ಮನದ ಮೈಲಿಗೆ ತೊಳೆಯಲು ಅಮೃತವಾಣಿ ಆಲಿಸಿ

| Published : Dec 15 2023, 01:30 AM IST

ಮನದ ಮೈಲಿಗೆ ತೊಳೆಯಲು ಅಮೃತವಾಣಿ ಆಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ತಾಲೂಕಿನ ಹುಲಕೋಟಿ ಗ್ರಾಮದ ಬೀರದೇವರ ದೇವಸ್ಥಾನದಲ್ಲಿ ೧೩ನೇ ವರ್ಷದ ಕಾರ್ತಿಕೋತ್ಸವ, ೧೩೬ನೇ ಕನಕದಾಸರ ಜಯಂತ್ಯುತ್ಸವ ಹಾಗೂ ೧೦ನೇ ವರ್ಷದ ಹಾಲುಮತ ಪುರಾಣ ಪ್ರವಚನದ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಬಳಗಾನೂರಿನ ಶಿವಶಾಂತವೀರ ಶರಣರು ಮಾತನಾಡಿದರು.

ಪುರಾಣ ಪ್ರವಚನ ಮಂಗಲೋತ್ಸವದಲ್ಲಿ ಶಿವಶಾಂತವೀರ ಶರಣರು

ಗದಗ: ಮನದ ಮೈಲಿಗೆ ತೊಳೆಯಬೇಕಾದರೆ ಶರಣರ ಅನುಭಾದ ಅಮೃತವಾಣಿ ಆಲಿಸಿ ಅರಗಿಸಿ ಅಳವಡಿಸಿಕೊಳ್ಳಬೇಕು. ಸಮಾಜಕ್ಕಾಗಿ ಧರ್ಮಕ್ಕಾಗಿ ಸೇವೆ ಮಾಡಿದವರ ಹೆಸರು ಅಮರವಾಗುತ್ತದೆ ಎಂದು ಬಳಗಾನೂರಿನ ಶಿವಶಾಂತವೀರ ಶರಣರು ಹೇಳಿದರು.

ತಾಲೂಕಿನ ಹುಲಕೋಟಿ ಗ್ರಾಮದ ಬೀರದೇವರ ದೇವಸ್ಥಾನದಲ್ಲಿ ೧೩ನೇ ವರ್ಷದ ಕಾರ್ತಿಕೋತ್ಸವ, ೧೩೬ನೇ ಕನಕದಾಸರ ಜಯಂತ್ಯುತ್ಸವ ಹಾಗೂ ೧೦ನೇ ವರ್ಷದ ಹಾಲುಮತ ಪುರಾಣ ಪ್ರವಚನದ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಡಾ.ಶರಣಬಸವ ವೆಂಕಟಾಪೂರ ಮಾತನಾಡಿ, ದೇವತಾ ಮಾನವರಾಗಲು ಸಾಧನೆ, ಸಾಹಸ, ಸಂಯಮ ಬೇಕು, ಕಷ್ಟಗಳನ್ನು ಸವಾಲನ್ನಾಗಿಸಿಕೊಂಡು ಜೀವನ ನಡೆಸಬೇಕು. ನಾನು ಎಂಬುದನ್ನು ಅಳಿದರೆ ವೈಕುಂಠಕ್ಕೆ ಹೋಗಬಹುದು ಎಂದರು.

ಈ ವೇಳೆ ಗ್ರಾಮ ಹಿತಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಕೆ. ಪಾಟೀಲ, ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಚಂದ್ರಪ್ಪ ಕರಿಕಟ್ಟಿ, ಮಾಜಿ ತಾಪಂ ಅಧ್ಯಕ್ಷ ಮೋಹನ ದುರಗಣ್ಣವರ, ಗ್ರಾಪಂ ಅಧ್ಯಕ್ಷೆ ನಾಗರತ್ನ ಬಾಳಿಹಳ್ಳಿಮಠ, ಉಪಾಧ್ಯಕ್ಷ ಅಬ್ದುಲ್ ಕರಿಂಸಾಬ ತಹಸೀಲ್ದಾರ್‌ , ಸದಸ್ಯರಾದ ಎಂ.ಜಿ. ಹುಬ್ಬಳ್ಳಿ, ಶ್ರೀದೇವಿ ಕೋರಿ, ಜಿ.ಕೆ. ನಿಂಬನಾಯ್ಕರ, ಬಿ.ಎಸ್. ಬ್ಯಾಡಗಿ, ಜಿ.ಆರ್. ಓದುಗೌಡರ, ಯಲ್ಲಪ್ಪ ಹೊನ್ನಿನಾಯ್ಕರ, ಯೋಗಸಾಧಕಿ ಸರಸ್ವತಿ ಕೊಂಡಿಕೊಪ್ಪ ಸೇರಿದಂತೆ ಮೊದಲಾದವರು ಇದ್ದರು.

ಫಕ್ಕೀರಯ್ಯ ಅಮೋಘಿಮಠ ಪುರಾಣ ಪ್ರವಚನ ಮಾಡಿದರು. ಧರ್ಮರಾಜ ಪಾಟೀಲ, ರುದೇಶ ನಾವಳ್ಳಿ ಪ್ರಾರ್ಥಿಸಿದರು. ಮೋಹನ ದುರಗಣ್ಣವರ ಸ್ವಾಗತಿಸಿದರು. ಪ್ರಧಾನ ಗುರು ಎ.ವಿ. ಪ್ರಭು ನಿರೂಪಿಸಿದರು. ಪಾಂಡು ಹೊನ್ನಿನಾಯ್ಕರ ವಂದಿಸಿದರು.