ನಾವೆಲ್ಲ ಒಂದು ಎಂಬ ಭಾವನೆಯಿಂದ ನಡೆದರೆ ಜೀವನ ಸಾರ್ಥಕ

| Published : Oct 02 2024, 01:13 AM IST

ಸಾರಾಂಶ

ಮಾನವ ಜನ್ಮ ಬಹು ದೊಡ್ಡದು. ಇರುವಷ್ಟು ಜೀವನದಲ್ಲಿ ಜಾತಿಯ ವಿಷ ಬೀಜ ಬಿತ್ತಿಕೊಂಡು ಹೊಡಿಬಡಿ ಮಾಡದೇ ನಾವು ಮಾನವರು ಒಂದು ಎನ್ನುವಂತ ಭಾವನೆಯಿಂದ ತಿಳಿದುಕೊಂಡಾಗ ಮಾತ್ರ ಮನುಷ್ಯನ ಜನ್ಮ ಸಾರ್ಥಕವಾಗಲಿದೆ ಎಂದು ಶಿರಟ್ಟಿಯ ಫಕೀರ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ಸವಣೂರು: ಮಾನವ ಜನ್ಮ ಬಹು ದೊಡ್ಡದು. ಇರುವಷ್ಟು ಜೀವನದಲ್ಲಿ ಜಾತಿಯ ವಿಷ ಬೀಜ ಬಿತ್ತಿಕೊಂಡು ಹೊಡಿಬಡಿ ಮಾಡದೇ ನಾವು ಮಾನವರು ಒಂದು ಎನ್ನುವಂತ ಭಾವನೆಯಿಂದ ತಿಳಿದುಕೊಂಡಾಗ ಮಾತ್ರ ಮನುಷ್ಯನ ಜನ್ಮ ಸಾರ್ಥಕವಾಗಲಿದೆ ಎಂದು ಶಿರಟ್ಟಿಯ ಫಕೀರ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಯಲವಿಗಿ ಗ್ರಾಮದಲ್ಲಿ ಶ್ರೀ ೧೦೮ ತಪಸ್ವಿ ಶ್ರೀ ಮಲ್ಲಯ್ಯಜ್ಜನವರ ೨೪ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ೮ ದಿನಗಳಿಂದ ನಿರಂತರವಾಗಿ ಜರುಗುತ್ತಿರುವ ಶ್ರೀ ಲಚ್ಚಣ ಸಿದ್ದಲಿಂಗ ಮಹಾರಾಜರ ಪುರಾಣ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಭೂಮಿಯ ಮೇಲೆ ಮನುಷ್ಯ ಒಂದು ಸಾರಿ ಜನ್ಮ ತಳಿದು ಬರುತ್ತಾನೆ. ಅವನು ಜನಿಸುವ ಸಮಯದಲ್ಲಿ ಇಂತಹ ಜಾತಿಯಲ್ಲಿಯೇ ಹುಟ್ಟಬೇಕು ಅಂತ ಅರ್ಜಿ ಹಾಕಿರುವುದಿಲ್ಲ. ಮಾನವನ ಸಹಜ ಗುಣ ಜನ್ಮ ತಾಳಬೇಕು ತಾಳುತ್ತಾನೆ ಆದರೆ, ಹುಟ್ಟಿದ ನಂತರ ಮನುಷ್ಯನಾಗಿ ಜೀವನದಲ್ಲಿ ಮುಂದೇ ಸಾಗಬೇಕು ವಿನಃ ಜಾತಿ ಜಾತಿಗಳ ಮಧ್ಯ ವಿಷ ಬೀಜ ಬಿತ್ತಿ ಸಮಾಜದಲ್ಲಿ ಕೋಲಾಹಲ ಸೃಷ್ಟಿಸದೇ ಮಾನವ ಜನ್ಮ ಒಂದೇ ಎಂದು ನಡೆದರೆ ಮಾನವ ಕುಲಕ್ಕೆ ಮುಕ್ತಿ ಸಿಗುತ್ತದೆ. ಸಮಾಜದಲ್ಲಿ ಶಾಂತಿ ನೆಲಸಲು ಸಾಧ್ಯವಾಗುತ್ತದೆ ಎಂದು ಯಲವಿಗಿ ಗ್ರಾಮದ ಸಾರ್ವಜನಿಕರು ಶಾಂತತೆಯಿಂದ ಎಲ್ಲರನ್ನು ಒಗ್ಗಟಿನಿಂದ ತಪಸ್ವಿ ಶ್ರೀ ಮಲ್ಲಯ್ಯಜ್ಜನವರ ೨೪ನೇ ಪುಣ್ಯ ಸ್ಮರಣೋತ್ಸವದ ನಿರಂತರವಾಗಿ ನಡೆಸುತ್ತಿರುವದು ಮನಸ್ಸಿಗೆ ಉಲ್ಲಾಸವನ್ನು ನೀಡಿದೆ ಎಂದು ಆಶೀರ್ವದಿಸಿದರು.ಬಳಿಕ ಗ್ರಾಮದೇವಿ ದೇವಸ್ಥಾನದಿಂದ ಹೊರಟ ಮೆರವಣಿಗೆ ಶ್ರೀ ಮಲ್ಲಯ್ಯಜ್ಜನವರ ಮಠದವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಮೆರವಣಿಗೆಯಲ್ಲಿ ವಿಶೇಷವಾಗಿ ಗ್ರಾಮದ ತಾಯಂದಿರು ಬುತ್ತಿ ಪೂಜೆಯ ಮೂಲಕ ತಮ್ಮ ತಮ್ಮ ಮನೆಯಲ್ಲಿ ವಿಧವಿಧವಾಗಿ ತಯಾರಿಸಿರುವ ಅಡುಗೆಯನ್ನು ಬಿದಿರಿನ ಬುಟ್ಟಿಯಲ್ಲಿಟ್ಟುಕೊಂಡು ಮೆರವಣಿಗೆಯ ದಾರಿ ಉದ್ದಕ್ಕೂ ನಡೆದುಕೊಂಡು ಬಂದು ಸೇವೆ ಸಲ್ಲಿಸಿದರು. ರೈತರು ತಮ್ಮ ಎತ್ತು ಚಕ್ಕಡಿಗಳನ್ನು ಶೃಂಗರಿಸಿಕೊಂಡು ತಮ್ಮ ಚಕ್ಕಡಿಯಲ್ಲಿ ಮಠಾಧೀಶರನ್ನು ಹಾಗೂ ಗ್ರಾಮದ ಗುರುಗಳು, ಗುರುಹಿರಿಯರನ್ನು ಕೂರಿಸಿಕೊಂಡು ಬರುವುದು ಈ ಮೆರವಣಿಗೆಗೆ ವಿಶೇಷ ಕಳೆ ತಂದು ಕೊಟ್ಟಿತು. ಪುರಾಣ ಪ್ರವಚನ ಕಾರ್ಯಕ್ರಮದ ಸಾನಿಧ್ಯವನ್ನು ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಬೂಡರ್ ಕಟ್ಟಿ ಮಡಿವಾಳೇಶ್ವರ ಮಠ ಶಿವ ಪಂಚಾಕ್ಷರಿ ಮಹಾಸ್ವಾಮಿಗಳು, ಇಂಗಳಗೇರಿ ಕಾಶಿಲಿಂಗೇಶ್ವರಮಠ ಮಾತೋಶ್ರೀ ಅಕ್ಕಮಹಾದೇವಿ, ಗೋನಾಳ ಧ್ಯಾನ ಮತ್ತು ಯೋಗಾಶ್ರಮ ಶ್ರೀ ರಮೇಶ ಅಜ್ಜನವರು, ಶಂಕ್ರಯ್ಯ ಫಕೀರಯ್ಯ ಹಿರೇಮಠ, ಸಿದ್ದಲಿಂಗಯ್ಯ, ಬಸವಣ್ಣಯ್ಯ ಬರಗುಂಡಿಮಠ ಹಾಗೂ ನಂದಿ ಬಸವೇಶ್ವರ ಸೇವಾ ಸಮಿತಿಯ ಸದಸ್ಯರು, ಗ್ರಾಮದ ಗುರು ಹಿರಿಯರು ತಾಯಂದಿರು ಸಕಲ ಸದ್ಭಕ್ತರು ಉಪಸ್ಥಿತರಿದ್ದರು.