ಚನ್ನಪಟ್ಟಣ ಉಪಚುನಾವಣೆಗೆ ಸಿಪಿವೈ ಸ್ಪರ್ಧೆಗೆ ಸಮಾನ ಮನಸ್ಕರ ವೇದಿಕೆ ಬೆಂಬಲ

| Published : Aug 03 2024, 12:31 AM IST

ಸಾರಾಂಶ

ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರೇ ಸ್ಪರ್ಧಿಸಬೇಕು ಎಂಬ ನಿಟ್ಟಿನಲ್ಲಿ ನಮ್ಮ ಶಾಸಕ- ನಮ್ಮ ಹಕ್ಕು ಹೆಸರಿನಲ್ಲಿ ಆ.೧೧ರಂದು ಯೋಗೇಶ್ವರ್ ಪರ ಜನಾಭಿಪ್ರಾಯ ಸಭೆ ಆಯೋಜಿಸಲು ಸಮಾನ ಮನಸ್ಕರ ವೇದಿಕೆ ಮುಂದಾಗಿದೆ. ಚನ್ನಪಟ್ಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ರೈತ ಮುಖಂಡ ಸಿ.ಪುಟ್ಟಸ್ವಾಮಿ ಮಾತನಾಡಿದರು.

-೧೧ರಂದು ನಮ್ಮ ಶಾಸಕ- ನಮ್ಮ ಹಕ್ಕು ಹೆಸರಿನಲ್ಲಿ ಸಿಪಿವೈ ಪರ ಜನಾಭಿಪ್ರಾಯ ಸಭೆ: ಪುಟ್ಟಸ್ವಾಮಿ

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರೇ ಸ್ಪರ್ಧಿಸಬೇಕು ಎಂಬ ನಿಟ್ಟಿನಲ್ಲಿ ನಮ್ಮ ಶಾಸಕ- ನಮ್ಮ ಹಕ್ಕು ಹೆಸರಿನಲ್ಲಿ ಆ.೧೧ರಂದು ಯೋಗೇಶ್ವರ್ ಪರ ಜನಾಭಿಪ್ರಾಯ ಸಭೆ ಆಯೋಜಿಸಲು ಸಮಾನ ಮನಸ್ಕರ ವೇದಿಕೆ ಮುಂದಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ರೈತ ಮುಖಂಡ ಸಿ.ಪುಟ್ಟಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಸಿ.ಪಿ.ಯೋಗೇಶ್ವರ್ ಇಡೀ ರಾಜ್ಯವೇ ನಮ್ಮ ತಾಲೂಕಿನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ನೀರಾವರಿ ಯೋಜನೆಗಳ ಅನುಷ್ಠಾನಗೊಂಡ ನಂತರ ತಾಲೂಕಿನಲ್ಲಿ ಕೃಷಿ ಚಟುವಟಿಕೆ ಗರಿಗೆದರಿದ್ದು, ಜನ ವಲಸೆ ಹೋಗುವುದು ತಪ್ಪಿದೆ. ಕೃಷಿಪರ ಕಾಳಜಿಯುಳ್ಳ ಯೋಗೇಶ್ವರ್ ಈ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬುದು ನಮ್ಮೆಲ್ಲರ ಆಶಯವಾಗಿದ್ದು, ೧೧ರಂದು ಸಮಾನ ಮನಸ್ಕರ ವೇದಿಕೆಯಿಂದ ನಮ್ಮ ಶಾಸಕ-ನಮ್ಮ ಆಯ್ಕೆ ಹೆಸರಿನಲ್ಲಿ ಯೋಗೇಶ್ವರ್ ಪರ ಜನಾಭಿಪ್ರಾಯ ಸಭೆ ಆಯೋಜಿಸಲಾಗಿದೆ ಎಂದರು.

ನಾವು ಯಾವುದೇ ಪಕ್ಷದ ಪರವಿಲ್ಲ. ತಾಲೂಕಿನಲ್ಲಿ ನೀರಾವರಿ, ಹೈನೋದ್ಯಮದ ಕ್ರಾಂತಿಯಾಗಿದ್ದು, ಇಲ್ಲಿನ ನೀರಾವರಿ ಯೋಜನೆ ರಾಜ್ಯಕ್ಕೆ ಮಾದರಿಯಾಗಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ನ್ಯಾಯಾಲಯ ನಿರ್ಮಾಣ ಸೇರಿದಂತೆ ಯೋಗೇಶ್ವರ್ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಅವರು ದೂರದೃಷ್ಟಿಯುಳ್ಳ ವ್ಯಕ್ತಿಯಾಗಿದ್ದು, ಅವರು ಶಾಸಕರಾಗಿ ಆಯ್ಕೆಯಾದರೆ ಅದರಿಂದ ತಾಲೂಕಿಗೆ ಮಾತ್ರವಲ್ಲದೇ ಇಡೀ ದಕ್ಷಿಣ ಕರ್ನಾಟಕಕ್ಕೆ ನೆರವಾಗಲಿದೆ. ಈ ಹಿನ್ನೆಲೆಯಲ್ಲಿ ಅವರು ಶಾಸಕರಾದರೆ ಸೂಕ್ತ ಎಂಬುದು ನಮ್ಮ ನಿಲುವಾಗಿದೆ ಎಂದು ತಿಳಿಸಿದರು.

ದಲಿತ ಮುಖಂಡ ಡಾ.ಲೋಕಾನಂದ್ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ಕಾರಣಕ್ಕೆ ಎರಡು ಬಾರಿ ಅವರನ್ನು ತಾಲೂಕಿನ ಜನ ಬೆಂಬಲಿಸಿದ್ದಾರೆ. ಈಗ ಎಚ್‌ಡಿಕೆಯಿಂದ ತೆರವಾಗಿರುವ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಯೋಗೇಶ್ವರ್ ಅವರೇ ಸೂಕ್ತ ಅಭ್ಯರ್ಥಿ. ಯೋಗೇಶ್ವರ್ ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಬಾರದು ಎಂದರು.

ಮುಸ್ಲಿಂ ಮುಖಂಡ ಇಕ್ಬಾಲ್ ಮಾತನಾಡಿ, ಕಳೆದ ಐದಾರು ತಿಂಗಳಿಂದ ನಗರದಲ್ಲಿ ಕಸದ ಸಮಸ್ಯೆ ಮೀತಿ ಮೀರಿದೆ. ತಾಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಯಾರೂ ಕೇಳುವವರು ಇಲ್ಲವಾಗಿದ್ದಾರೆ. ಯೋಗೇಶ್ವರ್ ಶಾಸಕರಾಗಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಅವರು ಪಕ್ಷೇತರರಾಗಿ ಸ್ಪರ್ಧಿಸಿದರೆ ಬೆಂಬಲಿಸುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಿವೃತ್ತ ಶಿಕ್ಷಕರಾದ ಅಂಕೇಗೌಡ, ಬಿ.ಆರ್.ಹರೀದಾಸ್, ಸಿ.ಚನ್ನವೀರೇಗೌಡ, ಟಿ.ಆರ್.ರಂಗಸ್ವಾಮಿ, ಸುಂದರಮೂರ್ತಿ, ಪಾಪಣ್ಣ, ದೇವರಾಜು, ಚಕ್ಕೆರೆ ಪುಟ್ಟಸ್ವಾಮಿ, ವೆಂಕಟರಾಜೇ ಅರಸ್, ವಿ.ಬಿ.ಚಂದ್ರು, ಜೈಕುಮಾರ್ (ಜೆಕೆ) ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಿಡದಿಗೆ ಮೈತ್ರಿ ನಾಯಕರು, ರಾಮನಗರಕ್ಕೆ ಸಿಎಂ, ಡಿಸಿಎಂ ಎಂಟ್ರಿರಾಮನಗರ: ಬಿಜೆಪಿ-ಜೆಡಿಎಸ್ ಪಕ್ಷ ಹಮ್ಮಿಕೊಂಡಿರುವ ಪಾದಯಾತ್ರೆ ಮೂಲಕ ಮೈತ್ರಿ ನಾಯಕರು ಬಿಡದಿಗೆ ಹಾಗೂ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಜನಾಂದೋಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಮನಗರಕ್ಕೆ ಒಂದೇ ದಿನ ಎಂಟ್ರಿ ಕೊಡುತ್ತಿದ್ದಾರೆ.ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಅನೇಕ ನಾಯಕರು ಕೆಂಗೇರಿಯಿಂದ ಪಾದಯಾತ್ರೆ ಹೊರಟು ಸಂಜೆ ವೇಳೆಗೆ ಬಿಡದಿಗೆ ಆಗಮಿಸಲಿದ್ದಾರೆ. ಮಂಜುನಾಥ ಕಲ್ಯಾಣ ಮಂಟಪದಲ್ಲಿ ಬಿಜೆಪಿ - ಜೆಡಿಎಸ್ ನಾಯಕರು ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.ಇನ್ನು ಬಿಡದಿಯಲ್ಲಿ ಜನಾಂದೋಲನ ಯಶಸ್ವಿಯಾಗಿದ್ದು, ಅದರ ಮುಂದುವರೆದ ಭಾಗವಾಗಿ ರಾಮನಗರ ಟೌನ್ ನಲ್ಲಿಯೂ ಜನಾಂದೋಲನ ಆಯೋಜನೆಗೊಂಡಿದೆ. ಕೊಡಗು ಪ್ರವಾಸ ಮುಗಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು ಜನಾಂದೋಲನದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರವಾಸ ರಾಮನಗರ: ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಹಾಗೂ ಬಿಜಿಪಿಯ 21 ಭ್ರಷ್ಟ ಹಗರಣಗಳ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನಾಳೆ (ಆ.3) ಆಯೋಜಿಸಿರುವ ಜನಾಂದೋಲನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.ಆ.3ರಂದು ಬೆಳಗ್ಗೆ 11 ಗಂಟೆಗೆ ಮೈಸೂರಿನಿಂದ ನಿರ್ಗಮಿಸಿ, ಮಧ್ಯಾಹ್ನ 12 ಗಂಟೆಗೆ ರಾಮನಗರಕ್ಕೆ ಆಗಮಿಸಲಿರುವ ಸಿದ್ದರಾಮಯ್ಯ, ರಾಮನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪವಿರುವ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ನಡೆಯುವ ಜನಾಂದೋಲನದಲ್ಲಿ ಪಾಲ್ಗೊಳ್ಳುವರು. ಬಳಿಕ ಮಧ್ಯಾಹ್ನ 1.30ಕ್ಕೆ ರಾಮನಗರದಿಂದ ನಿರ್ಗಮಿಸಿ ರಸ್ತೆ ಮೂಲಕ ಬೆಂಗಳೂರು ತಲುಪುವರು ಎಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಗಳು ಹಾಗೂ ಪದನಿಮಿತ್ತ ಸರ್ಕಾರದ ಅಪರ ಕಾರ್ಯದರ್ಶಿಗಳು ತಿಳಿಸಿದ್ದಾರೆ.