ಸಾರಾಂಶ
----
ರಾಜ್ಯಾದ್ಯಂತ ಜಾತಿಗಣತಿ ಸೆ.22ರಿಂದ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ‘ಧರ್ಮ’ ಕಾಲಂನಲ್ಲಿ ಲಿಂಗಾಯತರು ‘ಹಿಂದು’ ಎಂದು ಬರೆಸಬೇಕೋ ಅಥವಾ ‘ಲಿಂಗಾಯತ’ ಎಂದು ಬರೆಸಬೇಕೋ ಎಂಬ ಬಗ್ಗೆ ರಾಜಕೀಯ ಜಟಾಪಟಿ ಆರಂಭವಾಗಿದೆ. ‘ಲಿಂಗಾಯತ ಪ್ರತ್ಯೇಕ ಧರ್ಮ’ ಎಂದು ವಾದಿಸುವವರು ಧರ್ಮ ಕಾಲಂನಲ್ಲಿ ‘ಲಿಂಗಾಯತ’ ಎಂದು ಬರೆಸಿ ಎಂದು ಪಟ್ಟು ಹಿಡಿದರೆ, ‘ಲಿಂಗಾಯತರೂ ಹಿಂದುಗಳು’ ಎಂದು ಪರಿಗಣಿಸುವವರು ‘ಹಿಂದು’ ಎಂದು ಬರೆಸಿ ಜಾತಿ ಕಾಲಂನಲ್ಲಿ ‘ಲಿಂಗಾಯತ’ ಎಂದು ಬರೆಸಿ ಎಂದು ಕರೆ ನೀಡಿದ್ದಾರೆ.--===
ಬಿಜೆಪಿ ಮೆಚ್ಚಿಸಲು ಹಿಂದು ಬರೆಸಲು ಬಿಎಸ್‌ವೈ, ಬಿವೈವಿ ಕರೆ: ಎಂಬಿಪಾ ಕಿಡಿ- ಇವರಿಬ್ಬರಿಂದ ದ್ವಿಪಾತ್ರ
- ಕೈಗಾರಿಕಾ ಸಚಿವ ಕಿಡಿ-
ಎಂಬಿಪಾ ಹೇಳಿದ್ದೇನು?- ಪ್ರತ್ಯೇಕ ಧರ್ಮ ನಿರ್ಣಯ ಕೈಗೊಂಡಾಗ ಇವರಿಬ್ಬರೂ ಇದ್ದರು
- ಆದರೆ ಈಗ ಆ ನಿರ್ಣಯಕ್ಕೆ ಬಿಎಸ್‌ವೈ, ಬಿವೈವಿ ವ್ಯತಿರಿಕ್ತ ನುಡಿ- ಸಮಾಜದಲ್ಲೇ ವಿಭಿನ್ನ ಅಭಿಪ್ರಾಯ ಇವೆ, ಈ ಬಗ್ಗೆ ಒಮ್ಮತ ಬೇಕು
- ಬಿಎಸ್‌ವೈ ಮಗಳು ವೀರಶೈವ ಮಹಾಸಭಾ ಮಹಿಳಾ ಅಧ್ಯಕ್ಷೆ-ಸಭಾದಿಂದಲೇ ವೀರಶೈವ ಲಿಂಗಾಯತ ಎಂದು ಬರೆಸಲು ಕರೆ
===ಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯ ಸರ್ಕಾರವು ಜಾತಿ ಗಣತಿ ಆರಂಭಿಸಲು ಮುಂದಾಗುತ್ತಿರುವಂತೆಯೇ ಪ್ರತ್ಯೇಕ ಲಿಂಗಾಯತ ಧರ್ಮದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಗಣತಿ ವೇಳೆ ಧರ್ಮ ಮತ್ತು ಜಾತಿ ಕಾಲಂನಲ್ಲಿ ಯಾವುದನ್ನು ಉಲ್ಲೇಖಿಸಬೇಕು ಎಂಬ ಬಗ್ಗೆ ಬಿಜೆಪಿ, ಅಖಿಲ ಭಾರತ ವೀರಶೈವ ಮಹಾಸಭಾ, ವಿರಕ್ತ ಮಠಗಳು ವೈರುಧ್ಯದ ಕರೆ ನೀಡುತ್ತಿರುವುದು ಗೊಂದಲಮಯ ವಾತಾವರಣಕ್ಕೆ ಕಾರಣವಾಗಿದೆ.
ಇದರ ನಡುವೆಯೇ, ವೀರಶೈವ-ಲಿಂಗಾಯತರು ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸುವಂತೆ ಕರೆ ನೀಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಹರಿಹಾಯ್ದಿರುವ ಸಚಿವ ಎಂ.ಬಿ. ಪಾಟೀಲ್, ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಮಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವೀರಶೈವ-ಲಿಂಗಾಯತ ಸಮುದಾಯದ ವಿಚಾರದಲ್ಲಿ ಡಬಲ್ ರೋಲ್ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಈ ಮೂಲಕ ರಾಜಕೀಯ ಕೆಸರೆರೆಚಾಟ ಆರಂಭಗೊಂಡಿದೆ.ಜಾತಿ ಆಧಾರಿತ ಜನಗಣತಿ ಕುರಿತಂತೆ ವೀರಶೈವ-ಲಿಂಗಾಯತ ಸಮುದಾಯದಲ್ಲಿನ ಗೊಂದಲಗಳ ಬಗ್ಗೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ. ಪಾಟೀಲ್, ಧರ್ಮದ ಕಾಲಂನಲ್ಲಿ ಯಾವುದನ್ನು ಉಲ್ಲೇಖಿಸಬೇಕು ಎಂಬ ಬಗ್ಗೆ ಬಿಜೆಪಿ, ಅಖಿಲ ಭಾರತ ವೀರಶೈವ ಮಹಾಸಭಾ, ವಿರಕ್ತ ಮಠಗಳದ್ದು ಒಂದೊಂದು ಅಭಿಪ್ರಾಯವಿದೆ. ಬಿಜೆಪಿಯ ಲಿಂಗಾಯತ ನಾಯಕರು ಹಿಂದು ಎಂದರೆ, ವೀರಶೈವ ಮಹಾಸಭಾ ವೀರಶೈವ ಲಿಂಗಾಯತ ಎಂದು ಹಾಗೂ ವಿರಕ್ತ ಮಠಗಳು ಲಿಂಗಾಯತ ಎಂದು ಬರೆಯಬೇಕು ಎಂದು ಸಮಾಜದವರಿಗೆ ಹೇಳುತ್ತಿವೆ. ಈ ಎಲ್ಲದರ ಬಗ್ಗೆ ಚರ್ಚೆಗಳಾಗಬೇಕು ಎಂದು ಹೇಳಿದರು.
ಬಿಜೆಪಿಯನ್ನು ಮೆಚ್ಚಿಸಲು ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ ಅವರು ಹಿಂದು ಎಂದು ಬರೆಸುವಂತೆ ಕರೆ ನೀಡಿದ್ದಾರೆ. ಆದರೆ, ಅವರ ಮಗಳೇ ಮಹಿಳಾ ಅಧ್ಯಕ್ಷೆಯಾಗಿರುವ ವೀರಶೈವ ಮಹಾಸಭಾದಲ್ಲಿ ‘ವೀರಶೈವ ಲಿಂಗಾಯತ’ ಎಂದು ಬರೆಸಲು ಹೇಳಲಾಗುತ್ತಿದೆ. ಇನ್ನು, ಕೆಲದಿನಗಳ ಹಿಂದೆ ದಾವಣಗೆರೆಯಲ್ಲಿ ನಡೆದ ಸಮಾವೇಶದಲ್ಲಿ ವೀರಶೈವ ಪೀಠಾಚಾರ್ಯರ ಶೃಂಗ ಸಮ್ಮೇಳನದಲ್ಲಿ ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ನಿರ್ಣಯ ತೆಗೆದುಕೊಂಡಾಗ ಯಡಿಯೂರಪ್ಪ, ವಿಜಯೇಂದ್ರ ವೇದಿಕೆಯಲ್ಲೇ ಕುಳಿತಿದ್ದರು. ಆಗ ಅದನ್ನು ವಿರೋಧಿಸದೆ ಸಹಮತ ವ್ಯಕ್ತಪಡಿಸಿದ್ದರು. ಈಗ ಹಿಂದೂ ಎಂದು ಬರೆಸುವಂತೆ ಕರೆ ನೀಡುವ ಮೂಲಕ ಡಬಲ್ ರೋಲ್ ನಿಭಾಯಿಸುತ್ತಿದ್ದಾರೆ ಎಂದು ಟೀಕಿಸಿದರು.ಬಿಜೆಪಿಯನ್ನು ಮೆಚ್ಚಿಸಲು ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ ಅವರು ಹಿಂದು ಎಂದು ಬರೆಸುವಂತೆ ಕರೆ ನೀಡಿದ್ದಾರೆ. ಆದರೆ, ಅವರ ಮಗಳೇ ಮಹಿಳಾ ಅಧ್ಯಕ್ಷೆಯಾಗಿರುವ ವೀರಶೈವ ಮಹಾಸಭಾದಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಲು ಹೇಳಲಾಗುತ್ತಿದೆ. ಇನ್ನು, ಕೆಲದಿನಗಳ ಹಿಂದೆ ದಾವಣಗೆರೆಯಲ್ಲಿ ನಡೆದ ಸಮಾವೇಶದಲ್ಲಿ ವೀರಶೈವ ಪೀಠಾಚಾರ್ಯರ ಶೃಂಗ ಸಮ್ಮೇಳನದಲ್ಲಿ ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ನಿರ್ಣಯ ತೆಗೆದುಕೊಂಡಾಗ ಯಡಿಯೂರಪ್ಪ, ವಿಜಯೇಂದ್ರ ವೇದಿಕೆಯಲ್ಲೇ ಕುಳಿತಿದ್ದರು. ಆಗ ಅದನ್ನು ವಿರೋಧಿಸದೆ ಸಹಮತ ವ್ಯಕ್ತಪಡಿಸಿದ್ದರು. ಈಗ ಹಿಂದೂ ಎಂದು ಬರೆಸುವಂತೆ ಕರೆ ನೀಡುವ ಮೂಲಕ ಡಬಲ್ ರೋಲ್ ನಿಭಾಯಿಸುತ್ತಿದ್ದಾರೆ ಎಂದು ಟೀಕಿಸಿದರು.
===‘ಹಿಂದು’ ಬರೆಸಿ ಎಂದು ಬಿಜೆಪಿ ಸಭೆ ಕರೆ ನೀಡಿಲ್ಲ: ಬಿವೈವಿ ಆಕ್ರೋಶ- ಈ ಬಗ್ಗೆ ಸಮಾಜವೇ ನಿರ್ಣಯಿಸಲಿ- ಎಂಬಿಪಾ ಟೀಕೆಗೆ ಬಿವೈವಿ ಕಿಡಿ--ಬಿವೈವಿ ಹೇಳಿದ್ದೇನು?
- ವೀರಶೈವ ಲಿಂಗಾಯತರ ವಿರುದ್ಧ ಹುನ್ನಾರ ನಡೆದಿದೆ- ಜಾತಿ ಜನಗಣತಿಯು ಸಿದ್ದರಾಮಯ್ಯ ಸರ್ಕಾರದ ಕುತಂತ್ರ- ರಾಜ್ಯ ಸರ್ಕಾರಕ್ಕೆ ಜಾತಿಗಣತಿ ನಡೆಸುವ ಅಧಿಕಾರ ಇಲ್ಲ- ಧರ್ಮ ಕಾಲಂನಲ್ಲಿ ಏನು ಬರೆಸಬೇಕೆಂದು ಬಿಜೆಪಿ ನಿರ್ಣಯಿಸಿಲ್ಲ- ಹೀಗೇ ಬರೆಸಿ ಎಂದು ಲಿಂಗಾಯತರಿಗೆ ಬಿಜೆಪಿ ಸೂಚಿಸಿಲ್ಲ- ಏನು ಬರೆಬೇಕೆಂಬುದನ್ನು ಪೀಠಾಧೀಶರು, ಸಮಾಜ ನಿರ್ಧರಿಸುತ್ತೆ
---ಕನ್ನಡಪ್ರಭ ವಾರ್ತೆ ಯಾದಗಿರಿ‘ಜಾತಿಗಣತಿ ಕಾಲಂನಲ್ಲಿ ಹಿಂದು ಅಂತ ಬರೆಸಿ ಎಂದು ಬಿಜೆಪಿ ಲಿಂಗಾಯತ ನಾಯಕರು ಭಾನುವಾರ ನಡೆಸಿದ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿಲ್ಲ. ಈ ಬಗ್ಗೆ ಸಮಾಜವೇ ನಿರ್ಧರಿಸಬೇಕು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.‘ಸಮೀಕ್ಷೆಯಲ್ಲಿ ಲಿಂಗಾಯತರು ಹಿಂದು ಎಂದು ಬರೆಸಬೇಕು ಎಂದು ಬಿಜೆಪಿ ವಾದಿಸುತ್ತಿದೆ’ ಎಂಬ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಯಾದಗಿರಿಯಲ್ಲಿ ಸುದ್ದಿಗಾರರ ಜತೆ ಮಾತನಾಡುವಾಗ ವಿಜಯೇಂದ್ರ ತಿರುಗೇಟು ನೀಡಿ, ‘ವೀರಶೈವ ಲಿಂಗಾಯತ ಸಮಾಜದ ವಿರುದ್ಧ ಹುನ್ನಾರ ನಡೆಯುತ್ತಿದೆ’ ಎಂದು ಆರೋಪಿಸಿದರು.
‘ವೀರಶೈವ ಲಿಂಗಾಯತ ಸಮುದಾಯದ ಕೆಲವು ಹಿರಿಯ ಮುಖಂಡರು ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ಸೇರಿದ್ದೇವೆ. ಸಮಾಜವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಚರ್ಚೆ ಮಾಡಲಾಗಿದೆ. ಸಮಾಜವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ವೀರಶೈವ ಮಹಾಸಭಾ ಇರಬಹುದು, ಪಂಚಪೀಠಾಧೀಶರು, ಗುರುವಿರಕ್ತರು ಇರಬಹುದು. ಎಲ್ಲರೂ ಸೇರಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಅಂತ ನಿರ್ಣಯಕ್ಕೆ ಬಂದಿದ್ದೇವೆ. ನಾಳೆ ಎಲ್ಲರನ್ನೂ ಭೇಟಿ ಆಗಿ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುತ್ತೇವೆ’ ಎಂದರು.‘ರಾಜ್ಯ ಸರ್ಕಾರಕ್ಕೆ ಜಾತಿ ಜನಗಣತಿ ನಡೆಸುವ ಅಧಿಕಾರ ಇಲ್ಲದಿದ್ದರೂ ಸಹ, ಇದಕ್ಕೆ ಮುಂದಾಗಿರುವುದರ ಹಿಂದೆ ಕುತಂತ್ರ ಅಡಗಿದೆ’ ಎಂದು ಅವರು ಕಿಡಿಕಾರಿದರು.