ಮಕ್ಕಳ ಮನೆಯಲ್ಲಿ ಅಕ್ಷರಭ್ಯಾಸ ಕಾರ್ಯಕ್ರಮ

| Published : Jul 24 2025, 12:45 AM IST

ಸಾರಾಂಶ

ಬಸವಾಪಟ್ಟಣ ಗ್ರಾಮದ ಕೆ.ಪಿ ಎಸ್ ಶಾಲೆಯ ಮಕ್ಕಳ ಮನೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳ ಮನೆಯ ಸುಮಾರು ೩೪ ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೆ.ಪಿ ಎಸ್ ಪ್ರೌಢಶಾಲೆ ವತಿಯಿಂದ ಉಪಪ್ರಾಂಶುಪಾಲರಾದ ಚಂದ್ರಪ್ಪ ಕರಿಬೀಮಣ್ಣ ಮಾತನಾಡಿ, ಪೋಷಕರು ಮನೆಯಲ್ಲಿ ಸಣ್ಣಪುಟ್ಟದ್ದನ್ನು ಕಲಿಸಿಕೊಡಬೇಕು. ಮಕ್ಕಳಿಗೆ ಶಿಕ್ಷಣದತ್ತ ಒಲವು ಹೆಚ್ಚಿಸಲು ಮಕ್ಕಳ ಮನೆಯೊಂದಿಗೆ ಕೈಜೋಡಿಸಿ ಎಂದು ತಿಳಿಸಿದರು. ಮಕ್ಕಳಿಗೆ ಶಿಕ್ಷಣದತ್ತ ಒಲವು ಹೆಚ್ಚಿಸಲು ಮಕ್ಕಳ ಮನೆಯೊಂದಿಗೆ ಕೈಜೋಡಿಸಿ ಎಂದು ತಿಳಿಸಿದರು.

ಬಸವಾಪಟ್ಟಣ: ಗ್ರಾಮದ ಕೆ.ಪಿ ಎಸ್ ಶಾಲೆಯ ಮಕ್ಕಳ ಮನೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳ ಮನೆಯ ಸುಮಾರು ೩೪ ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೆ.ಪಿ ಎಸ್ ಪ್ರೌಢಶಾಲೆ ವತಿಯಿಂದ ಉಪಪ್ರಾಂಶುಪಾಲರಾದ ಚಂದ್ರಪ್ಪ ಕರಿಬೀಮಣ್ಣ ಮಾತನಾಡಿ, ಪೋಷಕರು ಮನೆಯಲ್ಲಿ ಸಣ್ಣಪುಟ್ಟದ್ದನ್ನು ಕಲಿಸಿಕೊಡಬೇಕು. ಮಕ್ಕಳಿಗೆ ಶಿಕ್ಷಣದತ್ತ ಒಲವು ಹೆಚ್ಚಿಸಲು ಮಕ್ಕಳ ಮನೆಯೊಂದಿಗೆ ಕೈಜೋಡಿಸಿ ಎಂದು ತಿಳಿಸಿದರು.

ಬ್ಯಾಂಕ್ ಆಫ್‌ ಬರೋಡ ವ್ಯವಸ್ಥಾಪಕರಾದ ನಾರಾಯಣ ಗೌಡ, ಕೆಪಿಎಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಸರಸ್ವತಿ, ಸಹ ಶಿಕ್ಷಕ ವರ್ಗದವರು, ಮಕ್ಕಳ ಮನೆ ಶಿಕ್ಷಕರಾದ ಅಂಬಿಕ, ಚೈತ್ರ, ಮಕ್ಕಳ ಮನೆ ವಿದ್ಯಾರ್ಥಿಗಳು, ಪೋಷಕರು ಇನ್ನು ಅನೇಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.