ಸಾರಾಂಶ
ಲಿಂಗಾಯತ ಧರ್ಮ ತಿರುಳನ್ನ ತಿಳಿಯಬಲ್ಲರು. ಈ ಧರ್ಮದ ಜೀವಾಳತನವೇ ಇಷ್ಟಲಿಂಗ ಉಪಾಸನೆ ಒಂದೇ ಪ್ರಧಾನವಾಗಿದೆ.
ಹೊಸಪೇಟೆ: ಬಸವಣ್ಣನವರು ಸ್ಥಾಪಿಸಿದ್ದು ಲಿಂಗಾಯತ ಧರ್ಮ. ಬರೀ ಸುಳ್ಳನ್ನೇ ವೈಭವಯುತವಾಗಿ ಹೇಳುತ್ತ ಜನರನ್ನು ಎಂದಿಗೂ ಮರುಳುಗೊಳಿಸಲಾಗದು. ಸಾವಿರ ಸುಳ್ಳಿನಿಂದ ಸತ್ಯವನ್ನು ಎಂದಿಗೂ ಮರೆಮಾಚಲು ಸಾಧ್ಯವಿಲ್ಲ ಎಂದು ನಾಡೋಜ, ಬಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದೇವರು ತಿಳಿಸಿದರು.
ತಾಲೂಕಿನ ನಾಗೇನಹಳ್ಳಿ ಅರಿವು ಆಚಾರ ಅನುಭಾವ ಟ್ರಸ್ಟ್, ಇಷ್ಟಲಿಂಗ ಅಧ್ಯಯನ ಕೇಂದ್ರದ ಗೌರವ ಸನ್ಮಾನ ಸ್ವೀಕರಿಸಿ ಆರ್ಶೀವಚನ ನೀಡಿದ ಶ್ರೀಗಳು, ೧೨ನೇ ಶತಮಾನದಲ್ಲಿ ಗುರುಬಸವಣ್ಣನವರು ಎಡೆ ಮಾಡಿಕೊಟ್ಟಿರುವುದು ಇಷ್ಟಲಿಂಗೋಪಾಸನೆಯ ಲಿಂಗಾಯತ ಧರ್ಮ ಎಂದರು. ಈಗ ಜನರು ಜಾಗೃತರಾದ ಶಿಕ್ಷಣವಂತರು. ಶರಣ ಸಾಹಿತ್ಯದ ವಚನಗಳ ನಿಜ ಅನುಭಾವವನ್ನು ತಿಳಿಯಬಲ್ಲವರಾಗಿದ್ದಾರೆ. ಲಿಂಗಾಯತ ಧರ್ಮ ತಿರುಳನ್ನ ತಿಳಿಯಬಲ್ಲರು. ಈ ಧರ್ಮದ ಜೀವಾಳತನವೇ ಇಷ್ಟಲಿಂಗ ಉಪಾಸನೆ ಒಂದೇ ಪ್ರಧಾನವಾಗಿದೆ ಎಂದರು.ಸ್ಥಳೀಯ ಇಷ್ಟಲಿಂಗ ಅಧ್ಯಯನ ಕೇಂದ್ರವು ಲಿಂಗ, ಯೋಗ, ಧ್ಯಾನ ಅರ್ಚನೆಯನ್ನು ನಿರಂತರ ಜಾಗೃತಿಯ ಅರಿವುಗೊಳಿಸುವಿಕೆಯ ಧರ್ಮ ಕಾರ್ಯವು ಪ್ರಶಂಸಾರ್ಹ ಸಂಗತಿಯಾಗಿದೆ ಎಂದರು.
ಟ್ರಸ್ಟಿನ ಟಿ.ಎಚ್. ಬಸವರಾಜ, ಇಷ್ಟಲಿಂಗ ಅಧ್ಯಯನ ಕೇಂದ್ರದ ಡಾ. ಅಜಯ್ ಕುಮಾರ್, ಬಸವರಾಜ ಮಾವಿನಹಳ್ಳಿ, ಶ್ರೀನಿವಾಸ, ಸಮಾಜಸ್ತರಾದ ಗೊಂಗಡಶೆಟ್ಟಿ ಲಿಂಗಪ್ಪ, ಮಲ್ಲೇಶಪ್ಪ, ಬಸವಕಿರಣಸ್ವಾಮಿ, ಅವರಾಧಿ, ಡಾ. ಮಹಾಬಲೇಶ್ವರರೆಡ್ಡಿ, ಈಶ್ವರಪ್ಪ, ನಾಡಗೌಡ್ರ, ಬಸಾಪುರ ಬಸವರಾಜ, ಹೇಮಗಿರಿಯಪ್ಪ, ದೊಡ್ಡಬಸಪ್ಪ, ನಂದೀಶ ದಂಡಿ ಮತ್ತಿತರು ಉಪಸ್ಥಿತರಿದ್ದರು.