ಶುದ್ಧ ಮನಸಿನಿಂದ ಪರಮಾತ್ಮನ ಸ್ಮರಿಸಿದಲ್ಲಿ ಜೀವನ ಪಾವನ

| Published : Aug 05 2024, 12:33 AM IST

ಶುದ್ಧ ಮನಸಿನಿಂದ ಪರಮಾತ್ಮನ ಸ್ಮರಿಸಿದಲ್ಲಿ ಜೀವನ ಪಾವನ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಮಂತಿಕೆ ಇದ್ದಾಗ ದಾನ, ಧರ್ಮ ಮಾಡುವುದು, ದೇಹದಲ್ಲಿ ಶಕ್ತಿ ಇದ್ದಾಗ ಸೇವಾ ಕೈಂಕರ್ಯ ಮಾಡುವುದು ಮತ್ತು ಉತ್ತಮ ಗುಣ ಹೊಂದಿದ್ದಾಗ ಸತ್ಕಾರ್ಯಗಳನ್ನು ರೂಢಿಸಿಕೊಳ್ಳುವುದನ್ನು ಮಾನವರು ಮಾಡಬೇಕು ಎಂದು ಹಿರೇಕಲ್ಮಠದ ಸ್ಥಿರ ಪಟ್ಟಾಧ್ಯಕ್ಷರಾದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೊನ್ನಾಳಿಯಲ್ಲಿ ನುಡಿದಿದ್ದಾರೆ.

- ನಾಗರ ಪಂಚಮಿ ಅಮಾವಾಸ್ಯೆ ಧರ್ಮಸಭೆಯಲ್ಲಿ ಹಿರೇಕಲ್ಮಠ ಶ್ರೀ ಆಶೀರ್ವಚನ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಶ್ರೀಮಂತಿಕೆ ಇದ್ದಾಗ ದಾನ, ಧರ್ಮ ಮಾಡುವುದು, ದೇಹದಲ್ಲಿ ಶಕ್ತಿ ಇದ್ದಾಗ ಸೇವಾ ಕೈಂಕರ್ಯ ಮಾಡುವುದು ಮತ್ತು ಉತ್ತಮ ಗುಣ ಹೊಂದಿದ್ದಾಗ ಸತ್ಕಾರ್ಯಗಳನ್ನು ರೂಢಿಸಿಕೊಳ್ಳುವುದನ್ನು ಮಾನವರು ಮಾಡಬೇಕು ಎಂದು ಹಿರೇಕಲ್ಮಠದ ಸ್ಥಿರ ಪಟ್ಟಾಧ್ಯಕ್ಷರಾದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಪಟ್ಟಣದ ಹಿರೇಕಲ್ಮಠದಲ್ಲಿ ನಾಗರ ಪಂಚಮಿ ಅಮಾವಾಸ್ಯೆ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಧರ್ಮಸಭೆ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಜೀವನ ಪಾವನವಾಗಲು ಶುದ್ಧ ಮನಸ್ಸಿನಿಂದ ಪರಮಾತ್ಮನನ್ನು ಸ್ಮರಿಸಬೇಕು. ನಿಷ್ಕಳಂಕ ಗುಣ ಹೊಂದಿ ಸದಾ ಭಗವಂತನನ್ನು ನೆನೆದರೆ ಮಾತ್ರ ನಮ್ಮ ಇಷ್ಠಾರ್ಥಗಳು ಈಡೇರಲಿಕ್ಕೆ ಸಾಧ್ಯ ಎಂದು ಹೇಳಿದರು.

ಹರಪೂಜೆ, ಗುರು ಸೇವೆ ಮಾಡುವುದರೊಂದಿಗೆ ಹೆತ್ತ ತಂದೆ ತಾಯಿಗಳನ್ನು ಅತ್ಯಂತ ಜಾಗೂರಕತೆಯಿಂದ ನೋಡಿಕೊಂಡು ಸೇವೆ ಮಾಡಿದರೆ ಪಣ್ಯ ಲಭಿಸುತ್ತದೆ. ಕೊರೋನಾ ಹಾವಳಿ ಅವಧಿಯಲ್ಲಿ ಪ್ರತಿ ತಿಂಗಳು ನಡೆಯುವ ಮಧ್ಯಾಹ್ನದ ಅಮಾವಾಸ್ಯೆ ಧರ್ಮಸಭೆ ಸ್ಥಗಿತಗೊಳಿಸಲಾಗಿತ್ತು. ಇಂದಿನ ನಾಗರ ಅಮಾವಾಸ್ಯೆಯಿಂದ ಎಂದಿನಂತೆ ಮಧ್ಯಾಹ್ನದ ವೇಳೆಯಲ್ಲಿ ಅಮಾವಾಸ್ಯೆ ಧರ್ಮ ಸಭೆ ಹಮ್ಮಿಕೊಳ್ಳಲಾಗುವುದು. ಸಂಜೆ ವೇಳೆ ಶ್ರೀ ಚನ್ನೇಶ್ವರ ಬೆಳ್ಳಿ ರಥೋತ್ಸವ ಹಾಗೂ ಸಂಸ್ಕೃತಿ- ಸಂಸ್ಕಾರ ಕಾರ್ಯಕ್ರಮ ಎಂದಿನಂತೆ ಮುಂದುವರಿಯುತ್ತವೆ ಎಂದು ಹೇಳಿದರು.

ಶ್ರಾವಣ ಮಾಸದ ಒಂದು ತಿಂಗಳ ಕಾಲ ನಡೆಯುವ ಪೂಜಾ ಕಾರ್ಯಕ್ರಮಗಳು, ವೀರಭದ್ರ ದೇವರ ಕೆಂಡದರ್ಚನೆ ಮತ್ತು ರಥೋತ್ಸವ ಸೇರಿದಂತೆ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತರು ತನು, ಮನ, ಧನ ಅರ್ಪಿಸುವಂತೆ ತಿಳಿಸಿದರು.

2020ರಲ್ಲಿ ಶ್ರೀಮಠದಲ್ಲಿ ನಡೆದ ರಾಜ್ಯಮಟ್ಟದ ಕೃಷಿ ಮೇಳಕ್ಕೆ ಆಗಮಿಸಿದ್ದ 8 ಲಕ್ಷ ಜನರಿಗೆ ಉಣಬಡಿಸಲು ಮಲೇಬೆನ್ನೂರು ಗ್ರಾಮದ ರೇಣುಕಾ ರೈಸ್‌ಮಿಲ್ ಇಂಡಸ್ಟ್ರೀಸ್ ಮಾಲೀಕ ನಂಜಯ್ಯ ಅವರು ಅಕ್ಕಿ ದೇಣಿಗೆಯಾಗಿ ನೀಡಿದ್ದರು. ಇಂದು ಅಮಾವಾಸ್ಯೆ ಹಿನ್ನೆಲೆ ಬಂದಿರುವ ಎಲ್ಲ ಭಕ್ತರಿಗೆ ಅವರು ಪ್ರಸಾದದ ವ್ಯವಸ್ಥೆ ಮಾಡಿದ್ದಾರೆ. ಈ ಸತ್ಕಾರ್ಯ ಶ್ಲಾಘನೀಯ ಎಂದರು.

ಮಲೇಬೆನ್ನೂರು ವರ್ತಕರಾದ ಬಿ.ಎಂ.ನಂಜಯ್ಯ, ಶ್ರೀ ಮಠದ ಕಾರ್ಯಕರ್ತರಾದ ಚನ್ನಯ್ಯ ಬೆನ್ನೂರಮಠ, ರುದ್ರಪ್ಪ ಇತರರು ಇದ್ದರು.

- - - -4ಎಚ್.ಎಲ್.ಐ2:

ಹೊನ್ನಾಳಿ ಹಿರೇಕಲ್ಮಠದಲ್ಲಿ ನಾಗರ ಪಂಚಮಿ ಅಮಾವಾಸ್ಯೆ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.