ನಿಸ್ವಾರ್ಥ ಸೇವೆ ಮಾಡಲು ಲಯನ್ಸ್‌ ಕ್ಲಬ್‌ ಸೂಕ್ತ ವೇದಿಕೆ

| Published : Dec 13 2024, 12:49 AM IST

ನಿಸ್ವಾರ್ಥ ಸೇವೆ ಮಾಡಲು ಲಯನ್ಸ್‌ ಕ್ಲಬ್‌ ಸೂಕ್ತ ವೇದಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸೇವೆಯನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ ಸೇವಾಸಂಸ್ಥೆಗಳಲ್ಲಿ ಲಯನ್ಸ್ ಸಂಸ್ಥೆ ಅಗ್ರಸ್ಥಾನದಲ್ಲಿದೆ ಸೇವೆ ಮಾಡುವ ಮನೋಭಾವ ಇರುವವರು ಮಾತ್ರ ಲಯನ್ಸ್ ಸಂಸ್ಥೆಗೆ ಸೇರಬಹುದು. ಇದರಿಂದ ಲಾಭ ಮಾಡಬಹುದು ಎಂಬ ಕಲ್ಪನೆಯಿಂದ ಯಾರೂ ಈ ಸಂಸ್ಥೆಗೆ ಬಂದವರಲ್ಲ. ಈ ಜಿಲ್ಲೆಗೆ ಹಾಗೂ ತಾಲೂಕಿಗೆ ಏನಾದರೂ ತಮ್ಮ ಕೊಡುಗೆ ನೀಡಬೆಕ್ಕೆನ್ನುವ ಆತ್ಮಭಿಮಾನ ಹೊಂದಿರುವವರು ಇಂತಹ ಕಾರ್ಯಕ್ಕೆ ಮುಂದಾಗುತ್ತಾರೆ ಎಂದು ತಿಳಿಸಿ ನಾವು ಮಾಡಿದ ಸಹಾಯ ಅನೇಕ ಕಾರ್ಯಗಳಿಗೆ ಉಪಯೋಗವಾಗಲಿ ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆದು ಸಮಾಜಮುಖಿ ಕೆಲಸಗಳಿಗೆ ಉಪಯೋಗವಾಗಲಿ ಎಂದು ರಘು ಪಾಳ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಆಲೂರು

ಲಯನ್ಸ್ ಕ್ಲಬ್ ಸೇವಾ ಸಂಸ್ಥೆಗೆ 2 ಲಕ್ಷ ರು. ದೇಣಿಗೆ ನೀಡಿದ ಕಬ್ಬಿನಹಳ್ಳಿ ಜಗದೀಶ್ ಅವರಿಗೆ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಲಯನ್ಸ್ ಕ್ಲಬ್‌ನ ವಲಯ ಅಧ್ಯಕ್ಷರಾದ ರಘು ಪಾಳ್ಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸೇವಾ ಮನೋಭಾವದಿಂದ ನಿರಂತರವಾಗಿ ಬೆಳವಣಿಗೆ ಹೊಂದಿ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿರುವ ಲಯನ್ಸ್ ಕ್ಲಬ್ ಸಂಸ್ಥೆಯು ಸಾಮಾಜಿಕ ಸೇವೆ ಅನನ್ಯ. ಲಯನ್ಸ್ ಕ್ಲಬ್ ಸಂಸ್ಥೆಯು ಸಾರ್ವಜನಿಕರಿಗೆ ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಾ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಅಲ್ಲದೆ ಜಗದೀಶ್ ಅವರು ಕ್ಲಬ್‌ನ ಸದಸ್ಯರು ಅಲ್ಲದೆ ಇದ್ದರು ಕ್ಲಬ್‌ನ ಬೆಳವಣಿಗೆಗೆ ಹಾಗೂ ಕಾರ್ಯಗಳನ್ನು ನೋಡಿ ಕಟ್ಟಡ ನಿರ್ಮಾಣಕ್ಕೆ ಸುಮಾರು ಆರು ಲಕ್ಷದವರೆಗೂ ಹಣ ನೀಡಿದ್ದಾರೆ. ಅಲ್ಲದೆ ಅನೇಕ ಸಂಘ ಸಂಸ್ಥೆಗಳ ಅಭಿವೃದ್ಧಿಗೆ ಜಗದೀಶ್ ಅವರ ಕೊಡುಗೆ ಅಪಾರ. ಅವರ ಈ ನಿಸ್ವಾರ್ಥ ಸೇವೆ ಬಡವರಿಗೆ ಹಾಗೂ ಸಮಾಜಮುಖಿ ಕೆಲಸಗಳಿಗೆ ಹೆಸರುವಾಸಿಯಾಗಿದ್ದಾರೆ ಎಂದರು. ನಂತರ ಕಬ್ಬಿನಹಳ್ಳಿ ಜಗದೀಶ್ ಮಾತನಾಡಿ, ಯಾವುದೇ ಫಲಾಪೇಕ್ಷೆಯಿಲ್ಲದೇ ಸೇವೆ ಮಾಡಬೇಕು ಎಂಬ ಮನೋಭಾವ ಇರುವವರಿಗೆ ಲಯನ್ಸ್ ಸಂಸ್ಥೆ ಸೂಕ್ತ ವೇದಿಕೆ ಎಂದು ಕಬ್ಬಿನಹಳ್ಳಿ ಜಗದೀಶ್ ತಿಳಿಸಿದರು. ಲಯನ್ಸ್ ಸಂಸ್ಥೆ ಇಂದು ವಿಶ್ವದೆಲ್ಲೆಡೆ ಹಬ್ಬಿದೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಕಾರ್ಯ ನಿರ್ವಹಿಸುತ್ತಿದೆ. ಲಯನ್ಸ್ ಸೇವಾಸಂಸ್ಥೆಗಳು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದರು.

ಸೇವೆಯನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ ಸೇವಾಸಂಸ್ಥೆಗಳಲ್ಲಿ ಲಯನ್ಸ್ ಸಂಸ್ಥೆ ಅಗ್ರಸ್ಥಾನದಲ್ಲಿದೆ ಸೇವೆ ಮಾಡುವ ಮನೋಭಾವ ಇರುವವರು ಮಾತ್ರ ಲಯನ್ಸ್ ಸಂಸ್ಥೆಗೆ ಸೇರಬಹುದು. ಇದರಿಂದ ಲಾಭ ಮಾಡಬಹುದು ಎಂಬ ಕಲ್ಪನೆಯಿಂದ ಯಾರೂ ಈ ಸಂಸ್ಥೆಗೆ ಬಂದವರಲ್ಲ. ಈ ಜಿಲ್ಲೆಗೆ ಹಾಗೂ ತಾಲೂಕಿಗೆ ಏನಾದರೂ ತಮ್ಮ ಕೊಡುಗೆ ನೀಡಬೆಕ್ಕೆನ್ನುವ ಆತ್ಮಭಿಮಾನ ಹೊಂದಿರುವವರು ಇಂತಹ ಕಾರ್ಯಕ್ಕೆ ಮುಂದಾಗುತ್ತಾರೆ ಎಂದು ತಿಳಿಸಿ ನಾವು ಮಾಡಿದ ಸಹಾಯ ಅನೇಕ ಕಾರ್ಯಗಳಿಗೆ ಉಪಯೋಗವಾಗಲಿ ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆದು ಸಮಾಜಮುಖಿ ಕೆಲಸಗಳಿಗೆ ಉಪಯೋಗವಾಗಲಿ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಲಯನ್ಸ್‌ ಸೇವಾ ಸಂಸ್ಥೆಯ ಅಧ್ಯಕ್ಷ ಮಹೇಶ್, ಕಾರ್ಯದರ್ಶಿ ಪ್ರತಾಪ್ ಎಸ್ ಆರ್‌, ಖಜಾಂಚಿ ಕರೀಗೌಡ ಎಚ್ ಎಲ್, ವಲಯ ಅಧ್ಯಕ್ಷ ರಘು ಪಾಳ್ಯ, ಲಯನ್ ಸೇವಾ ಭವನ ಟ್ರಸ್ಟ್ ಅಧ್ಯಕ್ಷ ರೇಣುಕಾ ಪ್ರಸಾದ್, ಮಾಜಿ ಅಧ್ಯಕ್ಷ ನಟರಾಜ್, ಪ್ರವೀಣ್, ಆನಂದ್, ಪ್ರವೀಣ್, ಹುಲ್ಲಹಳ್ಳಿ ನಾಗರಾಜು, ಸದಸ್ಯರಾದ ಪರಮೇಶ್, ಮಂಜೇಗೌಡ, ದರ್ಶನ್, ಚಿರಾಗ್, ಕುಲದೀಪ್ ಸೇರಿದಂತೆ ಇತರರು ಇದ್ದರು.ಫೋಟೋ:

12ಎಚ್ಎಸ್ಎನ್6 : ಕಾರ್ಯಕ್ರಮದಲ್ಲಿ ಕಬ್ಬಿನಹಳ್ಳಿ ಜಗದೀಶ್ ಅವರನ್ನು ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.