ರೈಲಿನಲ್ಲಿ ಜೀವವಿಮಾ ಪ್ರತಿನಿಧಿ ಹೃದಯಾಘಾತದಿಂದ ಸಾವು

| Published : Aug 22 2024, 12:53 AM IST

ರೈಲಿನಲ್ಲಿ ಜೀವವಿಮಾ ಪ್ರತಿನಿಧಿ ಹೃದಯಾಘಾತದಿಂದ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್‍ಯನಿಮಿತ್ತ ಬೆಂಗಳೂರಿಗೆ ತೆರಳಿದ್ದ ವೆಂಕಟೇಶ್ ರೈಲಿನಲ್ಲಿ ವಾಪಸ್ ಮಂಡ್ಯಕ್ಕೆ ಬರುತ್ತಿದ್ದ ವೇಳೆ ಚನ್ನಪಟ್ಟಣದ ಬಳಿ ತೀವ್ರ ಹೃದಯಾಘಾತಕ್ಕೊಳಗಾಗಿ ಕುಸಿದುಬಿದ್ದಿದ್ದಾರೆ. ಸಹ ಪ್ರಯಾಣಿಕರು ತಕ್ಷಣ ಅವರನ್ನು ಚನ್ನಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನಂತರ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲು ಕರೆತರುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಜೀವವಿಮಾ ಪ್ರತಿನಿಧಿ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ತಾಲೂಕಿನ ಪಣಕನಹಳ್ಳಿ ಪಿ.ಡಿ.ವೆಂಕಟೇಶ್ (51) ಮೃತಪಟ್ಟವರು.

ಕಾರ್‍ಯನಿಮಿತ್ತ ಬೆಂಗಳೂರಿಗೆ ತೆರಳಿದ್ದ ವೆಂಕಟೇಶ್ ರೈಲಿನಲ್ಲಿ ವಾಪಸ್ ಮಂಡ್ಯಕ್ಕೆ ಬರುತ್ತಿದ್ದ ವೇಳೆ ಚನ್ನಪಟ್ಟಣದ ಬಳಿ ತೀವ್ರ ಹೃದಯಾಘಾತಕ್ಕೊಳಗಾಗಿ ಕುಸಿದುಬಿದ್ದಿದ್ದಾರೆ. ಸಹ ಪ್ರಯಾಣಿಕರು ತಕ್ಷಣ ಅವರನ್ನು ಚನ್ನಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನಂತರ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲು ಕರೆತರುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಪಣಕನಹಳ್ಳಿಯ ರುದ್ರಭೂಮಿಯಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.ಚಿಕ್ಕಮಾದಮ್ಮ ನಿಧನ

ಮಳವಳ್ಳಿ:ಪಟ್ಟಣದ ಸಿದ್ಧಾರ್ಥ ನಗರದ ಲೇ.ಎಂ.ಎಲ್.ಚಂದ್ರಶೇಖರಯ್ಯರ ಪತ್ನಿ ಚಿಕ್ಕಮಾದಮ್ಮ (94) ವಯೋಸಹಜವಾಗಿ ನಿಧನರಾಗಿದ್ದಾರೆ. ಮೃತರು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಸೋದರತ್ತೆಯಾಗಿದ್ದು, ಇತ್ತೀಚಿಗೆ ನಿಧನರಾದ ಶಾಸಕರ ತಂದೆ ಪಿ.ಎಲ್.ಮಲ್ಲಣ್ಣರವರ ಅಕ್ಕ ಆಗಿದ್ದಾರೆ. ಮೃತರು ಸಹೋದರ ಡಾ.ಪಿ.ಎಲ್.ಗಂಗಾಧರ್, ಅಳಿಯ ಪಿ.ಎಲ್. ಅನಂತಸ್ವಾಮಿ, ಮಕ್ಕಳು,ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ಪಟ್ಟಣದ ರುದ್ರ ಭೂಮಿಯಲ್ಲಿ ನಡೆಯಿತು.ಪುಟ್ಟುಚ್ಚಮ್ಮ ನಿಧನಮಳವಳ್ಳಿ: ಪಟ್ಟಣದ ಪೇಟೆ ಗಂಗಾಮತ ಬೀದಿ ಹಾಡ್ಲಿಹುಚ್ಚಮ್ಮನಕೇರಿಯ ನಿವಾಸಿ ಲೇ.ದಾಳಯ್ಯನ ಕರಿಯಪ್ಪರ ಪತ್ನಿ ಪುಟ್ಟುಚ್ಚಮ್ಮ (90) ನಿಧನರಾದರು. ಅವರಿಗೆ ಪುತ್ರಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಅಂತ್ಯಕ್ರಿಯೆ ಸುಣ್ಣುಸುಡುವ ರುದ್ರಭೂಮಿಯಲ್ಲಿ ಬುಧವಾರ ಮಧ್ಯಾಹ್ನ ನಡೆಯಿತು.