ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಗತ್ಯ ವಸ್ತುಗಳ ಬೆಲೆ ಏರಿಕೆ, ಪಿಂಚಣಿ ಸೌಲಭ್ಯ ಸಮಸ್ಯೆ ಹಾಗೂ ಆಶ್ರಯ ಯೋಜನೆಗಳ ಮಂಜೂರಾತಿ ವಿಳಂಬದಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಆರೋಪಿಸಿದರು.
ಬಂಟ್ವಾಳ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಗತ್ಯ ವಸ್ತುಗಳ ಬೆಲೆ ಏರಿಕೆ, ಪಿಂಚಣಿ ಸೌಲಭ್ಯ ಸಮಸ್ಯೆ ಹಾಗೂ ಆಶ್ರಯ ಯೋಜನೆಗಳ ಮಂಜೂರಾತಿ ವಿಳಂಬದಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆ ಖಂಡಿಸಿ ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.ಅನಂತಾಡಿ ಗ್ರಾಮದ ಗೋಳಿಕಟ್ಟೆಯಿಂದ ಆರಂಭವಾದ ಪ್ರತಿಭಟನಾ ಪಾದಯಾತ್ರೆ ಪಂಚಾಯಿತಿ ವಠಾರದಲ್ಲಿ ಸಮಾಪ್ತಿಗೊಂಡಿತು. ಬಳಿಕ ನಡೆದ ಸಭೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ದಿನೇಶ್ ಆಮ್ಟೂರು ಉಪಸ್ಥಿತರಿದ್ದರು. ರಾಜ್ಯ ನಾಯಕ ವಿಕಾಸ್ ಪುತ್ತೂರು ಪ್ರಧಾನ ಭಾಷಣ ಮಾಡಿದರು.ಪ್ರಮುಖರು ಭಾಗಿ: ಸಭೆಯಲ್ಲಿ ಶಕ್ತಿ ಕೇಂದ್ರ ಪ್ರಮುಖ್ ಮಹಾಬಲ ಪೂಜಾರಿ, ಬಿಜೆಪಿ ಮಂಡಲ ಕಾರ್ಯದರ್ಶಿ ಸನತ್ ಕುಮಾರ್, ಮಾಣಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಅರವಿಂದ್ ರೈ, ಕಾರ್ಯದರ್ಶಿ ನಾಗೇಶ್ ಭಂಡಾರಿ, ಅನಂತಾಡಿ ಪ್ರಭಾರಿ ಲಕಿತ ಶೆಟ್ಟಿ, ನೇರಳಕಟ್ಟೆ ಸೊಸೈಟಿ ಅಧ್ಯಕ್ಷ ಪುಷ್ಪರಾಜ್ ಚೌಟ, ಉಪಾಧ್ಯಕ್ಷರಾದ ತನಿಯಪ್ಪ ಗೌಡ ಹಾಗೂ ಅಶೋಕ್ ರೈ, ಮಾಣಿ ಶಕ್ತಿ ಕೇಂದ್ರ ಪ್ರಮುಖ್ ಹರೀಶ್ ಕುಲಾಲ್, ನೆಟ್ಲ ಮೂಡ್ನೂರು ಶಕ್ತಿ ಕೇಂದ್ರ ಪ್ರಮುಖ್ ಧನಂಜಯ ಗೌಡ, ನಾರಾಯಣ ಶೆಟ್ಟಿ ಮಾಣಿ, ದೇವಿಪ್ರಸಾದ್ ಬೆಂಜತಿಮಾರ್, ತಾಲೂಕು ಮಾಜಿ ಸದಸ್ಯೆ ಗೀತಾ, ಸುಮಿತ್ರ ಕರ್ಕೇರ, ಪಂಚಾಯತ್ ಸದಸ್ಯರಾದ ಸುಜಾತಾ ಹಾಗೂ ಸಂಧ್ಯಾ ಕುಸುಮದರ್, ಮಹಿಳಾ ಮೋರ್ಚಾದ ಸುಶೀಲ ಹಾಗೂ ವನಿತಾ, ರಮೇಶ್ ಗೌಡ, ರಾಮ್ ಪ್ರಸಾದ್ ಕೊಂಬಿಲ, ನಾರಾಯಣ ಶೆಟ್ಟಿ ಪುನ್ಕದಡಿ, ಕಿರಣ್ ಬಂಟ್ರಿಂಜ, ಶ್ರೀಧರ್, ಗಂಗಾಧರ್, ನಿತಿನ್, ಉಮೇಶ್ ನಿಡ್ಯಾರ, ಶಿವರಾಮ್ ಶೆಟ್ಟಿ, ರಮೇಶ್ ಗೌಡ ಕೆ., ವಿವೇಕ್, ನವೀನ್ ಶೆಟ್ಟಿ, ಶಶಿಕಾಂತ್ ಹಾಗೂ ಹೇಮಂತ್ ಉಪಸ್ಥಿತರಿದ್ದರು. ಬೂತ್ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿಗಳು, ಪಿಂಚಣಿ ಸಂತ್ರಸ್ತರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.