ಚನ್ನಪಟ್ಟಣ: ಗ್ರಂಥಾಲಯ ಕೇವಲ ಪುಸ್ತಕ ಸಂಗ್ರಹಿಸುವ ಸ್ಥಳವಲ್ಲ. ಅದು ಜ್ಞಾನ, ಕಲ್ಪನೆ, ಸಂಶೋಧನೆ, ಚಿಂತನೆ ಮತ್ತು ವ್ಯಕ್ತಿತ್ವ ವಿಕಾಸದ ಕೇಂದ್ರವಾಗಿದೆ ಎಂದು ಗ್ರಂಥಾಲಯ ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷ ಬಿ.ಕೆ.ವೈದ್ಯೇಗೌಡ ತಿಳಿಸಿದರು

ಚನ್ನಪಟ್ಟಣ: ಗ್ರಂಥಾಲಯ ಕೇವಲ ಪುಸ್ತಕ ಸಂಗ್ರಹಿಸುವ ಸ್ಥಳವಲ್ಲ. ಅದು ಜ್ಞಾನ, ಕಲ್ಪನೆ, ಸಂಶೋಧನೆ, ಚಿಂತನೆ ಮತ್ತು ವ್ಯಕ್ತಿತ್ವ ವಿಕಾಸದ ಕೇಂದ್ರವಾಗಿದೆ ಎಂದು ಗ್ರಂಥಾಲಯ ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷ ಬಿ.ಕೆ.ವೈದ್ಯೇಗೌಡ ತಿಳಿಸಿದರು.

ತಾಲೂಕಿನ ಜೆ.ಬ್ಯಾಡರಹಳ್ಳಿ ಗ್ರಾಪಂ ಗ್ರಂಥಾಲಯ ಹಾಗೂ ಅರಿವು ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಲ್ಲಿ ಗ್ರಂಥಾಲಯ ವಿಜ್ಞಾನ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಅಭ್ಯಾಸ ಬೆಳೆಸುವುದರಿಂದ ಭಾಷಾ ಸಾಮರ್ಥ್ಯ, ಚಿಂತನಾ ಶಕ್ತಿ ಹಾಗೂ ಸೃಜನಶೀಲತೆ ವೃದ್ಧಿಯಾಗುತ್ತದೆ ಎಂದರು.

ಪಿಡಿಒ ಶ್ರೀನಿವಾಸ್ ಮಾತನಾಡಿ, ಒಳ್ಳೆಯ ಪುಸ್ತಕ ಒಳ್ಳೆಯ ಸ್ನೇಹಿತನಂತೆ. ಗ್ರಂಥಾಲಯ ಜ್ಞಾನದ ಭಂಡಾರ ಎಂಬ ಸಂದೇಶದೊಂದಿಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿದಿನ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದರು.

ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಡಾ.ವಿಜಯ್ ರಾಂಪುರ ಮಾತನಾಡಿ, ಡಾ.ಎಸ್.ಆರ್.ರಂಗನಾಥನ್ ಮದ್ರಾಸ್ ವಿಶ್ವವಿದ್ಯಾಲಯದ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದ ಅವರು ಭಾರತದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜೆ. ಬ್ಯಾಡರಹಳ್ಳಿ ಗ್ರಾಮಸ್ಥರಾದ ಬಸವರಾಜು, ಸಿದ್ದಪ್ಪಾಜಿ, ಗ್ರಾಪಂ ಸಿಬ್ಬಂದಿ ಶ್ವೇತ, ಕಾಯಕ ಮಿತ್ರ ಸುಮ, ಆಟೋ ಡ್ರೈವರ್ ಶಿವಮ್ಮ, ಬಿಲ್ ಕಲೆಕ್ಟರ್ ನವೀನ ಮುಂತಾದವರು ಹಾಜರಿದ್ದರು.

(ಸಿಂಗಲ್‌ ಕಾಲಂ ಫೋಟೋ ಬಳಸಿ ಸರ್)

ಪೊಟೋ೧೬ಸಿಪಿಟಿ೨:

ಚನ್ನಪಟ್ಟಣ ತಾಲೂಕಿನ ಜೆ.ಬ್ಯಾಡರಹಳ್ಳಿ ಗ್ರಾಮ ಪಂಚಾಯತಿ ಗ್ರಂಥಾಲಯ ಹಾಗೂ ಅರಿವು ಕೇಂದ್ರದ ಆವರಣದಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಆಚರಿಸಲಾಯಿತು.