ಸಾರಾಂಶ
2019ರಲ್ಲಿ ರಂಜಿತ್ ನನ್ನು ಕೊಲೆ ಮಾಡುವ ಸಂಚು ರೂಪಿಸಿ ಹಣ ಕೊಡುವುದಾಗಿ ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದು ಕೊಂಡು ಹೋಗಿ ಮತ್ತೊಬ್ಬ ಸ್ನೇಹಿತ ವಿವೇಕ್ ಜೊತೆ ಸೇರಿಕೊಂಡು ತಲೆಗೆ ದೊಣ್ಣೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೈದಿದ್ದರು.
ಕನಕಪುರ: ಯುವಕನ ಕೊಲೆ ಆರೋಪದಡಿ ಬಂಧಿತರಾಗಿದ್ದ ಮೂವರಿಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರುಪಾಯಿ ದಂಡ ವಿಧಿಸಿ ಜಿಲ್ಲಾ ನ್ಯಾಯಲಯ ಆದೇಶ ಹೊರಡಿಸಿದೆ.
ಹಾರೋಹಳ್ಳಿ ತಾಲೂಕು ಮರಳವಾಡಿ ಹೋಬಳಿಯ ದುರ್ಗೇಗೌಡನ ದೊಡ್ಡಿ ಗ್ರಾಮದ ಯುವಕ ಕೊಲೆಯಾಗಿದ್ದನು. ಬೆಣಚುಕಲ್ಲು ದೊಡ್ಡಿ ಗ್ರಾಮದ ಪುನೀತ್ (28), ದೊಡ್ಡೂರಿನ ನಾಗರಾಜನಾಯ್ಕ(31), ಚಿಕ್ಕಮರಳವಾಡಿಯ ವಿವೇಕ್ ಅಲಿಯಾಸ್ ವಿಕ್ಕಿ(31) ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗಳಾಗಿದ್ದರೆ.ಕೊಲೆಯಾದ ಯುವಕ ರಂಜಿತ್ ಬಳಿಯಿದ್ದ ಪಲ್ಸರ್ ಬೈಕನ್ನು 40 ಸಾವಿರ ರುಪಾಯಿಗೆ ಮಾರಾಟ ಮಾಡಿದ್ದ ನಾಗರಾಜನಾಯ್ಕ ಹಾಗೂ ಪುನೀತ್ ರಂಜಿತ್ 20 ಸಾವಿರ ಹಣವನ್ನು ನೀಡಿ ಅಷ್ಟಕ್ಕೇ ಮಾರಾಟ ಮಾಡಿರುವುದಾಗಿ ಸುಳ್ಳು ಹೇಳಿದ್ದರೂ ನಿಜಾಂಶ ತಿಳಿದ ರಂಜಿತ್ ಉಳಿದ 20 ಸಾವಿರ ಹಣ ಕೊಡುವಂತೆ ಒತ್ತಡ ಹಾಕಿದ್ದನು. 2019ರಲ್ಲಿ ರಂಜಿತ್ ನನ್ನು ಕೊಲೆ ಮಾಡುವ ಸಂಚು ರೂಪಿಸಿ ಹಣ ಕೊಡುವುದಾಗಿ ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದು ಕೊಂಡು ಹೋಗಿ ಮತ್ತೊಬ್ಬ ಸ್ನೇಹಿತ ವಿವೇಕ್ ಜೊತೆ ಸೇರಿಕೊಂಡು ತಲೆಗೆ ದೊಣ್ಣೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೈದಿದ್ದರು.
ಎರಡು ದಿನ ಕಳೆದರೂ ಮಗ ಮನೆಗೆ ಬಾರದ ಹಿನ್ನೆಲೆಯಲ್ಲಿ ರಂಜಿತ್ ತಾಯಿ ಶೋಭಾ ಅವರು ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆಯನ್ನು ಕೈಗೊಂಡ ಪೊಲೀಸರಿಗೆ ಅರಣ್ಯ ಪ್ರದೇಶದಲ್ಲಿ ರಂಜಿತ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅಪರಾಧಿಗಳು ತಪ್ಪೊಪ್ಪಿಗೊಂಡಿದ್ದರು,ನಗರದ ಹೆಚ್ಚುವರಿ ಸತ್ರ ನ್ಯಾಯಾಧೀಶರಾದ ಎಚ್. ಎನ್. ಕುಮಾರ್ ವಾದ-ಪ್ರತಿವಾದ ಆಲಿಸಿ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರುಪಾಯಿ ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಕೆ ಕೆ ಪಿ ಸುದ್ದಿ 02: ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ದಂಡ ವಿಧಿಸಿದ ಜಿಲ್ಲಾ ನ್ಯಾಯಲಯ.01) ನಾಗರಾಜ ನಾಯ್ಕ
02) ಪುನೀತ್ ಕುಮಾರ್03) ವಿವೇಕ್