ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್ ಡಿಕೆ ಶಿವಕುಮಾರ್ ಲಿಂಕ್ ಕೆನಾಲ್ ಕಾಮಗಾರಿ ಪರಿಶೀಲನೆ ನಡೆಸಿದ್ದು ಕೆಲವೇ ದಿನಗಳಲ್ಲಿ ಕಾಮಗಾರಿಯನ್ನು ಪುನಃ ಪ್ರಾರಂಭ ಮಾಡುತ್ತೇವೆ ನಮ್ಮ ಕುಣಿಗಲ್ ತಾಲೂಕಿಗೆ ಬರುವ ನೀರನ್ನು ನಾವು ಪಡೆಯಲು ಸಿದ್ದ ಎಂದು ಕುಣಿಗಲ್ ಶಾಸಕ ಡಾ. ರಂಗನಾಥ ತಿಳಿಸಿದ್ದಾರೆ. ಮೂಡಲ ಕುಣಿಗಲ್ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಬಾಗಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವಿರೋಧ ಪಕ್ಷದ ಶಾಸಕರು ಮತ್ತು ಕೇಂದ್ರ ಸಚಿವ ವಿ ಸೋಮಣ್ಣ ಅವರ ಸಲಹೆಯಂತೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಹಲವಾರು ಸಾಧಕ ಬಾಧಕಗಳನ್ನ ವಿಚಾರಿಸಿದ್ದು ಕಾಮಗಾರಿಯನ್ನು ಪುನಃ ಪ್ರಾರಂಭ ಮಾಡಲು ತಿಳಿಸಿದ್ದಾರೆ. ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದ್ದು ಕುಣಿಗಲ್ ತಾಲೂಕಿಗೆ ಬರಬೇಕಾದ ನೀರಿನ ಪಾಲನ್ನು ಸಂಪೂರ್ಣವಾಗಿ ಪಡೆಯಲು ನಾವು ತಯಾರಿದ್ದೇವೆ ಎಂದರು. ಹಾಸನ ಜನತೆ ಹಾಗೂ ಅಲ್ಲಿನ ರಾಜಕಾರಣಿಗಳು ಹೇಮಾವತಿ ನೀರನ್ನು ವಿರೋಧ ಮಾಡಿದ್ದರೇ ತುಮಕೂರು ಜನತೆಗೆ ನೀರು ಸಿಗುತ್ತಿರಲಿಲ್ಲ. ಒಂದು ನೀರು ಒಂದು ಹಂಚಿಕೆ ಸಮಭಾಗಿತ್ವ ನಡೆಯುವುದು ಸಾಮಾನ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು ಕೆರೆಯ ಕೋಡಿಯಲ್ಲಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಭರತನಾಟ್ಯವನ್ನು ಏರ್ಪಡಿಸಿದ್ದು ಶಾಸಕರು ಕೆಲ ಕಾಲ ವೀಕ್ಷಿಸಿದರುಈ ಸಂದರ್ಭದಲ್ಲಿ ಕುಣಿಗಲ್ ತಹಸೀಲ್ದಾರ್ ರಶ್ಮಿ, ಹೇಮಾವತಿ ನೀರಾವರಿ ನಿಗಮದ ಎಕ್ಸಿಕ್ಯೂಟಿವ್ ಎಂಜಿನಿಯರ್ ರವಿಕುಮಾರ್ , ಪುರಸಭಾ ಅಧ್ಯಕ್ಷರಾದ ಮಂಜುಳಾ ನಾಗರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಆಸ್ಮಾ ಜಬಿವುಲ್ಲಾ, ಉಪಾಧ್ಯಕ್ಷ ಮಲ್ಲಿಪಾಳ್ಯ ಶ್ರೀನಿವಾಸ್ ಸೇರಿದಂತೆ ಹಲವಾರು ಸದಸ್ಯರು ಹಾಗೂ ಮುಖಂಡರಾದ, ಪಾಪಣ್ಣ, ರಾಜಶೇಖರ್ ಸೇರಿದಂತೆ ಇತರರು ಇದ್ದರು.