ಸಾರಾಂಶ
ರಾಷ್ಟ್ರೀಯ ಗ್ರಂ ಥಾಲಯ ಸಪ್ತಾಹದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ಧ ವಿಶೇಷ ಉಪನ್ಯಾಸ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಓದಿನ ಹವ್ಯಾಸ ಉಳ್ಳವರಿಗೆ ಗ್ರಂಥಾಲಯದ ಪುಸ್ತಕಗಳು ಸಿಹಿ ಯಾದರೆ, ಕಾಲಹರಣ ಅಥವಾ ಒತ್ತಡದ ಮನೋಭಾವದಿಂದ ಬರುವ ಓದುಗರರಿಗೆ ಕಹಿಯಾಗಲಿದೆ ಎಂದು ಐಡಿಎಸ್‌ಜಿ ನಿವೃತ್ತ ಪ್ರಾಂಶುಪಾಲ ಡಾ.ಎಸ್.ಇ.ನಟರಾಜ್ ಅಭಿಪ್ರಾಯ ಪಟ್ಟರು.ನಗರದ ಮಲ್ಲಂದೂರು ರಸ್ತೆ ಸಮೀಪದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾರ್ವ ಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯದ ಸಹಭಾಗಿತ್ವದಲ್ಲಿ ಶನಿವಾರ ರಾಷ್ಟ್ರೀಯ ಗ್ರಂ ಥಾಲಯ ಸಪ್ತಾಹದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ಧ ವಿಶೇಷ ಉಪನ್ಯಾಸ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶ್ರದ್ದೆ, ವಿನಯದಿಂದ ಪುಸ್ತಕಗಳನ್ನು ಓದುವ ರೂಢಿ ಇಂದಿನ ಯುವಜನತೆ ಮಾಡಿಕೊಳ್ಳಬೇಕು. ಇದು ವ್ಯಾಸಂಗದ ಕೊನೆ ಘಟ್ಟದಲ್ಲಿ ಸಿಹಿಯಾದ ಫಲಿತಾಂಶ ಉಣಿಸಲಿದೆ. ದೇಶದ ಹಲವಾರು ಸಾಧಕರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ನಿರರ್ಗಳ ಓದಿನ ಚಟುವಟಿಕೆಯಿಂದ ಮನ್ನಣೆಗಳಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.ಇಂದಿನ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಬೆಳವಣಿಗೆ ಹೊಂದಿರುವ ಕಾರಣ ಶಾಲಾ ಕಾಲೇಜಿನ ಪಾಠ, ಪರೀಕ್ಷಾ ಪುಸ್ತಕ ಮತ್ತು ತರಗತಿಗಳು ಮಕ್ಕಳಿಗೆ ಕುಳಿತಲ್ಲಿಯೇ ಲಭ್ಯವಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಗ್ರಂ ಥಾಲಯ ಕೇಂದ್ರ ಬದಲಾಗುವ ಸ್ಥಿತಿಯಿದೆ. ಹೀಗಾಗಿ ಎಲ್ಲವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಿದರೆ ಆರೋಗ್ಯ ಹದಗೆಡಲಿದ್ದು ನೇರವಾಗಿ ಗ್ರಂಥಾಲಯಕ್ಕೆ ತೆರಳಿ ಅಭ್ಯಾಸಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಮನುಷ್ಯನಿಗೆ ತಂತ್ರಜ್ಞಾನಗಳು ಬೇಕು, ಆದರೆ ಅತಿಯಾಗಿ ಅಳವಡಿಸಿಕೊಳ್ಳಬಾರದು. ಕೆಲವೊಮ್ಮೆ ವಿಪರೀತ ಚಟಕ್ಕೆ ಒಳಗಾಗದರೆ ಬಿಟ್ಟಿರಲಾಗದ ಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ ವಿದ್ಯಾರ್ಥಿಗಳು, ಓದುಗರ ರು ಹೆಚ್ಚು ಕಾಲ ಪುಸ್ತಕಗಳ ಓದುವ ಹವ್ಯಾಸ ಬೆಳೆಸಿಕೊಂಡರೆ ಮಾನಸಿಕವಾಗಿ ಗಟ್ಟಿಯಾಗಿ, ನೆಮ್ಮದಿ ಬದುಕು ಸಾಗಿಸಲು ಸಹಕಾರಿ ಎಂದರು.ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲ ಡಾ.ಮೂಡಲಗಿರಿಯ್ಯ ಮಾತನಾಡಿ ಪುಸ್ತಕ ಪ್ರೀತಿಸಿ, ಅಪ್ಪಿಕೊಳ್ಳುವ ಗುಣ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಇದು ವಿದ್ಯಾರ್ಥಿಗಳ ಭವಿಷ್ಯದ ಕನಸನ್ನು ಉಜ್ವಲಗೊಳಿಸಲು ಉಪಯೋಗಿಯಾಗಲಿದೆ ಎಂದು ತಿಳಿಸಿದರು.ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಉಪನ್ಯಾಸಕ ಕೃಷ್ಣಶೆಟ್ಟಿ ನಾಡಿನ ಅನೇಕ ಸಾಹಿತಿಗಳು ಜೀವಿತಾವಧಿಯಲ್ಲಿ ಅಮೂಲ್ಯ ಕೃತಿಗಳನ್ನು ರಚಿಸಿ, ಮಾದರಿ ವ್ಯಕ್ತಿಗಳಾಗಲು ಮೂಲ ಕಾರಣವೇ ಓದಿನ ಹವ್ಯಾಸ. ಆ ಓದಿನ ಮಹತ್ವ, ಅನುಕೂಲತೆಗಳನ್ನು ಸೊಗಸಾಗಿ ವಿದ್ಯಾರ್ಥಿಗಳಿಗೆ ಪರಿಚಯಿಸಿದರು.ನಗರ ಕೇಂದ್ರ ಗ್ರಂಥಾಯಾಧಿಕಾರಿ ಉಮೇಶ್ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಸ್ಪರ್ಧಾತ್ಮಕ ಸವಾ ಲುಗಳು ಹೆಚ್ಚಿವೆ. ಕಠಿಣ ಪರಿಶ್ರಮ, ನಿರಂತರ ಕಲಿಕೆಗಳು ಮಾತ್ರ ವಿದ್ಯಾರ್ಥಿಗಳನ್ನು ದೇಶದ ಸತ್ಪ್ರಜೆಗಳಾ ಗಿಸಲು ಸಾಧ್ಯ. ಹಾಗಾಗಿ ಸರ್ಕಾರ ಮಕ್ಕಳಿಗೆ ಅನುಕೂಲವಾಗಲು ಒಂದು ಲಕ್ಷ ಪುಸ್ತಕಗಳ ಶೇಖರಣೆ, ಜೊತೆಗೆ ನಗರದಾದ್ಯಂತ ನಾಲ್ಕು ಗ್ರಂಥಾಲಯ ಶಾಖೆ ಗಳನ್ನು ತೆರೆದು ಅನುಕೂಲ ಕಲ್ಪಿಸಿದೆ ಎಂದರು.ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರದ ಮುಖ್ಯಸ್ಥ ಪುಟ್ಟಸ್ವಾಮಿ, ಸಮಾಜಶಾಸ್ತ್ರದ ಮುಖ್ಯಸ್ಥ ಶಿವರಾಜು, ಐಕ್ಯೂಎಸಿ ಸಂಚಾಲಕ ದೀಕ್ಷಿತ್‌ಕುಮಾರ್, ಕಾಲೇಜಿನ ಶೀಕ್ಷಕ ಎಂ.ಎನ್.ದೇವರಾಜ್, ಗ್ರಂಥಾಪಾಲಕ ರಾಘವೇಂದ್ರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
)
)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))