ಸಾರಾಂಶ
ಕುವೆಂಪು ಕಲಾಮಂದಿರದಲ್ಲಿ ಯುವಜನೋತ್ಸವ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುರೈತಗೀತೆಯೊಂದಿಗೆ ಸಮಾಜದಲ್ಲಿ ಪ್ರತಿಯೊಬ್ಬರೂ ಅನ್ನದಾತ ರೈತನನ್ನು ಗೌರವಿಸಿದಾಗ ಜೀವನಕ್ಕೆ ನಿಜ ಅರ್ಥ ಬರುತ್ತದೆ ಎಂದು ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಹೇಳಿದರು.ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೇರಾ ಯುವ ಭಾರತ್, ಜಿಲ್ಲಾ ಎನ್‌ಎಸ್‌ಎಸ್ ಘಟಕ, ರಾಜ್ಯ ಯುವ ಸಂಘಗಳ ಒಕ್ಕೂಟ, ಕನ್ನಡ ಜಾನಪದ ಪರಿಷತ್, ಜಿಲ್ಲಾ ಘಟಕ ಮತ್ತು ಮಹಿಳಾ ಘಟಕ, ಕರ್ನಾಟಕ ಜಾನಪದ ಪರಿಷತ್ ಹಾಗೂ ಎಲ್ಲಾ ಯುವ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಯುವಜನೋತ್ಸವದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.ಯುವಜನೋತ್ಸವದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರು ಬೀಗದೆ ಸೋತವರು ಭಾಗದೆ ಸ್ಪರ್ಧಾ ಮನೋಭಾವದಿಂದ ಭಾಗವಹಿಸುವುದು ಅಗತ್ಯ. ವಿಜೇತ ತಂಡಗಳಿಗೆ ಬಹುಮಾನ ವಿತರಿಸಲು ಹೆಮ್ಮೆ ಎನಿಸುತ್ತಿದೆ ಎಂದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್ ಮಹೇಶ್ ಮಾತನಾಡಿ, ಸಾವಿರಾರು ಯುವಕರ ಸಾಮರ್ಥ್ಯ, ಪ್ರತಿಭೆಯನ್ನು ಬಡಿದೆಚ್ಚರಿಸಿ ಮುಖ್ಯ ವಾಹಿನಿಗೆ ತರಲು ಈ ಯುವಜನೋತ್ಸವ ಸಹಕಾರಿ ಯಾಗಲಿ ಎಂದು ಹೇಳಿದರು.ಹಿಂದೆ ಯುವಜನ ಮೇಳ, ಯುವಜನೋತ್ಸವ ಗಲಾಟೆ-ಗದ್ದಲ ಇಲ್ಲದೆ ಅಂತ್ಯವಾಗುತ್ತಿರಲಿಲ್ಲ. ಆದರೆ, ಇಂದು ನಡೆದ ಯುವಜನೋತ್ಸವ ಯಾವುದೇ ತೊಂದರೆ ಗಲಾಟೆಗಳಿಲ್ಲದೆ ಯಶಸ್ವಿಯಾಗಿ ಮುಗಿದಿರುವುದು ಸಾರ್ಥಕ್ಯ ಭಾವನೆ ಎಂದರು.ರೈತ ನಾಯಕರು ಗೀತೆ ಹಾಡಿ ಎಲ್ಲರಲ್ಲೂ ಉತ್ಸಾಹ ಮೂಡಿಸಿದ್ದಾರೆ. ವಿಜ್ಞಾನ ಕೇಂದ್ರಕ್ಕೆ ಅವಕಾಶ ಮಾಡಿಕೊಟ್ಟ ಪರಿಣಾಮ ಹಲವಾರು ವಸ್ತುಪ್ರದರ್ಶನವಾಗಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.ಪ್ರಸ್ತುತ ಔಚಿತ್ಯದ ಬಗ್ಗೆ ವಿದ್ಯಾರ್ಥಿಗಳು ಅಗತ್ಯತೆ ಕುರಿತು ಅಸಂಪ್ರದಾಯಿಕ ಇಂಧನ ಬಳಕೆ ಮತ್ತು ಪರಿಸರ ಕಾಪಾಡುವ ಎಲ್ಲಾ ಪ್ರಾಜೆಕ್ಟ್‌ಗಳು ಒಂದಕ್ಕಿಂತ ಇನ್ನೊಂದು ವಿಭಿನ್ನವಾಗಿ ನೋಡುಗರ ಗಮನ ಸೆಳೆದಿದೆ ಎಂದರು.ಮುಂದಿನ ಭವಿಷ್ಯದ ದಿನಗಳಲ್ಲಿ ಯುವಕರ ಪ್ರತಿಭೆ ಹೆಚ್ಚು ಅನಾವರಣಗೊಳ್ಳಲಿ, ಈ ರೀತಿಯ ನೂರಾರು ವೇದಿಕೆಗಳು ನಿಮಗೆ ಅವಕಾಶ ಕಲ್ಪಿಸಲಿ ಎಂದು ಶುಭ ಹಾರೈಸಿದರು.ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರಾದ ಮಂಜುಳಾ ಹುಲ್ಲಳ್ಳಿ ಮಾತನಾಡಿ, ಸ್ವಾಮಿ ವಿವೇಕಾನಂದರ ಸವಿನೆನಪಿಗಾಗಿ ಜಿಲ್ಲಾಮಟ್ಟದ ಯುವಜನೋತ್ಸವ ಆಯೋಜಿಸಲಾಗಿದ್ದು, ಇಲ್ಲಿ ವಿಜೇತರಾಗಿ ಪ್ರಥಮ ಸ್ಥಾನ ಪಡೆದ ತಂಡಗಳು ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು. ಅಲ್ಲಿ ಜಯಗಳಿಸಿದ ತಂಡವನ್ನು ರಾಷ್ಟ್ರಮಟ್ಟಕ್ಕೆ ಹೋಗಲು ಜ.೧೨ ರಂದು ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ ಶಿವಾನಂದಸ್ವಾಮಿ ಮಾತನಾಡಿದರು.ಯುವಜನೋತ್ಸವದಲ್ಲಿ ನೆಡೆದ ನೃತ್ಯ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಜೈ ಭೀಮ್ ಕಲಾ ತಂಡ ಕೂದುವಳ್ಳಿ, ದ್ವಿತೀಯ ಸ್ಥಾನ ದುರ್ಗಾದೇವಿ ಕಲಾತಂಡ ಚಿಕ್ಕಮಗಳೂರು, ತೃತೀಯ ಸ್ಥಾನ ಜೆಸಿಬಿಎಮ್ ಕಾಲೇಜು ತಂಡ ಶೃಂಗೇರಿ, ಜನಪದ ಗೀತೆಯಲ್ಲಿ ಪ್ರಥಮ ಸ್ಥಾನ ಕೆ.ಪಿ ಪೂರ್ಣಚಂದ್ರ ತೇಜಸ್ವೀ ಜಾನಪದ ಕಲಾತಂಡ ಮೂಡಿಗೆರೆ, ದ್ವಿತೀಯ ಸ್ಥಾನ ಮಿತ್ರ ಜಾನಪದ ಕಲಾ ತಂಡ ಮೂಡಿಗೆರೆ, ತೃತೀಯ ಸ್ಥಾನ ಜನಮನ ಜಾನಪದ ಕಲಾತಂಡ, ವಿಜ್ಞಾನ ಪ್ರದರ್ಶನ ಪ್ರಥಮ ಸ್ಥಾನ ಡಿ ಎಕ್ಸ್‌ಪರ್ಟ್ಸ್ ಚಿಕ್ಕಮಗಳೂರು, ದ್ವಿತೀಯ ಸ್ಥಾನ ಜೂನಿಯರ್ ಕಾಲೇಜು ತಂಡ, ತೃತೀಯ ಸ್ಥಾನ ಟಿಎಂಎಸ್ ಕಾಲೇಜು ತಂಡ, ಕಥೆ ಬರವಣಿಗೆಯಲ್ಲಿ ಪ್ರಥಮ ಸ್ಥಾನ ಗಗನ.ಎಸ್. ದ್ವಿತೀಯ ಸ್ಥಾನ ತನ್ಮಯಿ ಪ್ರೇಮ್‌ಕುಮಾರ್ ತೃತೀಯ ಸ್ಥಾನ ಕೆ.ಪಿ ಸಂಗೀತ, ಕವಿತೆ ಬರವಣಿಗೆಯಲ್ಲಿ ಪ್ರಥಮ ಸ್ಥಾನ ತನ್ಮಯಿ ಪ್ರೇಮ್‌ಕುಮಾರ್, ದ್ವಿತೀಯ ಲಕ್ಷ್ಮೀ ಎಂ.ಎಂ, ತೃತೀಯ ಸಂಜಯ್ ಕೆ, ಘೋಷಣೆ ಭಾಷಣ ಪ್ರಥಮ ವರುಣ್.ಡಿ.ಆರ್ಯ, ದ್ವಿತೀಯ ಆಲಿಯಾ, ತೃತೀಯ ಪೂಜಾ, ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ ಸಂಜಯ್ ಕೆ.ಎಸ್, ದ್ವಿತೀಯ ಸ್ಥಾನ ದೃತಿ, ತೃತೀಯ ಸ್ಥಾನ ಅಭಿಷೇಕ್ ಎ.ಜಿ ಪ್ರಶಸ್ತಿ ಪಡೆದಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))