ಸರ್ವ ರಂಗದ ಏಳಿಗೆಗೆ ಶ್ರಮಿಸಿದ ಲಯನ್ಸ್‌ ಪರಿವಾರ

| Published : Sep 02 2025, 01:01 AM IST

ಸರ್ವ ರಂಗದ ಏಳಿಗೆಗೆ ಶ್ರಮಿಸಿದ ಲಯನ್ಸ್‌ ಪರಿವಾರ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಮುಖಿ ಕಾರ್ಯಗಳಲ್ಲಿ ಲಯನ್ಸ್‌ ಕ್ಲಬ್‌ ಹಲವು ದಶಕಗಳಿಂದ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸರ್ವ ರಂಗದ ಏಳಿಗೆಗೆ ಶ್ರಮಿಸಿದೆ ಎಂದು ಲಯನ್ಸ್ ಅಂತಾರಾಷ್ಷ್ರೀಯ ಸಂಸ್ಥೆಯ 317-B ಜಿಲ್ಲಾ ವಲಯದ ಮಾಜಿ ಡಿಸ್ಟ್ರಿಕ್ಟ್ ಗವರ್ನರ್‌ ಹಾಗೂ ಪಿಡಬ್ಲ್ಯುಡಿ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಎಂ.ಜೆ.ಎಫ್ ಹಾವೇರಿಯ ಲಯನ್ ವೀರನಗೌಡ ಹಿರೇಗೌಡರ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಾಮಾಜಮುಖಿ ಕಾರ್ಯಗಳಲ್ಲಿ ಲಯನ್ಸ್‌ ಕ್ಲಬ್‌ ಹಲವು ದಶಕಗಳಿಂದ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸರ್ವ ರಂಗದ ಏಳಿಗೆಗೆ ಶ್ರಮಿಸಿದೆ ಎಂದು ಲಯನ್ಸ್ ಅಂತಾರಾಷ್ಷ್ರೀಯ ಸಂಸ್ಥೆಯ 317-B ಜಿಲ್ಲಾ ವಲಯದ ಮಾಜಿ ಡಿಸ್ಟ್ರಿಕ್ಟ್ ಗವರ್ನರ್‌ ಹಾಗೂ ಪಿಡಬ್ಲ್ಯುಡಿ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಎಂ.ಜೆ.ಎಫ್ ಹಾವೇರಿಯ ಲಯನ್ ವೀರನಗೌಡ ಹಿರೇಗೌಡರ ಬಣ್ಣಿಸಿದರು.

ನಗರದ ಮಧುವನ ಹೋಟೆಲ್‍ನಲ್ಲಿ ನಡೆದ ಲಯನ್ಸ್ ಕ್ಲಬ್ ಆಫ್ ಬಿಜಾಪುರ ಪರಿವಾರದ 2025-26ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ವಿಜಾಪುರ ಲಯನ್ಸ್‌ ಕ್ಲಬ್‌ ಪರಿವಾರದವರು ಸೇವೆ ಮಾಡುತ್ತಿರುವುದು ಅಭಿನಂದನಾರ್ಹ ಎಂದು ಶ್ಲಾಘಿಸಿದರು.ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಮಾತನಾಡಿ, ಲಯನ್ಸ್‌ ಸಂಸ್ಥೆ ಕೇವಲ ಒಂದು ಜಿಲ್ಲೆ, ತಾಲೂಕಿಗೆ ಸೀಮಿತವಾಗದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಸೇವೆ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲಯನ್ಸ್ ಪರಿವಾರದ ಮಾರ್ಗದರ್ಶಕ ಅಧಿಕಾರಿ ಜಮಖಂಡಿ ಪ್ರೊ.ಬಸವರಾಜ ಕೊಣ್ಣುರ ಮಾತನಾಡಿ, ಕೇವಲ ವ್ಯಕ್ತಿಯಾಗಿ ಕೆಲಸ ಮಾಡುವುದಕ್ಕಿಂತ ಸಾಮೂಹಿಕವಾಗಿ ಶ್ರಮಪಟ್ಟರೆ ಹೆಚ್ಚು ಸಾಧನೆ ಮಾಡಲು ಸಾಧ್ಯ. ಹೀಗಾಗಿ ಸಂಘ-ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಹೆಚ್ಚೆಚ್ಚು ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷರಾಗಿ ಸಹಕಾರ ಸಂಘಗಳ ನೋಂದಣಿ ಇಲಾಖೆಯ ನಿವೃತ್ತ ಜಿಲ್ಲಾ ಅಧಿಕಾರಿ ಚಿದಾನಂದ ನಿಂಬಾಳ, ಕಾರ್ಯದರ್ಶಿಗಳಾಗಿ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ನೀಡುವ ಸುವರ್ಣ ಸಾಧಕಿ ಪ್ರಶಸ್ತಿ ಪುರಸ್ಕೃತೆ ವಿದ್ಯಾ ಕೋಟೆನ್ನವರ, ಖಜಾಂಚಿಗಳಾಗಿ ಪುಷ್ಪಾ ಮಹಾಂತಮಠ ಅಧಿಕಾರ ಸ್ವೀಕರಿಸಿದರು. ಪದಗ್ರಾಹಕರಾಗಿ ಆಗಿಮಿಸಿದ ಪಿಡಬ್ಲ್ಯುಡಿ ಇಲಾಖೆಯ ಎಕ್ಸಿಕ್ಯೂಟಿವ್‌ ಇಂಜನಿಯರ್‌ ವೀರನಗೌಡ ಹಿರೇಗೌಡರ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.ಲಯನ್ಸ್ ಪರಿವಾರದ ಸಂಸ್ಥಾಪಕ ಹಾಗೂ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ನೀಡುವ ಪ್ರತಿಷ್ಠಿತ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತರಾದ ಡಾ.ಅಶೋಕಕುಮಾರ ಜಾಧವ ಸರ್ವರನ್ನು ಸ್ವಾಗತಿಸಿ, ವಂದಿಸಿದರು. ವಿಶೇಷ ಅತಿಥಿಗಳಾಗಿ ಆಗಮಿಸಿದ ಸಮಾಜ ಸೇವಕಿ ಶುಭದಾ ನಾವದಗಿ ಶುಭ ಕೋರಿದರು. ಈ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷೆ ಶಶಿಕಲಾ ಇಜೇರಿ, ಉಪಾಧ್ಯಕ್ಷರಾಗಿ ವಾಲು ಚವ್ಹಾಣ, ಜಯಶ್ರೀ ಲದ್ವಾ, ಎಸ್.ಎಸ್.ಗಂಗನಳ್ಳಿ ಉಪಸ್ಥಿತರಿದ್ದರು.ಪದಾಧಿಕಾರಿಗಳು, ನಿರ್ದೇಶಕರಿಂದ ಪ್ರಮಾಣ ವಚನ

ಮಧುಮೇಹ ತಜ್ಞ ಡಾ.ಬಾಬುರಾಜೇಂದ್ರ ನಾಯಕ, ಪ್ರೊ.ಎಸ್‌.ಎಸ್.ರಾಜಮಾನ್ಯ, ಫಯಾಜ್ ಕಲಾದಗಿ, ಎಂ.ಬಿ.ರಜಪೂತ, ರಾಜೇಶ ಗಾಯಕವಾಡ, ಎಸ್.ಆರ್.ಕಟ್ಟಿ, ಶ್ರೇಯಸ್ ಮಹೀಂದ್ರಕರ, ಸಾದುಕ್‌ ಜಾನ್ವೇಕರ, ತಾರಾಸಿಂಗ್‌ ದೊಡಮನಿ, ಧರ್ಮರಾಯ ಮಮದಾಪುರ, ಶಾಂತಾ ಉತ್ಲಾಸರ, ರಜನಿ ಸಂಬಣ್ಣಿ, ಇಂದುಮತಿ ಕನ್ನೂರ ಪದಾಧಿಕಾರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.ಮೋಹನ ಚವ್ಹಾಣ, ಪ್ರೊ.ಎಚ್.ಎ.ಕಲಾದಗಿ, ಧೊಂಡಿಬಾ ರಾಠೋಡ, ಛಾಯಾ ಮಸಿಯನವರ, ಶೈಲಾ ಬಸವಪ್ರಭು, ಅನುಸೂಯ ನಿಂಬರಗಿ, ಅನಿತಾ ಕುಮಸಿ, ಡಾ.ರವೀಂದ್ರ ಮದ್ರಕಿ, ಡಾ.ಅಶೋಕ ನಾಯಕ, ಡಾ.ಅಶೋಕ ಬಿರಾದಾರ, ಪ್ರಕಾಶ ದರ್ಬಾರ, ಡಾ.ಗಿರೀಶ ಕುಲ್ಲೋಳ್ಳಿ, ಡಾ.ರವಿ ನಾಯಕ, ಡಾ.ನಚಿಕೇತ್‌ ದೇಸಾಯಿ ನಿರ್ದೇಶಕರಾಗಿ ಹಾಗೂ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ನೀಡುವ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತರಾದ ಡಾ.ದೀಪಕ ಚವ್ಹಾಣ, ಪ್ರೊ.ಎಸ್.ಜಿ.ಮಠ, ಸಂಕೇತ ನಾಯಕ, ಸುಜಾತಾ, ಪುಜಾ, ಶ್ರೀದೇವಿ, ಭಾರತಿ ಮತ್ತು ಮಾಯಾ ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜಗತ್ತಿನ ನೂರಾರು ದೇಶ ವ್ಯಾಪ್ತಿಯಲ್ಲಿ ಸಾಮಾಜಿಕ ಕಾರ್ಯ ಕೈಗೊಂಡಿರುವ ಲಯನ್ಸ್‌ ಸಂಸ್ಥೆಯಲ್ಲಿ ಸದಸ್ಯತ್ವ ಪಡೆದ ಸರ್ವರು ಅತ್ಯುತ್ತಮ ಕಾರ್ಯಗಳನ್ನು ಮಾಡುವ ಮೂಲಕ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಉನ್ನತಿ ಸಾಧಿಸಬೇಕು. ಕ್ರಿಯಾಶೀಲ ಸದಸ್ಯರನ್ನು ಹೊಂದಿರುವ ಬಿಜಾಪುರ ಲಯನ್ಸ್‌ ಪರಿವಾರದ ಸರ್ವ ಸದಸ್ಯರಿಗೆ ಅಭಿನಂದನೆಗಳು.

-ವೀರನಗೌಡ ಹಿರೇಗೌಡರ, ಪಿಡಬ್ಲ್ಯುಡಿ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಎಂಜೆಎಫ್ ಹಾವೇರಿ ಲಯನ್.ಬಿಜಾಪುರ ಲಯನ್ಸ್ ಕ್ಲಬ್ ಪರಿವಾರ ನಮ್ಮ ವಿಶ್ವವಿದ್ಯಾಲಯದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಮಾಡುವ ಮೂಲಕ ಪರಿಸರ ಕಾಳಜಿ ಮೂಡಿಸಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಇನ್ನಷ್ಟು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಿ. ಇದಕ್ಕೆ ವಿಶ್ವವಿದ್ಯಾಲಯದಿಂದ ಸಹಾಯ ಹಾಗೂ ಸಹಕಾರವನ್ನು ಸದಾ ನೀಡಲಾಗುವುದು.

-ಪ್ರೊ.ವಿಜಯಾ ಕೋರಿಶೆಟ್ಟಿ,

ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ.