ಸಾರಾಂಶ
ಹನುಮಸಾಗರ: ಮಕ್ಕಳ ಶಿಕ್ಷಣದ ಬಲವರ್ಧನೆಗೆ ಗ್ರಂಥಾಲಯಗಳು ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಟಾಟಾ ಟ್ರಸ್ಟ್ ದೆಹಲಿಯ ಹಿರಿಯ ಅಧಿಕಾರಿ ಬಾಬಿ ಹೇಳಿದರು.
ಸಮೀಪದ ಸರ್ಕಾರಿ ಪ್ರಾಥಮಿಕ ಮಿಯ್ಯಾಪುರ ಶಾಲೆಯಲ್ಲಿ ಕಲಿಕಾ ಟಾಟಾ ಟ್ರಸ್ಟ್ ಮತ್ತು ಜಿಲ್ಲಾಡಳಿತ ಸಹಭಾಗಿತ್ವದಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಕಲಿಕಾ ಚೇತನ ಕಾರ್ಯಕ್ರಮವನ್ನು ಕೊಪ್ಪಳ ಮತ್ತು ಕುಷ್ಟಗಿ ತಾಲೂಕಿನ ಆಯ್ದ ಹಳ್ಳಿಗಳ ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಆ ನಿಟ್ಟಿನಲ್ಲಿ ಶಾಲೆಗೆ ಭೇಟಿ ನೀಡಿ ನಲಿ-ಕಲಿ ತರಗತಿಗಳ ವೀಕ್ಷಣೆ, ಶಿಕ್ಷಕಿಯರ ಚಟುವಟಿಕೆಯುಕ್ತ ಬೋಧನೆ, ಮಕ್ಕಳು ಪಾಲ್ಗೊಳ್ಳುವಿಕೆ ಹಾಗೂ ಅಚ್ಚುಕಟ್ಟಾದ ಗ್ರಂಥಾಲಯ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯಶಿಕ್ಷಕ ಖಾಜಾ ಹುಸೇನ ವಂಟೆಳಿ ಮಾತನಾಡಿ, ಮಕ್ಕಳ ಶಿಕ್ಷಣದ ಬಲವರ್ಧನೆಗೆ ಹೆಚ್ಚು ಪರಿಣಾಮಕಾರಿಯನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಮಕ್ಕಳು ಪ್ರತಿದಿನ ಶಾಲೆಗೆ ಬಂದು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ನಿಮಗಾಗಿ ಒಂದು ಪ್ರತ್ಯೇಕ ಗ್ರಂಥಾಲಯವನ್ನು ಮಾಡಿದೆ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಜಿಲ್ಲಾ ವ್ಯವಸ್ಥಾಪಕ ಶಿವಕುಮಾರ ಯಾದವ ಮಾತನಾಡಿ, ನಲಿ-ಕಲಿ ಬಲವರ್ಧನೆಗಾಗಿ ಹಾಕಿಕೊಂಡಿರುವ ಯೋಜನೆಗಳು ಮತ್ತು ಈ ಕಾರ್ಯದ ಗುರಿ ಮತ್ತು ಉದ್ದೇಶ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಟಾಟಾ ಟ್ರಸ್ಟ್ ನ ಕಾರ್ಯ ಶ್ಲಾಘನೀಯ ಎಂದರು.
ಟಾಟಾ ಟ್ರಸ್ಟ್ ನ ಸಂಯೋಜಕ ಬಸವರಾಜ ಹಾದಿಮನಿ, ರಾಜಕುಮಾರ. ಸುಮಂಗಲಾ ಕುದುರಿ, ನಲಿ-ಕಲಿ ಶಿಕ್ಷಕಿಯರಾದ ಶಾಂತಾಬಾಯಿ ಪಟ್ಟಣಶೆಟ್ಟಿ, ಅಕ್ಕಮಹಾದೇವಿ ಹಿರೇಮಠ, ಶಿಕ್ಷಕರಾದ ಸದಾಶಿವಯ್ಯ ಹಿರೇಮಠ, ನಾಗನಗೌಡ ಪೊಲೀಸ್ ಪಾಟೀಲ್, ಪರಶುರಾಮಪ್ಪ ನಾಗಣ್ಣನವರ, ಜಯಶ್ರೀ ಮದ್ಲೂರ, ಲಕ್ಷ್ಮೀ ವಾಲಿಕಾರ ಇದ್ದರು.