ಮಾನಸಿಕ ನೆಮ್ಮದಿಗೆ ಮಹಾತ್ಮಾರ ಚರಿತ್ರೆ ಆಲಿಸಿ

| Published : Oct 30 2024, 12:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ ಮನುಷ್ಯನಿಗೆ ಯಾವುದೇ ವಿಷಯದಲ್ಲಿ ಅನುಭವವಿಲ್ಲವೆಂದರೆ ಗೌರವ ಕಡಿಮೆ. ಜಗತ್ತಿನಲ್ಲಿ ಅನುಭವಕ್ಕೆ ಇರುವ ಬೆಲೆ ಬೇರೆ ಯಾವುದಕ್ಕೂ ಇಲ್ಲ. ಆದ್ದರಿಂದ ಮಹಾತ್ಮರು, ಅನುಭವಿಗಳು ಹೇಳುವ ಮಾತಿನಲ್ಲಿ ಅಮೃತವಿರುತ್ತದೆ ಹಾಗೂ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಜೋಕಾನಟ್ಟಿ ಯೋಗಿಸಿದ್ದೇಶ್ವರ ಮಠದ ಪ.ಪೂ.ಶ್ರೀ ಬಿಳಿಯಾನಿಸಿದ್ದ ಸ್ವಾಮೀಜಿ ಹೇಳಿದರು.ನಗರದ ಆರಾಧ್ಯ ದೈವ ಕರಿಸಿದ್ದೇಶ್ವರ ದೇವಸ್ಥಾನದ ಜಾತ್ರೆ ನಿಮಿತ್ತವಾಗಿ ದೇವಸ್ಥಾನದಲ್ಲಿ ನಡೆಯುತ್ತಿರುವ 5 ದಿನಗಳ ಪ್ರವಚನದಲ್ಲಿ ಮುಖ್ಯ ಪ್ರವಚನಕಾರರಾಗಿ ಭಾಗವಹಿಸಿ ಉಪದೇಶ ನೀಡಿದ ಅವರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಮನುಷ್ಯನಿಗೆ ಯಾವುದೇ ವಿಷಯದಲ್ಲಿ ಅನುಭವವಿಲ್ಲವೆಂದರೆ ಗೌರವ ಕಡಿಮೆ. ಜಗತ್ತಿನಲ್ಲಿ ಅನುಭವಕ್ಕೆ ಇರುವ ಬೆಲೆ ಬೇರೆ ಯಾವುದಕ್ಕೂ ಇಲ್ಲ. ಆದ್ದರಿಂದ ಮಹಾತ್ಮರು, ಅನುಭವಿಗಳು ಹೇಳುವ ಮಾತಿನಲ್ಲಿ ಅಮೃತವಿರುತ್ತದೆ ಹಾಗೂ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಜೋಕಾನಟ್ಟಿ ಯೋಗಿಸಿದ್ದೇಶ್ವರ ಮಠದ ಪ.ಪೂ.ಶ್ರೀ ಬಿಳಿಯಾನಿಸಿದ್ದ ಸ್ವಾಮೀಜಿ ಹೇಳಿದರು.ನಗರದ ಆರಾಧ್ಯ ದೈವ ಕರಿಸಿದ್ದೇಶ್ವರ ದೇವಸ್ಥಾನದ ಜಾತ್ರೆ ನಿಮಿತ್ತವಾಗಿ ದೇವಸ್ಥಾನದಲ್ಲಿ ನಡೆಯುತ್ತಿರುವ 5 ದಿನಗಳ ಪ್ರವಚನದಲ್ಲಿ ಮುಖ್ಯ ಪ್ರವಚನಕಾರರಾಗಿ ಭಾಗವಹಿಸಿ ಉಪದೇಶ ನೀಡಿದ ಅವರು, ಮನುಷ್ಯ ನೆಮ್ಮದಿ ಗಳಿಸಲು ಹಲವು ವಿಧದ ದಾರಿ ಹುಡುಕುತ್ತಾನೆ. ತಾನು ಮಾಡುವ ಯಾವುದೇ ಕೆಲಸಕ್ಕೆ ದೇವರ ಅನುಗ್ರಹ ಬಹಳ ಮುಖ್ಯವಾಗಿದೆ. ಅನುಗ್ರಹ ಪಡೆಯಲು ಅನುಭಾವಿಗಳ ಮಹಾತ್ಮರ ಮಾತು ಆಲಿಸುವುದು, ನಾಮ ಸ್ಮರಣೆ, ಚರಿತ್ರೆ ಕೇಳುವುದರಿಂದ ನೆಮ್ಮದಿ, ಸುಖ, ಶಾಂತಿ ಹೊಂದಲು ಸಾಧ್ಯ. ಕರಿಸಿದ್ದೇಶ್ವರ, ಅಮೋಘಸಿದ್ದೇಶ್ವರ, ಮಾಳಿಂಗರಾಯ, ಮಹಾಲಿಂಗೇಶ್ವರರು ಇನ್ನೂ ಅನೇಕ ಮಹಾಪುರುಷರ ಚರಿತ್ರೆಗಳು ಮನುಕುಲಕ್ಕೆ ಬೆಳಕು ಚೆಲ್ಲಿವೆ. ಕರಿಸಿದ್ದೇಶ್ವರರು ಸಾಕ್ಷಾತ್ ಶಿವ ಪಾರ್ವತಿ ಕೃಪಾರ್ಶೀವಾದದಿಂದ ಶಿವನ ಅವತಾರವೆತ್ತಿ ಭೂಲೋಕಕ್ಕೆ ಬಂದು ಭಕ್ತರನ್ನು ಉದ್ದರಿಸುತ್ತಿದ್ದಾರೆ ಎಂದರು.

ಯುವ ವಾಗ್ಮಿ ಮಹೇಶ ಇಟಕನ್ನವರ ಮಾತನಾಡಿ, ಶಾಂತಿ ಹುಡುಕಿಕೊಂಡು ಹೋಗುವ ಮನುಷ್ಯನಿಗೆ ಮಾನಸಿಕ ನೆಮ್ಮದಿ ಇಲ್ಲ ಅಂದರೆ ಬದುಕು ಕಷ್ಟ ವಾಗುತ್ತದೆ. ಆಗ ಆತನಿಗೆ ಅನುಭವ ತರಬೇತಿ ಬೇಕಾಗುತ್ತದೆ. ಅಂತಹ ಅನುಭವಕ್ಕಾಗಿ ಹಾಗೂ ನೆಮ್ಮದಿ ಪಡೆಯಲು ಮಹಾತ್ಮರ ಸನ್ನಿಧಾನದಲ್ಲಿ ನಾಮ ಸ್ಮರಣೆ ಹಾಗೂ ಒಂದಿಲ್ಲಾ ಒಂದು ಸತ್ಸಂಗದಲ್ಲಿ ನಿರಂತರ ಭಾಗವಹಿಸಿ ಮಾನಸಿಕ ನೆಮ್ಮದಿ ಕಂಡುಕೊಳಬಹುದು ಎಂದರು.

ಕಾಡಮ್ಮಗಿರಿ ಅವಧೂತಸಿದ್ದ ವಿಶೇಷ ಆಹ್ವಾನಿತರಾಗಿ ಆಗಮಿಸಿ ಸಾನ್ನಿಧ್ಯ ವಹಿಸಿ ಮಾತನಾಡಿ, ಆದಿಗುರು ಶಂಕರಾಚಾರ್ಯರು ವ್ಯಾಪಾಕ ಪ್ರಯಾಣ, ತೀರ್ಥಯಾತ್ರೆ ಮಾಡಿ ಅನೇಕ ಕಡೆ ಶಕ್ತಿ ಪೀಠ (ಲಿಂಗ) ಸ್ಥಾಪನೆ ಮಾಡಿ ಉತ್ತರ, ಪೂರ್ವ, ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ಸನ್ಯಾಸಿಗಳ ಕೇಂದ್ರ ಸ್ಥಾಪಿಸಿ ಭಾರತವನ್ನು ಅಧ್ಯಾತ್ಮ ಕ್ಷೇತ್ರದ ವಿಶ್ವದ ಅಧಿಪತಿಯನ್ನಾಗಿ ಮಾಡಿದ್ದಾರೆ. ಅವರು ಸ್ಥಾಪಿಸಿದ ನಾಲ್ಕು ಮಠಗಳು ಹಿಂದೂ ಧರ್ಮವನ್ನು ಸುಧಾರಿಸುವಲ್ಲಿ ಮಹತ್ತರವಾದ ಪ್ರಭಾವ ಬೀರಿವೆ. ಮಹಾತ್ಮರ ಸತ್ಸಂಗಗಳಿಂದ ನಿಜವಾಗಿಲು ಪ್ರತಿಯೊಬ್ಬರೂ ನೆಮ್ಮದಿ ಸಮಾಧಾನ ಕಂಡುಕೊಳ್ಳುಬಹುದು. ಮಾನಸಿಕ ಒತ್ತಡ ಮುಕ್ತಾನಾಗಲು ಸತ್ಸಂಗದಲ್ಲಿ ಭಾಗವಹಿಸಿದರೆ ಸಾಕು ಒತ್ತಡಗಳು ಕಡಿಮೆಯಾಗಿ ನೆಮ್ಮದಿ ದೊರೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸತ್ಯಪ್ಪ ಹುದ್ದಾರ, ಸೂರಪ್ಪ ಮುಂಡಗನೂರ, ಚಂದ್ರಪ್ಪ ಡೋಣಿ, ಶ್ರೀಕಾಂತ ಮುದೇಗೋಳ ವೇದಿಕೆಯಲ್ಲಿ ಇದ್ದರು.

ಮುಖಂಡರಾದ, ಮಹಾಲಿಂಗಪ್ಪ ಜಕ್ಕಣ್ಣವರ, ಗಬಗಾಧರ ಮೇಟಿ, ಮಹಾಲಿಂಗಪ್ಪ ಬಾಡಗಿ ಕಲ್ಲಪ್ಪ ಚಿಂಚಲಿ, ಯಲ್ಲಣ್ಣಗೌಡ ಪಾಟೀಲ, ಬಸವರಾಜ್ ಮೇಟಿ, ಮಹಾಲಿಂಗ ಹೊಸೂರ, ಕರೆಪ್ಪ ಮೇಟಿ, ಜೊತೆಪ್ಪ ಕಪರಟ್ಟಿ, ಪರಶು ಕೊಣ್ಣೂರ, ಹಣಮಂತ ಸಂಶಿ, ಹಣಮಂತ ಅವಟಗಿ, ಭರಮಪ್ಪ ಅವಟಗಿ, ಕರೆಪ್ಪ ಪೂಜೇರಿ, ಶ್ರೀಶೈಲ್ ಅವಟಗಿ,ಮುತ್ತು ದಿವಾನ, ಪರಶು ಬಂಡಿ, ಯಲ್ಲಪ್ಪ ಪಟ್ಟಣಕೋಡಿ, ಈರಪ್ಪ ಜಕ್ಕಣ್ಣವರ, ವಿಠಲ ಬನಾಜ, ಮಲ್ಲನಗೌಡ ಪಾಟೀಲ, ಸುರೇಶ ಲಾತುರ, ಅರ್ಜುನ್ ಮೇಟಿ, ನಿಂಗಪ್ಪ ಅವಟಿ, ಮಹಾಲಿಂಗ ಅವಟಿ, ಮಲ್ಲಿಕಾಜರ್ುನ ಬನಹಟ್ಟಿ ವಿಜಯ್ ಸಂಶಿ ಸೇರಿ ಹಲವರು ಇದ್ದರು.

ಹಲವು ಗಣ್ಯರನ್ನು ಸನ್ಮಾನಿಸಲಾಯಿತು. ಲಕ್ಷ್ಮಣ ಕಿಶೋರ ನಿರೂಪಿಸಿ, ವಂದಿಸಿದರು. ಶ್ರೀಕಾಂತ್ ಮುದೇಗೋಳ ಮಹಾಪ್ರಸಾದ ವ್ಯವಸ್ಥೆ ಮಾಡಿದರು.