ನರಸಿಂಹರಾಜಪುರವಿದ್ಯುತ್ ಬೆಳಕಿನ ಹಿಂದೆ ಮೆಸ್ಕಾಂ ಇಲಾಖೆ ಪವರ್ ಮ್ಯಾನ್ ಗಳ ಅಪಾರ ಶ್ರಮ, ಧೈರ್ಯ ಹಾಗೂ ಅಪಾಯ ಅಡಗಿರುತ್ತದೆ ಎಂದು ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಆದರ್ಶ ಬಿ. ಗೌಡ ತಿಳಿಸಿದರು.
- ಜ್ವಾಲಾಮಾಲಿನಿ ಜೇಸಿ ಸಂಸ್ಥೆಯಿಂದ ಮೆಸ್ಕಾಂನಲ್ಲಿ 16 ಪವರ್ ಮ್ಯಾನ್ ಗಳಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರವಿದ್ಯುತ್ ಬೆಳಕಿನ ಹಿಂದೆ ಮೆಸ್ಕಾಂ ಇಲಾಖೆ ಪವರ್ ಮ್ಯಾನ್ ಗಳ ಅಪಾರ ಶ್ರಮ, ಧೈರ್ಯ ಹಾಗೂ ಅಪಾಯ ಅಡಗಿರುತ್ತದೆ ಎಂದು ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಆದರ್ಶ ಬಿ. ಗೌಡ ತಿಳಿಸಿದರು.
ಶುಕ್ರವಾರ ಕೆಬಿಬಿ ಕಚೇರಿಯಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯಿಂದ ಮೆಸ್ಕಾಂ ಇಲಾಖೆ 16 ಲೈನ್ ಮ್ಯಾನ್ ಗಳಿಗೆ ಸೆಲ್ಯೂಟ್ ದ ಸೈಲಂಟ್ ಸ್ಟಾರ್ ಎಂದು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನರಿಗೆ ವಿದ್ಯುತ್ ಕಾಣುತ್ತದೆ.ಆದರೆ, ಅದರ ಹಿಂದೆ ಲೈನ್ ಮ್ಯಾನ್ ಗಳ ಅಪಾರ ಶ್ರಮ ಇರುವುದು ಕೆಲವರಿಗೆ ಮಾತ್ರ ತಿಳಿಯಲಿದೆ. ಜೇಸಿ ಸಂಸ್ಥೆಯಿಂದ ಸಮಾಜದಲ್ಲಿ ಪ್ರಚಾರ ಇಲ್ಲದೆ ಶ್ರಮ ಪಟ್ಟು ಪ್ರಾಮಾಣಿಕತೆಯಿಂದ ಕೆಲಸ ಮಾಡುವ ನೌಕರರನ್ನು ಗುರುತಿಸಿ ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ಎಂದು ಗುರುತಿಸಿ ಸನ್ಮಾನ ಮಾಡುತ್ತಿದ್ದು ಇಂದು ಲೈನ್ ಮ್ಯಾನ್ ಗಳನ್ನು ಸನ್ಮಾನಿಸುತ್ತಿರುವುದು ಜೇಸಿ ಸಂಸ್ಥೆಗೆ ಹೆಮ್ಮೆ ತಂದಿದೆ. ಮಳೆ,ಗಾಳಿ, ಕತ್ತಲೆಯಲ್ಲೂ ಜನರ ಮನೆಗಳಿಗೆ ಬೆಳಕು ನೀಡಬೇಕು ಎಂಬ ಉದ್ದೇಶದಿಂದ ಲೈನ್ ಮ್ಯಾನ್ ಗಳು ವಿದ್ಯುತ್ ಕಂಬ ಏರಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಲೈನ್ ಮ್ಯಾನ್ ಗಳು ಕೆಲಸ ಮಾಡುವಾಗ ಸಣ್ಣ ತಪ್ಪು ಮಾಡಿದರೂ ದೊಡ್ಡ ಅಪಾಯವಾಗುತ್ತದೆ. ನಿಮ್ಮ ಕರ್ತವ್ಯ, ಪ್ರಜ್ಞೆ ಹಾಗೂ ಸೇವಾ ಮನೋಭಾವ ಜೇಸಿಯಿಂದ ಗುರುತಿಸಿದ್ದೇವೆ ಎಂದರು.ಜೇಸಿ ಪೂರ್ವಾಧ್ಯಕ್ಷ ಎಸ್.ಎಸ್.ಜಗದೀಶ್ ಮಾತನಾಡಿ, ಕಳೆದ 37 ವರ್ಷಗಳ ಹಿಂದೆ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಪ್ರಾರಂಭವಾಗಿದ್ದು ಅಂದಿನಿಂದಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರನ್ನು ಗುರುತಿಸಿ ಪ್ರೋತ್ಸಾಹಿಸಿದ್ದೇವೆ ಎಂದರು. ಸಭೆಯಲ್ಲಿ ಕಾರ್ಯದರ್ಶಿ ರಜಿತ್ ವಗಡೆ, ಸದಸ್ಯರಾದ ವಿನಯ, ಜೋಯ್ ಬ್ರೋ, ಅಪೂರ್ವ ರಾಘು, ಮಿಥುನ್, ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗೌತಮ್, ಜೂನಿಯರ್ ಇಂಜಿನಿಯರ್ ಸುರೇಶ್ ಇದ್ದರು.