ಬಸವತತ್ವ ಬಿತ್ತರಿಸುವಲ್ಲಿ ಶ್ರಮಿಸಿದ ಲಿಂಗಾನಂದ ಸ್ವಾಮಿ

| Published : Jul 02 2025, 12:19 AM IST

ಸಾರಾಂಶ

ಧಾರ್ಮಿಕ ಮಠ, ಪೀಠಗಳಿಗೆ ಸ್ತ್ರೀ ಅರ್ಹಳಲ್ಲ ಎನ್ನುವ ೨೧ನೇ ಶತಮಾನದಲ್ಲಿ ೧೯೭೦ರಲ್ಲಿ ಧಾರವಾಡದಲ್ಲಿ ಅಕ್ಕಮಹಾದೇವಿ ಅನುಭಾವ ಪೀಠ ರಚಿಸಿ ಡಾ. ಮಾತೆ ಮಹಾದೇವಿ ಅವರನ್ನು ಪೀಠಕ್ಕೇರಿಸಿ, ಸ್ತ್ರೀ ಸ್ವಾತಂತ್ರ್ಯಕ್ಕೆ ಮರುಜೀವ ನೀಡಿದ ಕೀರ್ತಿ ಲಿಂಗಾನಂದ ಸ್ವಾಮಿಗೆ ಸಲ್ಲುತ್ತದೆ.

ಯಲಬುರ್ಗಾ:

ಲಿಂಗಾನಂದ ಸ್ವಾಮಿ ಅವರು ಜೀವನದುದ್ದಕ್ಕೂ ಬಸವತತ್ವ ಬಿತ್ತರಿಸುವಲ್ಲಿ ಶ್ರಮಿಸಿದ್ದಾರೆ ಎಂದು ನಿವೃತ್ತ ಪಿಎಸ್‌ಐ ಬಸನಗೌಡ ಪೊಲೀಸ್‌ಪಾಟೀಲ್ ಹೇಳಿದರು.

ತಾಲೂಕಿನ ಗುಳೆ ಗ್ರಾಮದ ವಿಶ್ವಗುರು ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವದಳ, ಯುವ ಘಟಕ ಮತ್ತು ಅಕ್ಕ ನಾಗಲಂಬಿಕೆ ಮಹಿಳಾ ಗಣದಿಂದ ಸೋಮವಾರ ರಾತ್ರಿ ನಡೆದ ಪ್ರವಚನ ಪಿತಾಮಹ ಲಿಂ. ಲಿಂಗಾನಂದ ಸ್ವಾಮಿಗಳ ೩೦ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಧಾರ್ಮಿಕ ಮಠ, ಪೀಠಗಳಿಗೆ ಸ್ತ್ರೀ ಅರ್ಹಳಲ್ಲ ಎನ್ನುವ ೨೧ನೇ ಶತಮಾನದಲ್ಲಿ ೧೯೭೦ರಲ್ಲಿ ಧಾರವಾಡದಲ್ಲಿ ಅಕ್ಕಮಹಾದೇವಿ ಅನುಭಾವ ಪೀಠ ರಚಿಸಿ ಡಾ. ಮಾತೆ ಮಹಾದೇವಿ ಅವರನ್ನು ಪೀಠಕ್ಕೇರಿಸಿ, ಸ್ತ್ರೀ ಸ್ವಾತಂತ್ರ್ಯಕ್ಕೆ ಮರುಜೀವ ನೀಡಿದ ಕೀರ್ತಿ ಲಿಂಗಾನಂದ ಸ್ವಾಮಿಗೆ ಸಲ್ಲುತ್ತದೆ. ಸಮಾಜದಲ್ಲಿ ಬೇರೂರಿದ ಅನಾಚಾರ, ಮೌಢ್ಯ, ಕಂದಾಚಾರದ ವಿರುದ್ಧ ಕ್ರಾಂತಿ ನಡೆಸಿದ ಶರಣರ ಆದರ್ಶವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ರಾಷ್ಟ್ರೀಯ ಬಸವದಳ ಕಾರ್ಯದರ್ಶಿ ಬಸವರಾಜ ಹೂಗಾರ ಮಾತನಾಡಿ, ೧೨ನೇ ಶತಮಾನದ ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯವನ್ನು ಫ.ಗು. ಹಳಕಟ್ಟಿ ಅವರು ಪುಸ್ತಕ ರೂಪದಲ್ಲಿ ಮುದ್ರಿಸಿ, ಹಂಚುವ ಕಾರ್ಯ ಮಾಡಿದರು. ಅವರು ಮುದ್ರಿಸಿದ ವಚನ ಸಾಹಿತ್ಯವನ್ನು ಪ್ರವಚನದ ಮೂಲಕ ಹಳ್ಳಿ-ಹಳ್ಳಿಗೆ ತಿರುಗಿ ಸಾಹಿತ್ಯದ ತಿರುಳನ್ನು ತಿಳಿಸಿದ ಕೀರ್ತಿ ಲಿಂಗಾನಂದ ಸ್ವಾಮಿಗೆ ಸಲ್ಲುತ್ತದೆ ಎಂದರು. ವನಜಭಾವಿ ರಾಷ್ಟ್ರೀಯ ಬಸವದಳ ಗೌರವಾಧ್ಯಕ್ಷ ದೇವಪ್ಪ ಕೋಳೂರು ಮಾತನಾಡಿದರು.

ಈ ವೇಳೆ ಯುವ ಘಟಕದ ಅಧ್ಯಕ್ಷ ಶಿವಕುಮಾರ ಹೊಸಳ್ಳಿ, ಗಣ್ಯರಾದ ಅಮರೇಶಪ್ಪ ಗಡಿಹಳ್ಳಿ, ಅಮರೇಶಪ್ಪ ಬಳ್ಳಾರಿ, ಶರಣಪ್ಪ ಹೊಸಳ್ಳಿ, ನಾಗನಗೌಡ ಜಾಲಿಹಾಳ, ಶಿವಾನಂದಪ್ಪ ಬೇವೂರು, ಸಂಗನಗೌಡ ಮನ್ನಾಪುರ, ಯಮನೂರಪ್ಪ ಬೇವೂರು, ಗಿರಿಮಲ್ಲಪ್ಪ ಪರಂಗಿ, ಹನುಮೇಶ ಹೊಸಳ್ಳಿ, ನಿಜಲಿಂಗಪ್ಪ ಮಂತ್ರಿ, ದೇವೇಂದ್ರಪ್ಪ, ಬಸವರಾಜ ಕೋಳೂರು, ಶಿವಪುತ್ರಪ್ಪ ಫಕೀರಪ್ಪ ಮಂತ್ರಿ, ಸಾವಿತ್ರಮ್ಮ ಆವಾರಿ, ಶಂಕ್ರಮ್ಮ ಹೊಸಳ್ಳಿ, ಬಸಮ್ಮ ಹೂಗಾರ, ಶರಣಮ್ಮ, ದ್ರಾಕ್ಷಾಯಣಮ್ಮ ಹೊಸಳ್ಳಿ, ವಿಶಾಲಾಕ್ಷಿ ಕೋಳೂರು, ಮಲ್ಲಮ್ಮ, ನಾಗಮ್ಮ ಜಾಲಿಹಾಳ ಸೇರಿದಂತೆ ಮತ್ತಿತರರು ಇದ್ದರು.