ಸಾರಾಂಶ
ಬೆಳಕು ಜ್ಞಾನದ ಸಂಕೇತ, ದೀಪಕ್ಕೆ ಅಗಾಧವಾದ ಶಕ್ತಿಯಿದೆ. ಸಮಾಜಕ್ಕೆ ಜ್ಞಾನದ ಮೂಲಕ ಬೆಳಕು ಪಸರಿಸಿ ಧಾರ್ಮಿಕ ಭಾವನೆಗಳ ಮೂಲಕ ಶಾಂತಿ ನೆಲೆಸುವಂತೆ ಮಾಡುತ್ತದೆ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು. ದೇವರಹೊಸಹಳ್ಳಿ ಗ್ರಾಮದ ಭದ್ರಕಾಳಮ್ಮ ಹಾಗೂ ವೀರಭದ್ರೇಶ್ವರ ದೇವಾಲಯದಲ್ಲಿ ನಡೆದ ಕಾರ್ತಿಕ ಮಾಸ ಪೂಜೆಯ ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಹೊರಗಿನ ಕತ್ತಲೆ ಕಳೆಯಲು ದೀಪ ಬೇಕು, ಅಜ್ಞಾನವೆಂಬ ಕತ್ತಲೆ ಕಳೆಯಲು ಗುರು ಬೇಕು. ಅರಿವು, ಆದರ್ಶಗಳ ಪರಿಪಾಲನೆಯಿಂದ ಜೀವನ ಉಜ್ವಲಗೊಳ್ಳುತ್ತದೆ, ಕಾರ್ತೀಕ ಮಾಸದ ಲಕ್ಷದೀಪೋತ್ಸವ ಪರಮಾತ್ಮನಿಗೆ ಅತಿ ಪ್ರಿಯವಾದ ಸೇವೆ. ಭಕ್ತರ ಜ್ಞಾನದ ಹಸಿವನ್ನು ನೀಗಿಸಿ ಸುಜ್ಞಾನ ಜ್ಯೋತಿಯನ್ನು ಬೆಳಗಿಸಿ ಪಾವನಗೊಳಿಸುವ ಧಾರ್ಮಿಕ ಪ್ರಜ್ಞೆಯ ಬಗ್ಗೆ ಜಾಗೃತಿಗೊಳಿಸುವ ಕಾರ್ಯಕ್ರಮವಾಗಿದೆ ಎಂದರು.
ದಾಬಸ್‌ಪೇಟೆ : ಬೆಳಕು ಜ್ಞಾನದ ಸಂಕೇತ, ದೀಪಕ್ಕೆ ಅಗಾಧವಾದ ಶಕ್ತಿಯಿದೆ. ಸಮಾಜಕ್ಕೆ ಜ್ಞಾನದ ಮೂಲಕ ಬೆಳಕು ಪಸರಿಸಿ ಧಾರ್ಮಿಕ ಭಾವನೆಗಳ ಮೂಲಕ ಶಾಂತಿ ನೆಲೆಸುವಂತೆ ಮಾಡುತ್ತದೆ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು. ದೇವರಹೊಸಹಳ್ಳಿ ಗ್ರಾಮದ ಭದ್ರಕಾಳಮ್ಮ ಹಾಗೂ ವೀರಭದ್ರೇಶ್ವರ ದೇವಾಲಯದಲ್ಲಿ ನಡೆದ ಕಾರ್ತಿಕ ಮಾಸ ಪೂಜೆಯ ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೊರಗಿನ ಕತ್ತಲೆ ಕಳೆಯಲು ದೀಪ ಬೇಕು, ಅಜ್ಞಾನವೆಂಬ ಕತ್ತಲೆ ಕಳೆಯಲು ಗುರು ಬೇಕು. ಅರಿವು, ಆದರ್ಶಗಳ ಪರಿಪಾಲನೆಯಿಂದ ಜೀವನ ಉಜ್ವಲಗೊಳ್ಳುತ್ತದೆ, ಕಾರ್ತೀಕ ಮಾಸದ ಲಕ್ಷದೀಪೋತ್ಸವ ಪರಮಾತ್ಮನಿಗೆ ಅತಿ ಪ್ರಿಯವಾದ ಸೇವೆ. ಭಕ್ತರ ಜ್ಞಾನದ ಹಸಿವನ್ನು ನೀಗಿಸಿ ಸುಜ್ಞಾನ ಜ್ಯೋತಿಯನ್ನು ಬೆಳಗಿಸಿ ಪಾವನಗೊಳಿಸುವ ಧಾರ್ಮಿಕ ಪ್ರಜ್ಞೆಯ ಬಗ್ಗೆ ಜಾಗೃತಿಗೊಳಿಸುವ ಕಾರ್ಯಕ್ರಮವಾಗಿದೆ ಎಂದರು.ಗುರುವಣ್ಣದೇವರ ಮಠದ ನಂಜುಂಡ ಸ್ವಾಮೀಜಿ ಮಾತನಾಡಿ ಕತ್ತಲು ನಮ್ಮೊಳಗಿದೆ, ದೀಪವು ನಮ್ಮೊಳಗಿದೆ ದೀಪವನ್ನು ಕತ್ತಲು ಅವರಿಸಿದರೆ ದೀಪವು ಕತ್ತಲನ್ನು ತೊಲಗಿಸಿ ನಮ್ಮೊಳಗಿರುವ ಜ್ಞಾನದ ಜ್ಯೋತಿಯನ್ನು ಬೆಳಗಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯ ಸತೀಶ್, ಪಾರುಪತ್ತೇದಾರ್ ಪ್ರಭುದೇವ್, ಅರ್ಚಕ ಚನ್ನಬಸವರಾಜಯ್ಯ ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು.ದೇವರಹೊಸಹಳ್ಳಿ ಗ್ರಾಮದ ಭದ್ರಕಾಳಮ್ಮ ಹಾಗೂ ವೀರಭದ್ರೇಶ್ವರ ದೇವಾಲಯದಲ್ಲಿ ನಡೆದ ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು.
---