ಸಿ.ಎಸ್. ವಸ್ತ್ರದ ತಿಳಿಸಿದರು.

ಹಾನಗಲ್ಲ: ಒತ್ತಡದ ಜೀವನದಿಂದ ಮುಕ್ತಿ ಪಡೆದು ನೆಮ್ಮದಿಯಿಂದ ಬದುಕುವುದೇ ನಿಜವಾದ ಸ್ವರ್ಗ ತೃಪ್ತಿ ಎಂದು ನಿವೃತ್ತ ಅಧ್ಯಾಪಕ ಸಿ.ಎಸ್. ವಸ್ತ್ರದ ತಿಳಿಸಿದರು.

ಪಟ್ಟಣದ ಶ್ರೀಕುಮಾರೇಶ್ವರ ವಿರಕ್ತಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌, ಕದಳಿ ಮಹಿಳಾ ವೇದಿಕೆ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಧ್ಯಾತ್ಮಿಕ ಪ್ರಪಂಚದ ಅರಿವು ವಿಸ್ತಾರ ಬಹು ದೊಡ್ಡದಿದೆ. ಬದುಕಿನ ಸ್ವಚ್ಛತೆಗೆ ಆಧ್ಯಾತ್ಮಿಕ ಚಿಂತನೆಗಳ ಅಳವಡಿಸಿಕೊಳ್ಳುವಿಕೆಯೂ ಬೇಕು. ಬದುಕಿನಲ್ಲಿ ನಮಗಾಗಿ ಕಲಿಯುವುದು ಬಹಳಷ್ಟಿದೆ. ಅದಕ್ಕೆಲ್ಲ ತಾಳ್ಮೆ ಬೇಕು. ಅದರಿಂದ ಮಾತ್ರ ಸಾರ್ಥಕ ಜೀವನದ ಯಶಸ್ಸು ಸಾಧ್ಯ ಎಂದರು.

ಪ್ರಾಚಾರ್ಯ ಡಾ. ಎಂ.ಎಚ್. ಹೊಳೆಣ್ಣನವೆರ ಮಾತನಾಡಿ, ಶರಣರ ನಡೆಗಳು ವೃತ್ತಿ ಪ್ರವೃತ್ತಿಯಲ್ಲಿ ಸಮಚಿತ್ತತೆ ಹೊಂದಿದ್ದವು. ಅನುಭವ ಮಂಟಪ ಈ ಜಗತ್ತಿಗೆ ನೀಡಿದ ಬಹು ದೊಡ್ಡ ಬದುಕಿನ ಸಾಧ್ಯತೆಯಾಗಿದೆ. ಸಮ ಸಮಾಜ ನಿರ್ಮಾಣ, ಸಾಮಾಜಿಕ ಪರಿವರ್ತನೆಯ ಶಕ್ತಿಯೇ ಆಗಿದ್ದ ಶರಣರ ನಡೆ ಸ್ತ್ರೀ ಸಮಾನತೆ, ದಾಸೋಹದ ದೊಡ್ಡ ಮಹಾತ್ವಾಕಾಂಕ್ಷಿ ಬದುಕಿನ ಬೋಧಕ ಶಕ್ತಿಯಾಗಿ ಹೊರಹೊಮ್ಮಿದೆ. ಶರಣರ ದಾರಿ ಒಂದು ದೊಡ್ಡ ಕ್ರಾಂತಿಯ ಶಕ್ತಿ ಪ್ರದರ್ಶನ ಎಂದರು.

ಅಧ್ಯಕ್ಷತೆ ವಹಿಸಿದ್ದ ನಗರ ಘಟಕದ ಅಧ್ಯಕ್ಷ ಸಿ. ಮಂಜುನಾಥ, ಎಲ್ಲ ಕಾಲಕ್ಕೂ ಸಲ್ಲುವ ವಚನಗಳು ಸಮಾಜಮುಖಿ ಚಿಂತನೆಗಳನ್ನು ಅನಾವರಣಗೊಳಿಸಿವೆ. ವಚನಗಳು ಅಂತರಂಗ, ಬಹಿರಂಗ ಶುದ್ಧತೆಯ ಮಾರ್ಗದರ್ಶಿ ಸಂದೇಶಗಳು ಎಂದರು.

ನಗರ ಘಟಕದ ಉಪಾಧ್ಯಕ್ಷ ಅಶೋಕ ದಾಸರ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾರುತಿ ಶಿಡ್ಲಾಪೂರ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ಎಸ್.ವಿ. ಹೊಸಮನಿ, ಪ್ರವೀಣ ಬ್ಯಾತನಾಳ, ಎನ್.ಎಂ. ಕೊಪ್ಪದ, ಕದಳಿ ಮಹಿಳಾ ವೇದಿಕೆ ಕಾರ್ಯದರ್ಶಿ ರೇಖಾ ಶೆಟ್ಟರ, ವೀಣಾ ಗುಡಿ, ವಿಜಯಲಕ್ಷ್ಮೀ ಹಳ್ಳೀಕೇರಿ, ರೂಪಶ್ರೀ ಗೌಳಿ, ಸುವರ್ಣ ಹಿರೇಗೌಡರ, ಸುಜಾತಾ ನಂದೀಶೆಟ್ಟರ, ಶಿಲ್ಪಾ ಹಿರೇಮಠ, ಚೈತ್ರಾ ಕಂಬಾಳಿಮಠ, ವರ್ಷಾ ಗುಡಿ, ಅನುಪಮಾ ಉಪ್ಪಿನ, ಸುನಿತಾ ಉಪ್ಪಿನ, ಶಾಂತಕ್ಕ ಹೊಳಲದ, ಅಕ್ಕಮ್ಮ ಶೆಟ್ಟರ ಮೊದಲಾದವರು ಇದ್ದರು.

ಪೂರ್ಣಿಮಾ ಶಿವಗಿರಿ ಪ್ರಾರ್ಥಿಸಿದರು. ರೇಖಾ ಶೆಟ್ಟರ್‌ ಸ್ವಾಗತಿಸಿದರು. ಸುಭಾಸ ಹೊಸಮನಿ ಕಾರ್ಯಕ್ರಮ ನಿರೂಪಿಸಿದರು. ಸುನಿತಾ ಉಪ್ಪಿನ ವಂದಿಸಿದರು.

ಇದೇ ವೇಳೆ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರನ್ನು ಕದಳಿ ಮಹಿಳಾ ವೇದಿಕೆ ಸದಸ್ಯರು ಗೌರವಿಸಿದರು.