ಸಾರಾಂಶ
ದುಶ್ಚಟಗಳಿಗೆ ಬಲಿಯಾಗುವ ಮೂಲಕ ಇಂದಿನ ಯುವ ಪೀಳಿಗೆ ತಮ್ಮ ಭವಿಷ್ಯದಲ್ಲಿ ತೊಂದರೆ ಅನುಭವಿಸುವುದನ್ನು ಎಲ್ಲೆಡೆಯೂ ಕಾಣಬಹುದಾಗಿದೆ. ಉತ್ತಮ ಆರೋಗ್ಯ, ನೆಮ್ಮದಿಯುತ ಜೀವನಕ್ಕಾಗಿ, ಶೈಕ್ಷಣಿಕ ಸಾಧನೆಗಾಗಿ ದುಶ್ಚಟಗಳಿಂದ ದೂರವಿರಬೇಕು ಎಂದು ಜೆವಿ ಮಂಡಳದ ಧುರೀಣ ಡಾ.ಜೆ.ಬಿ. ಆಲಗೂರ ಹೇಳಿದರು.
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ದುಶ್ಚಟಗಳಿಗೆ ಬಲಿಯಾಗುವ ಮೂಲಕ ಇಂದಿನ ಯುವ ಪೀಳಿಗೆ ತಮ್ಮ ಭವಿಷ್ಯದಲ್ಲಿ ತೊಂದರೆ ಅನುಭವಿಸುವುದನ್ನು ಎಲ್ಲೆಡೆಯೂ ಕಾಣಬಹುದಾಗಿದೆ. ಉತ್ತಮ ಆರೋಗ್ಯ, ನೆಮ್ಮದಿಯುತ ಜೀವನಕ್ಕಾಗಿ, ಶೈಕ್ಷಣಿಕ ಸಾಧನೆಗಾಗಿ ದುಶ್ಚಟಗಳಿಂದ ದೂರವಿರಬೇಕು ಎಂದು ಜೆವಿ ಮಂಡಳದ ಧುರೀಣ ಡಾ.ಜೆ.ಬಿ. ಆಲಗೂರ ಹೇಳಿದರು.ಪಟ್ಟಣದ ಗುರುಕುಲ ಆವರಣದಲ್ಲಿರುವ ಜಿನಸೇನಾಚಾರ್ಯ ಮಂಗಲ ಕಾರ್ಯಾಲಯದಲ್ಲಿ ಬಾಹುಬಲಿ ವಿದ್ಯಾಪೀಠಾಂತರ್ಗತ ಜೆವಿ ಮಂಡಳದ ಗ್ರಾಮೀಣ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಸಂಸ್ಥೆಯ ಪಾಲಿಟೆಕ್ನಿಕ್ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ.ಎಸ್‌ಪಿ. ರಾಜೂರ ಉಪನ್ಯಾಸ ನೀಡಿದರು. ಸಂಸ್ಥೆಯ ಖಜಾಂಚಿ ಡಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಲಿಂಗಾನಂದ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಡಾ.ಶರಣಬಸವೇಶ್ವರ ನುಚ್ಚಿ ಪ್ರತಿಜ್ಞಾವಿಧಿ ಬೋಧಿಸಿದರು. ಸಂಸ್ಥೆಯ ಅಧ್ಯಕ್ಷ ಟಿ.ಸಿ.ಪಡಸಲಗಿ, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎಂ.ಎನ್. ಬಡಿಗೇರ, ಡಾ.ಅರುಣ ಅಂಬಿ, ಡಾ.ಬಿ.ಎಸ್. ಜಂಬಗಿ ಸೇರಿದಂತೆ ಎರೆಡು ಕಾಲೇಜುಗಳ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ದಿನಾಚರಣೆ ಪ್ರಯುಕ್ತ ನಡೆಸಿದ ಪ್ರಬಂಧ, ಭಿತ್ತಿಚಿತ್ರ ಪ್ರಸ್ತುತಿ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ಡಾ.ಸೌಭಾಗ್ಯಾ ಮಠಪತಿ ಹಾಗೂ ಡಾ.ಸುಹಾಸಿನಿ ದಂಡಗಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಡಾ.ಟಿ.ಪಿ. ಅಥಣಿ ವಂದಿಸಿದರು. ಈ ವೇಳೆ ಜಾಗೃತಿ ಜಾಥಾ ನಡೆಯಿತು.