ಸಾರಾಂಶ
ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರ ನೀಡುವುದು ಅಗತ್ಯವಾಗಿದೆ. ಹಣ ಗಳಿಸುವುದೊಂದೇ ಶಿಕ್ಷಣದ ಉದ್ದೇಶವಾಗಬಾರದು. ಜೀವನ ಹೇಗೆ ಮಾಡಬೇಕು ಎಂದು ಕಲಿಸುವ ಶಿಕ್ಷಣ ಅಗತ್ಯವಿದೆ ಎಂದು ರಬಕವಿಯ ಖ್ಯಾತ ಜಾನಪದ ಸಾಹಿತಿ ಶ್ರೀಕಾಂತ ಕೆಂದೂಳಿ ಹೇಳಿದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರ ನೀಡುವುದು ಅಗತ್ಯವಾಗಿದೆ. ಹಣ ಗಳಿಸುವುದೊಂದೇ ಶಿಕ್ಷಣದ ಉದ್ದೇಶವಾಗಬಾರದು. ಜೀವನ ಹೇಗೆ ಮಾಡಬೇಕು ಎಂದು ಕಲಿಸುವ ಶಿಕ್ಷಣ ಅಗತ್ಯವಿದೆ ಎಂದು ರಬಕವಿಯ ಖ್ಯಾತ ಜಾನಪದ ಸಾಹಿತಿ ಶ್ರೀಕಾಂತ ಕೆಂದೂಳಿ ಹೇಳಿದರು.ಸ್ಥಳೀಯ ಶ್ರೀಮತಿ ಸುಶಿಲಾತಾಯಿ ವೈ. ಕುಲಗೋಡ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದ 2024-25ನೇ ಶೈಕ್ಷಣಿಕ ಸಾಲಿನ ವಾರ್ಷಿಕ ದಿನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ವಿದ್ಯಾರ್ಥಿಗಳು ದುಷ್ಟರ ಸಹವಾಸ, ಕೆಟ್ಟ ಸಂಸ್ಕಾರಗಳಿಂದ ದೂರವಿದ್ದು, ಉತ್ತಮರ ಸಂಘ ಮಾಡಿ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು.
ದ್ವಿತೀಯ ಪಿ.ಯು.ಸಿ.ಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ವಿಭಾಗಾವಾರು ವಿದ್ಯಾರ್ಥಿಗಳನ್ನು, ನೂರಕ್ಕೆ ನೂರು ಅಂಕ ಪಡೆದವರನ್ನು, ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ವಿದ್ಯಾಪ್ರಸಾರಕ ಸಮಿತಿಯ ಅಧ್ಯಕ್ಷ ಟಿ.ದಾಮೋದರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎಂ.ಬಿ. ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಆರ್. ಪಮ್ಮಾರ ಪರಿಚಯಸಿದರು. ಬಿ.ವೈ. ತಳವಾರ ವಾರ್ಷಿಕ ವರದಿ ವಾಚಿಸಿದರು. ರಾಮವ್ವ ಪೂಜಾರ ವಂದಿಸಿದರು. ಡಾ. ಆರ್.ಎಲ್. ಕುಳ್ಳೂರ ಹಾಗೂ ಎಸ್.ಆರ್. ಗೋಲನ್ನವರ ನಿರೂಪಿಸಿದರು.