ಸಾರಾಂಶ
ಯೋಗ ಕೇಂದ್ರದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಅಪರೂಪ ಮತ್ತು ಸ್ತುತ್ಯಾರ್ಹ. ನಿವೃತ್ತರ ಬದುಕು ಹಸನಾಗಲಿ ಎಂದು ಆಶಿಸಿದರು. ಇತಿಹಾಸ ತಜ್ಞ ಸಂತೆಬಾಚಹಳ್ಳಿ ರಂಗಸ್ವಾಮಿ ನಿವೃತ್ತ ನಂತರ ಆರೋಗ್ಯ ಪೂರ್ಣ ಜೀವನ ಹೇಗೆ ನಡೆಸಬೇಕು .
ಕನ್ನಡಪ್ರಭ ವಾರ್ತೆ ಕೆ.ಆರ್. ಪೇಟೆ
ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರನ್ನು ಪಟ್ಟಣದಲ್ಲಿ ಅಭಿನಂದಿಸಲಾಯಿತು.ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯ ಬುದ್ಧ - ಬಸವ - ಅಂಬೇಡ್ಕರ್ ಯೋಗ ಕೇಂದ್ರದಲ್ಲಿ ಯೋಗ ಗುರು ಅಲ್ಲಮಪ್ರಭು ನೇತೃತ್ವದಲ್ಲಿ ಅಭಿನಂದಿಸಲಾಯಿತು.
ತಾಲೂಕಿನ ಎಸ್.ಸಿ/ಎಸ್.ಟಿ ಶಿಕ್ಷಕರ ಸಂಘದ ಅಧ್ಯಕ್ಷ ಹಳಿಯೂರು ಯೋಗೇಶ್ ಮಾತನಾಡಿ, ಹಣ್ಣು ಮಾಗಿ ಕಂಪನ್ನು ಹೊರಸೂಸುವಂತೆ ವಯೋಮಿತಿ ಸಹಜ ನಿವೃತ್ತಿಯಾದ ತಾಲೂಕಿನ ಏಳು ಶಿಕ್ಷಕರು ನೂರಾರು ವಿದ್ಯಾರ್ಥಿಗಳ ಪಾಲಿನ ಬಹುಪಯೋಗಿ ಗುಣಮಟ್ಟದ ಶಿಕ್ಷಣ ನೀಡಿದ ಸಂತೃಪ್ತಿ ಸಮಾಧಾನ ಅವರಿಗಿದೆ. ಮುಗ್ಧ ಮನಸ್ಸಿನ ಶಿಕ್ಷಕರು ಎಲೆಮರೆ ಕಾಯಿಯಂತೆ ತಮ್ಮ ವೃತ್ತಿ ಜೀವನದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಮಾಡಿ ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ ಎಂದು ಹೇಳಿದರು.ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಜಿ.ಎಸ್. ಮಂಜು ಮಾತನಾಡಿ, ಯೋಗ ಕೇಂದ್ರದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಅಪರೂಪ ಮತ್ತು ಸ್ತುತ್ಯಾರ್ಹ. ನಿವೃತ್ತರ ಬದುಕು ಹಸನಾಗಲಿ ಎಂದು ಆಶಿಸಿದರು. ಇತಿಹಾಸ ತಜ್ಞ ಸಂತೆಬಾಚಹಳ್ಳಿ ರಂಗಸ್ವಾಮಿ ನಿವೃತ್ತ ನಂತರ ಆರೋಗ್ಯ ಪೂರ್ಣ ಜೀವನ ಹೇಗೆ ನಡೆಸಬೇಕು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರಾದ ಜ್ಞಾನೇಶ್, ಕೃಷ್ಣನಾಯಕ್, ವೀರಭದ್ರಯ್ಯ, ಸಿ.ಆರ್.ಪಿ ರಾಮಚಂದ್ರ, ಉಪನ್ಯಾಸಕ ಶ್ರೀಧರ್, ಶಿಕ್ಷಕರಾದ ಮಹೇಶ್, ತಿಲಕ್‌ರಾಮ್, ಪ್ರಕಾಶ್, ಇಂದ್ರಕುಮಾರ್, ಕಾವೇರಿ ಟೈಲರ್ ವಾಸು ಹಾಗೂ ನಿವೃತ್ತ ಶಿಕ್ಷಕರಾದ ಬೋರಲಿಂಗನಾಯಕ್, ಶಿವಲಿಂಗಪ್ಪ, ದೊಡ್ಡೇಗೌಡ, ಜಗದೀಶ್, ಮಂಜೇಗೌಡ, ಗೋಪಾಲ, ಪ್ರಕಾಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.