ಸಾರಾಂಶ
ಭತ್ತದ ನಾಡು ಗಂಗಾವತಿಯಲ್ಲಿ ಭತ್ತದ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು. ಗಂಗಾವತಿ ನಗರವನ್ನು ವಾಣಿಜ್ಯ ನಗರವನ್ನಾಗಿಸಬೇಕು. ಆರ್ಥಿಕ ಸೂಚ್ಯಂಕ ಅವಲೋಕಿಸಿದಾಗ ಹಿಂದುಳಿದಿದ್ದೇವೆ.
ಗಂಗಾವತಿ:
ಸಮ್ಮೇಳನದದಲ್ಲಿ ಸಾಹಿತ್ಯಾಭಿವೃದ್ಧಿ, ಸಾಂಸ್ಕೃತಿಕ ಪರಂಪರೆ ಗೋಷ್ಠಿಗೆ ಚಾಲನೆ ನೀಡಲಾಯಿತು.ಸಾಹಿತಿ ಡಾ. ಸಿ.ಬಿ. ಚಿಲ್ಕರಾಗಿ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಕುರಿತು ಮಾತನಾಡಿ, ಸಹಬಾಳ್ವೆ, ಸಹಭಾಗಿತ್ವ, ಸಂಸ್ಕೃತಿ ಬಿಂಬಿಸುತ್ತದೆ. ಜ್ಞಾನಿಗಳು ಸಮಾಜದ ಚಿಂತಕರು. 10ನೇ ಶತಮಾನದಲ್ಲಿ ಕೊಪ್ಪಳಕ್ಕೆ ಪಂಪ, ಪೊನ್ನ, ರನ್ನ ಬಂದಿದ್ದರು ಎಂದರುಪ್ರಾಧ್ಯಾಪಕ ಶರಣಬಸಪ್ಪ ಬಿಳಿಎಲೆ ಅವರು ಜಿಲ್ಲೆಯ ಅಭಿವೃದ್ಧಿ ಅವಲೋಕನ ಕುರಿತು ಮಾತನಾಡಿ, ಭತ್ತದ ನಾಡು ಗಂಗಾವತಿಯಲ್ಲಿ ಭತ್ತದ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು. ಗಂಗಾವತಿ ನಗರವನ್ನು ವಾಣಿಜ್ಯ ನಗರವನ್ನಾಗಿಸಬೇಕು. ಆರ್ಥಿಕ ಸೂಚ್ಯಂಕ ಅವಲೋಕಿಸಿದಾಗ ಹಿಂದುಳಿದಿದ್ದೇವೆ. ಈ ಭಾಗದ ಪ್ರಸಿದ್ಧ ಅಂಜನಾದ್ರಿ ದೇವಸ್ಥಾನ, ಹುಲಿಗೆಮ್ಮ ದೇವಸ್ಥಾನ ಅಭಿವೃದ್ಧಿಗೆ ಒತ್ತು ನೀಡಿ ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಬೇಕಾಗಿದೆ ಎಂದು ಹೇಳಿದರು.
ಜಿಲ್ಲೆಯ ಸಾಹಿತ್ಯ ಅವಲೋಕನ ಕುರಿತು ಮಾತನಾಡಿದ ಪ್ರಾಧ್ಯಾಪಕ ಶಂಕ್ರಯ್ಯ ಅಬ್ಬಿಗೇರಿಮಠ, ವಚನಕಾರರು, ದಾಸರು, ತತ್ವಪದಕಾರರು, ಪ್ರವಚನಕಾರರು ತಮ್ಮದೆಯಾದ ಕೋಡುಗೆ ನೀಡಿದ್ದಾರೆ. ನವಲಿ ಭೋಗಾಪುರೇಶ ಸನ್ನಿಧಾನದಲ್ಲಿ ಗಲಗಲಿ ಅವ್ವನವರು(ರಮಾಬಾಯಿ) ಹಾಡುಗಳ ಮೂಲಕ ಜ್ಞಾನದ ಜಾಗೃತಿ ಮಾಡಿದರು.ಪುರಾಣ ಪ್ರವಚನಕಾರಿಂದಾಗಿ ಅಂದಿನಿಂದ ಇಂದಿನವರೆಗೂ ಶರಣಬಸವೇಶ್ವರರ ಪುರಾಣಗಳು ನಡೆಯುತ್ತಿವೆ. ಹೇರೂರ ವಿರುಪಣ್ಣ ತಾತ ನವರು ತತ್ವಪದಗಳ ಮೂಲಕ ಜನಮಾನಸದಲ್ಲಿ ಅಚ್ಚ ಅಳಿಯದೇ ಉಳಿದಿದ್ದಾರೆ ಎಂದರು.
ನಿವೃತ್ತ ಪ್ರಾಚಾರ್ಯ ಬಿಸಿ ಐಗೋಳ ಅಧ್ಯಕ್ಷತೆ ವಹಿಸಿದ್ದರು. ಮಹಾಬಳೇಶ ಅಂಗಡಿ, ಅರ್ಜುನ ನಾಯಕ, ಸಿ.ಕೆ. ಮರಿಸ್ವಾಮಿ, ರಾಜೇಶ್ವರಿ ಸುರೇಶ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ, ನರಸಿಂಗರಾವ ಕುಲಕರ್ಣಿ, ಪತ್ರಕರ್ತರಾದ ರವಿಕುಮಾರ, ಶರಣಪ್ಪ, ಟಾಕಪ್ಪ, ಮಂಜುನಾಥ ಚಿಕ್ಕೇನಕೋಪ್ಪ, ಅರುಣಕುಮಾರ ಇದ್ದರು.