ಸಾರಾಂಶ
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ವಿದ್ಯಾರ್ಥಿಗಳಲ್ಲಿ ಓದುವುದು ಮತ್ತು ಗ್ರಂಥಾಲಯದ ಬಳಕೆ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ನೇರ ಪರಿಣಾಮ ಸಾಹಿತ್ಯ, ಸಂಸ್ಕೃತಿಗಳ ಮೇಲೆ ಆಗುತ್ತದೆ ಎಂದು ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮುಖ್ಯಗ್ರಂಥಪಾಲಕ ರಾಜಕುಮಾರ ಕುಲಕರ್ಣಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ವಿದ್ಯಾರ್ಥಿಗಳಲ್ಲಿ ಓದುವುದು ಮತ್ತು ಗ್ರಂಥಾಲಯದ ಬಳಕೆ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ನೇರ ಪರಿಣಾಮ ಸಾಹಿತ್ಯ, ಸಂಸ್ಕೃತಿಗಳ ಮೇಲೆ ಆಗುತ್ತದೆ ಎಂದು ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮುಖ್ಯಗ್ರಂಥಪಾಲಕ ರಾಜಕುಮಾರ ಕುಲಕರ್ಣಿ ಹೇಳಿದರು.ಬವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಡಾ.ಎಸ್.ಆರ್.ರಂಗನಾಥ ಅವರ ಅಂತಾರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಡಾ.ಎಸ್.ಆರ್.ರಂಗನಾಥ ಅವರು ಮೂಲತಃ ಗ್ರಂಥಪಾಲಕರು ಆಗಿರುವುದಿಲ್ಲ. ಅವರು ಗಣಿತದ ಉಪನ್ಯಾಸಕರು, ಆ ದಿನಗಳಲ್ಲಿ ಗ್ರಂಥಾಲಯದ ಹುದ್ದೆ ಇರಲಿಲ್ಲ. ಆದರೆ ಡಾ.ಎಸ್.ಆರ್.ರಂಗನಾಥ ಅವರು ಅದರ ತರಬೇತಿಯನ್ನು ವಿದೇಶದಲ್ಲಿ ಪಡೆದುಕೊಂಡು ಬಂದು ನಮ್ಮ ದೇಶದಲ್ಲಿ ಅದಕ್ಕೆ ಒಂದು ವೈಜ್ಞಾನಿಕವಾಗಿ ಗ್ರಂಥಾಲಯಕ್ಕೆ ರೂಪ ರೇಷೆಗಳನ್ನು ನೀಡದ ಪಿತಾಮಹ ಅವರು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲದಯ ಪ್ರಾಚಾರ್ಯ ಡಾ.ರಾಜೇಶ್ವರಿ ತೆಗ್ಗಿ ಮಾತನಾಡಿ, ಗ್ರಂಥಾಲಯಗಳು ಆಧುನಿಕ ಕಾಲದ ಸರಸ್ವತಿಗಳು, ಗ್ರಂಥಾಲಯ ಸ್ನೇಹಮಹಿ ಹಾಗೂ ಜ್ಞಾನಮಹಿ ಆಗಿರುತ್ತದೆ. ಪುಸ್ತಕಗಳನ್ನು ಓದುವುದರಿಂದ ಮನಸ್ಸು ಸದೃಢವಾಗುತ್ತದೆ. ಜ್ಞಾನವನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಮಹಾವಿದ್ಯಾಲಯದ ಗ್ರಂಥಪಾಲಕಿ ಸವಿತಾ ಪಲ್ಲೇದ ಅವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಪ್ರಶಿಕ್ಷಣಾರ್ಥಿಗಳಾದ ಸಾವಿತ್ರಿ ಶಹಾಪುರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪುಂಡಲೀಕ ಕುರಿ ಮತ್ತು ಭಾಗ್ಯಶ್ರೀ ಯಾವಗಲ್ ಗ್ರಂಥಾಲಯದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಗ್ರಂಥಾಲಯದ ಸಂಯೋಜಕ ಎನ್.ಜಿ.ಸರ್ವದೆ, ಐಕ್ಯೂಎಸಿ ಸಂಯೋಜಕ ಡಾ.ಎಸ್.ಎಸ್. ಭೂಮಣ್ಣವರ, ವಿದ್ಯಾರ್ಥಿ ಒಕ್ಕೂಟದ ಕಾರ್ಯಧ್ಯಕ್ಷ ವೆಂಕಟೇಶ ರೊಡ್ಡಣ್ಣವರ, ಪ್ರಶಿಕ್ಷಣಾರ್ಥಿ ಭುವನೇಶ್ವರಿ ಮಠಪತಿ ಅವರು ನಿರೂಪಿಸಿದರು. ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು.