ಸಾರಾಂಶ
ಕನ್ನಡಪ್ರಭ ವಾರ್ತೆ ಕಡೂರು
ಮಕ್ಕಳಲ್ಲಿ ಜೀವನದ ಅನುಭವವಾದಾಗ ಶಿಕ್ಷಣಕ್ಕೆ ಒತ್ತು ನೀಡಲು ಸಾಧ್ಯವಿದ್ದು ಇದಕ್ಕೆ ಪೋಷಕರು, ಶಿಕ್ಷಕರ ಕರ್ತವ್ಯ ಹೆಚ್ಚಿದೆ ಎಂದು ಕಡೂರಿನ ಪ್ರತಿಷ್ಠಿತ ಕೆ.ಎಲ್.ವಿ.ವಿದ್ಯಾ ಸಂಸ್ಥೆಯ ಅಧ್ಯಕ್ಷೆ, ಜಿಪಂ ಮಾಜಿ ಅಧ್ಯಕ್ಷೆ ಕವಿತಾ ಬೆಳ್ಳಿಪ್ರಕಾಶ್ ಹೇಳಿದರು.ಕಡೂರು ಟೌನ್ ಪೂರ್ವ ವಲಯದ ಕ್ಲಸ್ಟರ್‌ಗಳ ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಕೆ.ಎಲ್.ವಿ ಸಂಸ್ಥೆ ವಿಶ್ವಭಾರತಿ ಶಾಲೆಯ ಆವರಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಜೀವನದ ಅನುಭವಗಳನ್ನು ಕಲಿವ ಮೂಲಕ ಒಬ್ಬರಿಗೆ ಒಬ್ಬರು ಬೇರೆಯಬೇಕು. ಇಂತಹ ಅನುಭವಗಳೆ ಮುಂದಿನ ಅವರ ಶಿಕ್ಷಣಕ್ಕೆ ಮಾರ್ಗದರ್ಶಿಯಾಗುತ್ತದೆ. ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಕಲಿಯಬೇಕು. ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಶ್ರದ್ದೆಯಿಂದ ಕಲಿತರೆ ಶಿಕ್ಷಣ ಸವಾಲಾಗುವುದಿಲ್ಲ ಮಕ್ಕಳ ಶಿಕ್ಷಣ ಕಲಿಕೆಯಲ್ಲಿ ಪೋಷಕರ ಪಾತ್ರವು ಬಹು ಮುಖ್ಯವಾಗಿದೆ. ಜೊತೆಗೆ ಶಿಕ್ಷಕರ ಪಾತ್ರವು ಹೆಚ್ಚಿದೆ. ಇಬ್ಬರಲ್ಲಿ ಸಮತೋಲನ ಇದ್ದರೆ ಉತ್ತಮ ಶಿಕ್ಷಣವನ್ನು ಮಕ್ಕಳಿಗೆ ನೀಡಲು ಸಾಧ್ಯ ಇದೆ ಎಂದರು.ಶಿಕ್ಷಕರಿಗೆ ಶಿಕ್ಷಣ ಕಲಿಕೆಗೆ ಮಾತ್ರ ಸೀಮಿತವಾಗಿರಬೇಕು. ಅವನ್ನು ಬೇರೆ ಚಟುವಟಿಕೆಗಳಿಗೆ ತೊಡಗಿಸಿದರೆ ಸಮಯ ವ್ಯರ್ಥವಾಗಿ ಕಲಿಕೆಯ ಅವಧಿಯು ಕುಂಠಿತವಾಗುತ್ತದೆ. ಶಿಕ್ಷಣ ಇಲಾಖೆ ಶಿಕ್ಷಕರಿಗಿರುವ ಇತರೆ ಹೊರೆಯನ್ನು ತಗ್ಗಿಸಿದರೆ ಉತ್ತಮ ಶಿಕ್ಷಣ ನೀಡಲು ಸಾಧ್ಯ ಇದೆ ಎಂದು ಇಲಾಖೆಯ ಗಮನ ಸೆಳೆದರು.
ಶಿಕ್ಷಣ ಇಲಾಖೆಯ ನಾಗರಾಜು ಮಾತನಾಡಿ, ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವಾಗಿದ್ದು ಕಡೂರು ಶೈಕ್ಷಣಿಕ ವಲಯದಲ್ಲಿ 20 ಕ್ಲಸ್ಟರ್ ಇದ್ದು, ಇದರಲ್ಲಿ ಪ್ರತಿ 2 ಕ್ಲಸ್ಟರ್ ಗೆ ಒಂದರಂತೆ ಕಾರ್ಯಕ್ರಮ ಅಯೋಜಿಸಲಾಗಿದೆ. ವಿಶ್ವಭಾರತಿ ಶಾಲೆಯಿಂದ ನಡೆಸುತ್ತಿರುವ ಈ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ 15 ಶಾಲೆಗಳ ಮಕ್ಕಳು ಪಾಲ್ಗೊಂಡಿದ್ದಾರೆ. ಉತ್ತಮ ಪ್ರದರ್ಶನ ನೀಡುವ ಮಕ್ಕಳನ್ನು ಮುಂದಿನ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ್ ಮಾತನಾಡಿ, ಮಕ್ಕಳು ಇಂದು ಯಾಂತ್ರಿಕ ಬದುಕು ಸಾಗಿಸುತ್ತಿದ್ದು ಮಕ್ಕಳಲ್ಲಿನ ವಿಶೇಷತೆ ಗುರುತಿಸುವ ಕೆಲಸವನ್ನು ಪ್ರತಿಭಾ ಕಾರಂಜಿಗಳ ಮೂಲಕ ಮಾಡಲಾಗುತ್ತಿದೆ ಇದಕ್ಕೆ ಇಲಾಖೆ ಮತ್ತು ಶಾಲೆಗಳು, ಪೋಷಕರ ಸಹಕಾರ ನಿರಂತರವಾಗಿದೆ ಎಂದರು.
ಶಿಕ್ಷಣ ಇಲಾಖೆಯ ಬಿಆರ್ ಪಿ ಕುಮಾರ್, ಎನ್‌ಜಿಒ. ಸಂಸ್ಥೆಯ ಪ್ರಶಾಂತ್, ಶಿಕ್ಷಕ ಬೈರಪ್ಪ, ಸಮನ್ವಯಾಧಿಕಾರಿ ರಾಘವೇಂದ್ರ, ಸುಹೇಲ್ ಮತ್ತಿತರರು ಪ್ರತಿಭಾ ಕಾರಂಜಿ ಕುರಿತು ಮಾತನಾಡಿದರು.ಕೆಎಲ್‌ವಿ ವಿದ್ಯಾಸಂಸ್ಥೆಯ ನಿರ್ದೇಶಕರಾದ ಹರಿಪ್ರಸಾದ್, ಬೀರೂರು ಅರೇಕಲ್ ಆರ್ ಪ್ರಕಾಶ್, ಸುಂದರೇಶ್, ಮಂಜುನಾಥ್, ನಾಗರತ್ನ, ಉಷಾರಾಣಿ, ಇಸಿಒ ಹರೀಶ್, ಕೃಷ್ಣಮೂರ್ತಿ, ಶ್ವೇತಾ, ಭಾಗ್ಯಜ್ಯೋತಿ ಮತ್ತು ದೃವತಾರೆ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಎನ್.ಹಾಲಸಿದ್ದಪ್ಪ, ಮಕ್ಕಳು ಪೋಷಕರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))