ಸಾರಾಂಶ
ಅಂಬೇಡ್ಕರ್ ಜಯಂತಿ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೀಪಾಲಂಕಾರ ಮಾಡಲಾಗಿತ್ತು. ಮಹಿಳೆಯರು ಕಳಸ ಹೊತ್ತು, ಕಲಾ ತಂಜಗಳ ಮೂಲಕ ಡಾ. ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಮಾಡಿ, ಸಿಹಿ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ತಾಲೂಕು ಜಯಪುರ ಹೋಬಳಿಯ ಮುರುಡಗಳ್ಳಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪರಿವರ್ತನ ಸಂಘ ಹಾಗೂ ಹ್ಯಾಪಿ ಟೀಮ್ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ 133ನೇ ಜಯಂತಿಯನ್ನು ಭಾನುವಾರ ಆಚರಿಸಲಾಯಿತು.ಅಂಬೇಡ್ಕರ್ ಜಯಂತಿ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೀಪಾಲಂಕಾರ ಮಾಡಲಾಗಿತ್ತು. ಮಹಿಳೆಯರು ಕಳಸ ಹೊತ್ತು, ಕಲಾ ತಂಜಗಳ ಮೂಲಕ ಡಾ. ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಮಾಡಿ, ಸಿಹಿ ವಿತರಿಸಲಾಯಿತು.
ಗ್ರಾಮದ ಯಜಮಾನರಾದ ಚಾಮುಂಡಯ್ಯ, ಭಂಗಯ್ಯ, ಮಹಾದೇವಸ್ವಾಮಿ, ಮಂಜು, ದಸಂಸ ಸಂಚಾಲಕರಾದ ಸಿ. ಮಂಜುನಾಥ, ಸಿದ್ದಪ್ಪಾಜಿ, ಸುನಿಲ್, ಮುಖಂಡರಾದ ಮಹದೇವಸ್ವಾಮಿ, ಶಿವಕುಮಾರ್, ಮಹೇಶ್, ವಿಶ್ವಾಸ್, ದೇವರಾಜ್, ಭೈರೇಶ್, ನಿರಂಜನ, ಸಿದ್ದಪ್ಪ, ಚಾಮರಾಜ, ಬಿಳಿಗಿರಿ ಮೊದಲಾದವರು ಇದ್ದರು.