ಸಾರಾಂಶ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕರ್ನಾಟಕ ರಾಜ್ಯ ಘಟಕದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಕೋಕಿಲಾ ಮಹಾದೇವಪ್ಪ ಬಿರಾದಾರಗೆ ಅಭಿನಂದನಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಬೀದರ್
ಹಾನಗಲ್ ಗುರುಕುಮಾರ ಶಿವಯೋಗಿಗಳವರು 120 ವರ್ಷಗಳ ಹಿಂದೆ ಹುಟ್ಟು ಹಾಕಿದ ವೀರಶೈವ ಲಿಂಗಾಯತ ಮಹಾಸಭೆ ಸಂಸ್ಥೆಯು ಇಂದು ಬೃಹತ್ ಪ್ರಮಾಣದಲ್ಲಿ ಬೆಳೆದು ಅಸಂಖ್ಯಾತ ಸದಸ್ಯರನ್ನೊಳಗೊಂಡು ಉತ್ತಮ ಕಾರ್ಯಗಳ ಮೂಲಕ ಸಮಾಜಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ ಎಂದು ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷರು, ಬಸವತತ್ವ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೈಜಿನಾಥ ಕಮಠಾಣೆ ಬಣ್ಣಿಸಿದರು.ನಗರದ ರಾಂಪೂರೆ ಕಾಲೋನಿಯಲ್ಲಿರುವ ದತ್ತ ಮಂದಿರದಲ್ಲಿ ವೈಷ್ಣೋದೇವಿ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕರ್ನಾಟಕ ರಾಜ್ಯ ಘಟಕದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಕೋಕಿಲಾ ಮಹಾದೇವಪ್ಪ ಬಿರಾದಾರಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ ಪೂಜ್ಯ ಮಾತೋಶ್ರೀ ಅಮೃತಾನಂದಮಯಿ ಬೆಳ್ಳೂರು ಆಶೀರ್ವಚನ ನೀಡಿ, ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿಗಾಗಿ ಎಲ್ಲರೂ ಕೈಜೋಡಿಸಿದಾಗ ಮಾತ್ರ ಅದು ಎತ್ತರಕ್ಕೆ ಬೆಳೆಯಲು ಸಾಧ್ಯವೆಂದರು. ಸಮಾಜೋಧಾರ್ಮಿಕ ಹಾಗೂ ರಚನಾತ್ಮಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಮಾಜದ ಸೇವೆಗಾಗಿ ಸದಾ ಸಿದ್ಧವಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಿರಾದಾರ ತಿಳಿಸಿದರು. ಸಿದ್ರಾಮಯ್ಯ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೋಕಿಲಾ ಮಹಾದೇವಪ್ಪ ಬಿರಾದಾರ ದಂಪತಿಗಳಿಗೆ ವಿಶೇಷವಾಗಿ ಗೌರವಿಸಲಾಯಿತು. ಬೀದರ ಜಿಲ್ಲೆಯಿಂದ ರಾಜ್ಯ ಮಹಾಸಭೆಗೆ ಆಯ್ಕೆಯಾದ ನನ್ನನ್ನು ಗುರುತಿಸಿ ಶ್ರೀ ವೈಷ್ಣೋದೇವಿ ಟ್ರಸ್ಟ್‌ನವರು ಅಭಿಮಾನದ ಅಭಿನಂದನೆ ಮಾಡಿರುವುದಕ್ಕೆ ನಾನು ಕೃತಜ್ಞಳಾಗಿದ್ದೇನೆಂದು ನುಡಿದರು. ಶೈಲಜಾ ಹುಡಗೆ, ಸಂಗಮೇಶ ಮೂಲಗೆ, ಬಸವ ಮಿಷನ್‌ನ ಶರಣಯ್ಯ ಸ್ವಾಮಿ, ಟ್ರಸ್ಟ್ನ ಕಾರ್ಯದರ್ಶಿ ಭಾರತಿ ಬಿರಾದಾರ, ಕಿರಣ ಮಹಾರಾಜ, ಗುಂಡಪ್ಪ ಹುಡಗೆ, ಕಾಶಿನಾಥ ಭಂಗೂರೆ, ಚಂದ್ರಶೇಖರ ರೆಡ್ಡಿ, ಮಹಾಂತೇಶ ಬಿರಾದಾರ, ವಿರುಪಾಕ್ಷ ದೇವರು, ಬಸವರಾಜ ಸ್ವಾಮಿ, ಚಂದ್ರಕಾಂತ ನೆಮತಾಬಾದ, ವೈಜಿನಾಥ ಪಾಟೀಲ್ ಸಿದ್ಧಾಪೂರ, ಸುಭಾಷ ಬಿರಾದಾರ, ಮಾಣಿಕೇಶ ಪಾಟೀಲ್, ರಾಜಕುಮಾರ ಕಾಡವಾದ, ಅರುಣ ಬಿರಾದಾರ ಮತ್ತು ಅಕ್ಕಮಹಾದೇವಿ ಭಜನಾ ಸಂಘ ಹಾಗೂ ರಾಧಾಕೃಷ್ಣ ಕೋಲಾಟ ಸಂಘದ ಪದಾಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.