ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವದ ಲಾಂಛನ ಬಿಡುಗಡೆ

| Published : Jun 10 2025, 01:45 AM IST

ಸಾರಾಂಶ

ಲಯನ್ಸ್ ಸೇವಾಸಂಸ್ಥೆಯ ೫೦ನೇ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವದ ಲಾಂಛನವನ್ನು ಮಾಜಿ ಗೌರ್‍ನರ್ ಲಯನ್ ಬಿ.ವಿ. ಹೆಗಡೆ ಮತ್ತು ಮಾಲತಿ ಹೆಗಡೆ ದಂಪತಿ ಬಿಡುಗಡೆಗೊಳಿಸಿದರು. ಈ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನೂತನ ಅಧ್ಯಕ್ಷರು ಇನ್ನಷ್ಟು ಒಳ್ಳೆ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು ಸಭೆಗೆ ಕೆಲ ಉಪಯುಕ್ತ ಮಾಹಿತಿ ನೀಡಿದರು. ನಿಯೋಜಿತ ಅಧ್ಯಕ್ಷ ಲಯನ್ಸ್‌ ಎಚ್. ರಮೇಶ್ ಮಾತನಾಡಿ, ತಮ್ಮ ಅವಧಿಯಲ್ಲಿ ಮಾಡಲು ನಿರ್ಧರಿಸಿರುವ ಶಾಶ್ವತ ಸೇವೆಗಳ ಯೋಜನೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಹುಡಾ ಕಚೇರಿ ಎದುರು ಕುವೆಂಪು ರಸ್ತೆಯಲ್ಲಿರುವ ಲಯನ್ಸ್ ಸೇವಾಸಂಸ್ಥೆಯ ೫೦ನೇ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವದ ಲಾಂಛನವನ್ನು ಮಾಜಿ ಗೌರ್‍ನರ್ ಲಯನ್ ಬಿ.ವಿ. ಹೆಗಡೆ ಮತ್ತು ಮಾಲತಿ ಹೆಗಡೆ ದಂಪತಿ ಬಿಡುಗಡೆಗೊಳಿಸಿದರು.ನಿಯೋಜಿತ ಅಧ್ಯಕ್ಷ ಲಯನ್ ಎಚ್. ರಮೇಶ್ ಅವರು ಆಯೋಜಿಸಿದ್ದ ಚಿಂತಕರ ಚಾವಡಿಯಲ್ಲಿ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಲಯನ್ ಮಂಜುನಾಥ್ ಮೂರ್ತಿ, ಎಸ್.ಕೆ. ಸತ್ಯನಾರಾಯಣ್, ಪ್ರಕಾಶ್ ಎಸ್. ಯಾಜಿ ಇವರು ಮಾತನಾಡಿ, ಸುವರ್ಣ ಮಹೋತ್ಸವದ ವರ್ಷದಲ್ಲಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ, ಲಯನ್ಸ್ ಎಂದರೇ ಸೇವೆ ಮಾಡು ಎಂದರ್ಥ. ಸಮಾಜದಲ್ಲಿ ಕಂಡು ಬರುವ ಸಮಸ್ಯೆಗಳ ನಿವಾರಣೆಗೆ ಸ್ವಲ್ಪವಾದರೂ ಸ್ಪಂದಿಸುವ ನಿಟ್ಟಿನಲ್ಲಿ ಈ ಲಯನ್ಸ್ ಕ್ಲಬ್ ತಲೆ ಎತ್ತಿದೆ. ಲಯನ್ಸ್ ಪ್ರತಿ ಅಧ್ಯಕ್ಷರ ಅವಧಿಯಲ್ಲಿ ಉತ್ತಮ ಕೆಲಸವಾಗಿದ್ದು, ಅದರಲ್ಲೂ ಈ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನೂತನ ಅಧ್ಯಕ್ಷರು ಇನ್ನಷ್ಟು ಒಳ್ಳೆ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು ಸಭೆಗೆ ಕೆಲ ಉಪಯುಕ್ತ ಮಾಹಿತಿ ನೀಡಿದರು. ನಿಯೋಜಿತ ಅಧ್ಯಕ್ಷ ಲಯನ್ಸ್‌ ಎಚ್. ರಮೇಶ್ ಮಾತನಾಡಿ, ತಮ್ಮ ಅವಧಿಯಲ್ಲಿ ಮಾಡಲು ನಿರ್ಧರಿಸಿರುವ ಶಾಶ್ವತ ಸೇವೆಗಳ ಯೋಜನೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಹಾಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಐ.ಜಿ. ರಮೇಶ್, ಕಾರ್ಯದರ್ಶಿ ರವಿಕುಮಾರ್‌ ಬಲ್ಲೆನಹಳ್ಳಿ, ಖಜಾಂಚಿ ಸಿ.ಬಿ. ನಾಗರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.